ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಬಿಗ್‌ಬಾಸ್ ಸೀಸನ್ 12 ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಈ ಸೀಸನ್ ಮುಗಿದು ತಿಂಗಳುಗಳೇ ಕಳೆದಿದ್ದರೂ, ಸ್ಪರ್ಧಿಗಳ ಮೇಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದರಲ್ಲಿಯೂ 'ಮಂಡ್ಯದ ಹೈದ' ಗಿಲ್ಲಿಯ ಹವಾ ಎಲ್ಲೆಡೆ ಜೋರಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯೊಂದು ಬಿಗ್ ಬಾಸ್ ಅಭಿಮಾನಿಗಳಲ್ಲಿ ಆತಂಕ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ದೊಡ್ಮನೆಯಲ್ಲಿ ಆತ್ಮೀಯ ಗೆಳೆಯರಂತಿದ್ದ ಗಿಲ್ಲಿ ನಟ ಮತ್ತು ಮ್ಯೂಟಂಟ್ ರಘು ನಡುವೆ ಈಗ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸಾಮಾಜಿಕ ಜಾಲತಾಣಗಳೇ ಇಂದಿನ ಸ್ನೇಹ ಮತ್ತು ಸಂಬಂಧಗಳ ಅಳತೆಗೋಲು ಎನಿಸಿಕೊಂಡಿವೆ. ಇದೀಗ ಮ್ಯೂಟಂಟ್ ರಘು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟನನ್ನು ಅನ್‌ಫಾಲೋ ಮಾಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಮೊದಲಿನಿಂದಲೂ ಗಿಲ್ಲಿ ಅವರು ರಘು ಅವರ ಅಕೌಂಟ್ ಅನ್ನು ಫಾಲೋ ಮಾಡುತ್ತಿರಲಿಲ್ಲ. ಆದರೆ ರಘು ಮಾತ್ರ ಗಿಲ್ಲಿಯನ್ನು ಫಾಲೋ ಮಾಡುತ್ತಿದ್ದರು. ಈಗ ದಿಢೀರನೆ ರಘು ಕೂಡ ಗಿಲ್ಲಿಯನ್ನು ಅನ್‌ಫಾಲೋ ಮಾಡಿರುವುದು ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್‌ಬಾಸ್ ಮನೆಯೊಳಗೆ ಗಿಲ್ಲಿ, ರಘು ಮತ್ತು ರಕ್ಷಿತಾ ಶೆಟ್ಟಿ ನಡುವೆ ಒಂದು ಸುಂದರ ಸ್ನೇಹವಿತ್ತು. ಕೆಲವೊಮ್ಮೆ ಸಣ್ಣಪುಟ್ಟ ಕಿತ್ತಾಟಗಳಾದರೂ, ಅವರು ಉತ್ತಮ ಒಡನಾಟವನ್ನೇ ಹೊಂದಿದ್ದರು. ಗಿಲ್ಲಿ ಮೇಲೆ ರಘು ಆಗಾಗ್ಗೆ ಮುನಿಸಿಕೊಳ್ಳುತ್ತಿದ್ದರೂ, ಹೊರಗೆ ಬಂದ ಮೇಲೆ ಈ ಸ್ನೇಹ ಮುಂದುವರಿಯುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಇತ್ತೀಚೆಗೆ ನಡೆದ 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲೂ ಈ ಮೂವರು ಜೊತೆಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಆದರೆ ಈಗಿನ ಈ ಡಿಜಿಟಲ್ ಅಂತರವು ಅನೇಕ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಯ ಪ್ರಕಾರ, ಗಿಲ್ಲಿಯ ಜನಪ್ರಿಯತೆಯನ್ನು ರಘು ಮತ್ತು ರಕ್ಷಿತಾ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಹಳೆಯವು. ಗಿಲ್ಲಿ ನಟ ನಿಜವಾಗಿಯೂ ಅವರಿಗೆ ಕ್ಲೋಸ್ ಇಲ್ಲ, ಕೇವಲ ವಿಡಿಯೋಗಳಿಗಾಗಿ ಮಾತ್ರ ಅವರು ಜೊತೆಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿಂದೆ ಇಬ್ಬರೂ ಗಿಲ್ಲಿಯನ್ನು ಫಾಲೋ ಮಾಡುತ್ತಿಲ್ಲ ಎಂಬ ಮಾತು ಬಂದಾಗ, ಕೆಲವರು ಅದನ್ನು ಸುಳ್ಳು ಎಂದು ಸಾಬೀತುಪಡಿಸಿದ್ದರು. ಆದರೆ ಈಗ ರಘು ಅವರ ಈ ನಡೆ, ಹಳೆಯ ಗಾಸಿಪ್‌ಗಳಿಗೆ ಮರುಜೀವ ನೀಡಿದೆ.
ರಘು ಅವರ ಈ ನಡೆಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. "ನಾನು ಫಾಲೋ ಮಾಡಿದರೂ ಗಿಲ್ಲಿ ನನ್ನನ್ನು ಬ್ಯಾಕ್ ಫಾಲೋ ಮಾಡುತ್ತಿಲ್ಲ ಎನ್ನುವ ಅಸಮಾಧಾನ ರಘುಗೆ ಇರಬಹುದು, ಅದಕ್ಕೇ ಈ ರೀತಿ ಮಾಡಿದ್ದಾರೆ" ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವು ಗಿಲ್ಲಿ ಅಭಿಮಾನಿಗಳು "ಗಿಲ್ಲಿ ಹವಾ ನೋಡಿ ಸಹಿಸಿಕೊಳ್ಳಲು ಸಾಧ್ಯವಾಗದೆ ರಘು ಈ ರೀತಿ ಮಾಡುತ್ತಿದ್ದಾರೆ" ಎಂದು ಕಿಡಿಕಾರುತ್ತಿದ್ದಾರೆ. ಒಟ್ಟಾರೆಯಾಗಿ ರಘು, ಗಿಲ್ಲಿ ಮತ್ತು ರಕ್ಷಿತಾ ಅವರ 'ತ್ರಿಮೂರ್ತಿ' ಸ್ನೇಹ ಮುರಿದು ಬಿತ್ತು ಎಂದೇ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಕೇವಲ ತಾಂತ್ರಿಕ ಕಾರಣವೇ ಅಥವಾ ನಿಜವಾಗಿಯೂ ಮನಸ್ತಾಪವೇ ಎಂಬುದು ಇನ್ನು ನಿಗೂಢ. ಈ ಕುರಿತು ಗಿಲ್ಲಿಯಾಗಲಿ ಅಥವಾ ರಘು ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಕೋಟಿ ಕೋಟಿ ಜನರ ಪ್ರೀತಿ ಗಳಿಸಿದ ಈ ಗೆಳೆಯರು, ಸಣ್ಣ ಪುಟ್ಟ ಕಾರಣಗಳಿಗಾಗಿ ತಮ್ಮ ಸ್ನೇಹವನ್ನು ಹಳಸಿಕೊಳ್ಳಬಾರದು ಎಂಬುದು ವೀಕ್ಷಕರ ಆಶಯವಾಗಿದೆ.