ರಕ್ಷಿತಾ ಶೆಟ್ಟಿ ಈ ಹೆಸರನ್ನು ಬಹುತೇಕರು ಕೇಳಿಯೇ ಇರುತ್ತೀರಿ, ಹೌದು ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದಂತಹ ಬಿಗ್ಬಾಸ್ ಸೀಸನ್ 12 ರ ಬಲಿಷ್ಠ ಸ್ಪರ್ಧಿ ಆಗಿ ಗಮನ ಸೆಳೆದವರು. ಗಿಲ್ಲಿ ವಿಜೇತ ಆಗಿ ಫಿನಾಲೆ ಕಪ್ ಹೊಡೆದರೆ, ಮೊದಲ ರನ್ನರ್ ಅಪ್ ಆದವರು ಈ ಕ್ಯೂಟ್ ಸ್ಪರ್ಧಿ ರಕ್ಷಿತಾ ಶೆಟ್ಟಿ. ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಇವರು ಹೆಚ್ಚು ಪ್ರಸಿದ್ದಿ ಪಡೆದಿದ್ದು ಇವರ ಯೂಟ್ಯೂಬ್ ಚಾನೆಲ್ ಮೂಲಕ. ತಮ್ಮದೇ ಆದ ವಿಭಿನ್ನ ಶೈಲಿಯ ಮಾತುಗಾರಿಕೆ ಮೂಲಕ ಹೆಚ್ಚು ಹೆಸರು ಮಾಡಿ, ಆಪಾರ ಅಭಿಮಾನಿ ಬಳಗ ಹೊಂದಿದ ಸೋಶಿಯಲ್ ಮೀಡಿಯಾ ವ್ಲಾಗರ್. ಅವರದೇ ಆದ ಶೈಲಿಯ ಕ್ಯೂಟ್ ಮಾತುಗಾರಿಕೆ ಸಾಕಷ್ಟು ಜನರಿಗೆ ಹೆಚ್ಚು ಇಷ್ಟವಾಗಿತ್ತು. ಸದಾ ಅವರ ಫಾಲೋವರ್ಸ್ ನ ರಂಜಿಸುತ್ತಲೇ ಇದ್ದಂಥವರುರಕ್ಷಿತಾ ಶೆಟ್ಟಿ. ಮೀನಿನ ಅಡುಗೆ ಮಾಡುತ್ತ ಅವರದೇ ಆದ ರೀತಿಯಲ್ಲಿ ವಿಡಿಯೋ ಮಾಡಿಕೊಂಡು ಖುಷಿಯಾಗಿದ್ದು, ಅಷ್ಟೇ ಫೇಮಸ್ ಕೂಡ ಆಗಿದ್ದರು.
ರಕ್ಷಿತಾ ಶೆಟ್ಟಿ ಬಳಿಕ ಬಿಗ್ಬಾಸ್ ಮನೆಗೆ ಬರುವಲ್ಲಿಯೂ ಯಶಸ್ವಿ ಆದವರು. ರಕ್ಷಿತಾ ಬಿಗ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಮೊದಲ ವಾರದಲ್ಲೇ ಅವರು ಮನೆಗೆ ವಾಪಸ್ ಬಂದಿದ್ದು ಪ್ಲಸ್ ಪಾಯಿಂಟ್ ಆಗಿ, ಮತ್ತೆ ಬಿಗ್ ಮನೆಗೆ ಮರಳಿ ಬಂದು ಕೊನೆಯವರೆಗೂ ಆಟ ಆಡುವುದಕ್ಕೆ ಸಹಾಯ ಆಯಿತು. ಹಾಗೆ ರನ್ನರ್ ಅಪ್ ಆಗಿದ್ದು ಕೂಡ ನೀವು ನೋಡಿದ್ರಿ. ಬಿಗ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಸರು ಹೆಚ್ಚು ಓಡಾಡ ತೊಡಗಿತು. ಹೊರಗಡೆ ಅಷ್ಟೇ ಅಪಾರ ಅಭಿಮಾನಿ ಬಳಗ ಸಹ ಗಳಿಸಿಕೊಂಡರು. ಬಿಗ್ಬಾಸ್ ನೋಡುವ ಪ್ರೇಕ್ಷಕರಿಗೆ ರಕ್ಷಿತಾ ಆಟವೂ ಸಹ ಇಷ್ಟ ಆಗಿತ್ತು. ಒಂದು ಕಡೆ ಟ್ರೊಲ್ ಕೂಡ ಆಗುತ್ತಿದ್ದರು. ಹುಚ್ಚಿಯಂತೆ ಆಡುತ್ತಾಳೆ ಎಂದು ಹಲವರ ಅಭಿಪ್ರಾಯ ಸಹ ಕಂಡು ಬಂದಿದ್ದು, ಇವರ ಆ ಹುಚ್ಚುತನದ ಆಟದ ಶೈಲಿಯೇ ಇವ್ರಿಗೆ ಅದ್ಭುತ ಸ್ಪರ್ಧಿಯಾಗಿ ಹೊರ ಹೊಮ್ಮಲು ಸಹಾಯ ಮಾಡಿತು ಎನ್ನಬಹುದು.
ಇದೀಗ ರಕ್ಷಿತಾ ಶೆಟ್ಟಿ ಅವರು ನಮ್ಮ ಸಪ್ತಾಶ್ವ ಕನ್ನಡ ಟಿವಿ ಜೊತೆ ಎಕ್ಸ್ಕ್ಲೂಸಿವ್ ಆಗಿ ಸಮಯ ಕೊಟ್ಟು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರ ಜೀವನದ ಶೈಲಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆ ಊರಲ್ಲಿ ಹೇಗೆ ಇರುತ್ತೇನೆ ಎಂದು ಹೇಳಿಕೊಂಡರು. ರಕ್ಷಿತಾ ಶೆಟ್ಟಿ ಅವರ ಮಾತುಗಾರಿಕೆ ಅದ್ಭುತ. ಅವರ ಪಟಪಟ ಮಾತುಗಾರಿಕೆ ನಿಜಕ್ಕೂ ನಮ್ಮ ತಂಡದವರಿಗೂ ಖುಷಿ ತಂದಿತು ಎನ್ನಬಹುದು. ಅವ್ರು ಹೇಳುವ ಹಾಗೆ, ರಕ್ಷಿತಾ ಶೆಟ್ಟಿ ಬಿಗ್ ಮನೆಯಲ್ಲಿ ಇದ್ದಾಗ ಹೆಚ್ಚು ಟ್ರೋಲ್ ಆಗಿದ್ದು ನಾನೇ ಎಂದರು. ನಮ್ಮ ತಂಡದ ಜೊತೆ ಸಂವಹನ ಮಾಡಿದ್ದು ಬಿಗ್ಬಾಸ್ ಮನೆಯ ಟ್ರೋಲ್ ಕ್ವೀನ್ ಅಷ್ಟೇ ಅಲ್ಲ ಟ್ರೋಲ್ ಕಿಂಗ್ ನಾನೇ ಎಂದು ಹೇಳಿ ನಗೆ ಬೀರಿದ್ದಾರೆ. ಜೊತೆಗೆ ಮೊದಲಿಗೆ ಅವಮಾನ ಅನಂತರ ಸನ್ಮಾನ ಎನ್ನುವ ವಿಚಾರದ ಬಗ್ಗೆ ಹೇಳಿಕೊಂಡರು. ನನ್ನ ಬಯೋದಲ್ಲಿ ಅದನ್ನೇ ಹಾಕಿಕೊಳ್ಳುತ್ತೇನೆ ಎಂದು ಖುಷಿ ವ್ಯಕ್ತಪಡಿಸಿದರು.
ಜನರು ನನ್ನ ಇಷ್ಟ ಪಟ್ಟಿದ್ದು ಹಾಗೆಯೇ ಎಂದು ತಮ್ಮ ಅಭಿಮಾನಿಗಳ ಬಗ್ಗೆಯೂ ರಕ್ಷಿತಾ ಶೆಟ್ಟಿ ಮನಬಿಚ್ಚಿ ಮಾತಾಡಿದ ಸಂತಸ ಕ್ಷಣ ಕಂಡು ಬಂದಿತು. ಹಾಗೇನೇ ಯಾಕೆ 'ಐದು ನೂರು' ರೂಪಾಯಿ ಮೀನು ತಿನ್ನುವುದಿಲ್ಲ ಎಂದು ಹೇಳಿದ್ದು, ನೂರು ರೂಪಾಯಿ ಮೀನು ತಿಂದರೆ ಏನೆಲ್ಲಾ ಲಾಭ ಎನ್ನುವ ಅಂಶವನ್ನು ಸಹ ನಮ್ಮ ಸಪ್ತಾಶ್ವ ಟಿವಿ ತಂಡದ ಜೊತೆ ರಕ್ಷಿತಾ ಶೆಟ್ಟಿ ಅವರ ವಿಚಾರವನ್ನು ತೆರೆದಿಟ್ಟಿದ್ದಾರೆ. ಅಸಲಿಗೆ ರಕ್ಷಿತಾ ಶೆಟ್ಟಿ ಯಾಕೆ ಜನರಿಗೆ ಅಷ್ಟು ಇಷ್ಟ ಆಗ್ತಾರೆ ಎನ್ನುವುದಕ್ಕೆ ನಮ್ಮ ಸಪ್ತಾಶ್ವ ಕನ್ನಡ ಟಿವಿ ತಂಡದ ಜೊತೆ ಮಾತನಾಡಿದ ಪರಿಯೇ ಎಲ್ಲವನ್ನೂ ಹೇಳುತ್ತದೆ. ಅವರ ಚಟಪಟ ಮಾತಿನ ಶೈಲಿ ನಿಮ್ಮನ್ನೂ ಸಹ ಒಂದು ಕ್ಷಣ ಬೆರಗು ಮಾಡುತ್ತದೆ. ಜೊತೆಗೆ ನಿಮ್ಮ ಮೊಗದಲ್ಲಿಯೂ ನಗೆಯನ್ನು ತರಿಸುತ್ತೆ ಎಂದು ಹೇಳಬಹುದು.
ಬಿಗ್ಬಾಸ್ ರನ್ನರ್ ಅಪ್ ಆದಂತಹ ರಕ್ಷಿತಾ ಶೆಟ್ಟಿ ನಮ್ಮ ಸಪ್ತಾಶ್ವ ಕನ್ನಡ ಟಿವಿ ತಂಡದ ಜೊತೆ ಎಕ್ಸ್ಕ್ಲೂಸಿವ್ ಆಗಿ ಯಾವೆಲ್ಲಾ ವಿಷಯಗಳನ್ನು ಮಾತನಾಡಿದರು, ಅವರ ಪ್ರತಿನಿತ್ಯದ ಜೀವನ ಶೈಲಿಯ ಚಟುವಟಿಕೆಗಳ ಬಗ್ಗೆ ಏನೆಲ್ಲಾ ಹೇಳಿಕೊಂಡರು ಎಂದು ಇಲ್ಲಿರುವ ವಿಡಿಯೋ ಮೂಲಕ ನೀವು ತಿಳಿದುಕೊಳ್ಳಿ. ಒಮ್ಮೆ ವಿಡಿಯೋ ನೋಡಿ ರಕ್ಷಿತಾ ಶೆಟ್ಟಿ ಸಕತ್ ಆಗಿಯೇ ಮಾತನಾಡಿದ್ದಾರೆ. ಹಾಗೆ ಅವರ ಬಿಗ್ ಮನೆಯ ಆಟ ನಿಮಗೂ ಇಷ್ಟ ಆಗಿದ್ದು, ನೀವು ಅವರ ಅಭಿಮಾನಿ ಆಗಿದ್ದರೆ ವಿಡಿಯೊಗೊಂದು ತಪ್ಪದೆ ಮೆಚ್ಚುಗೆ ನೀಡಿ, ನಮ್ಮ ಸಪ್ತಾಶ್ವ ಕನ್ನಡ ಟಿವಿಗೆ ಪ್ರೋತ್ಸಾಹಿಸಿ ಧನ್ಯವಾದಗಳು.