ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ಬಾಸ್ ಕಾರ್ಯಕ್ರಮ ಈಗಾಗಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಅಷ್ಟೇ ಜನಪ್ರಿಯತೆ ಪಡೆದುಕೊಂಡಿದೆ. ಹೌದು ಸೀಸನ್ 12 ರ ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಸಹ ನಿನ್ನೆಯಷ್ಟೇ ಮುಗಿದಿದ್ದು ಗಿಲ್ಲಿ ಫೈನಲ್ ನಲ್ಲಿ ಗೆದ್ದು ಬಿಗಿದ್ದಾನೆ. ಈ ಗೆಲುವು ನಿಜ ಸರಿ ಇದೆ ಎಂದು ಸಾಕಷ್ಟು ಬಿಗ್ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ಬಡವರ ಮಕ್ಕಳು ಬೆಳೆಯಲಿ ಎಂದು ಗಿಲ್ಲಿಗೆ ಹಾರೈಸುತ್ತಿದ್ದರೆ, ಇನ್ನು ಕೆಲವ್ರು ಗಿಲ್ಲಿ ಗೆಲವು ಅಷ್ಟು ಸಮಂಜಸ ಅಲ್ಲ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಗಮನ ಸೆಳೆದಿರುವ ಬಿಗ್ ಬಾಸ್ ಕಾರ್ಯಕ್ರಮ ನಿನ್ನೆಯಷ್ಟೇ ಮುಗಿದಿದೆ. ಸೀಸನ್ 12 ರಲ್ಲಿ ಗಿಲ್ಲಿ ನಟ ಗೆದ್ದು ಬಿಗಿದ್ದಾರೆ. ಗಿಲ್ಲಿ ನಟ ಈ ಬಾರಿ ಗೆಲ್ಲಲೇ ಬೇಕು ಎಂದು ಅವರ ಅಪಾರ ಅಭಿಮಾನಿ ಬಳಗದವರು ಹೆಚ್ಚು ಪ್ರಚಾರ ಮಾಡಿದರು ಎಂದು ಹಲವರು ಅಭಿಪ್ರಾಯ ಹೇಳಿಕೊಂಡಿದ್ದಾರೆ. ಜೊತೆಗೆ ಅಷ್ಟೇ ಅದ್ಭುತವಾಗಿ ಬಿಗ್ ಬಾಸ್ ಮನೆಯಲ್ಲಿ ಗೆಲ್ಲಿ ಆಡಿದ್ದು ಕೂಡ ಸತ್ಯ. ಗಿಲ್ಲಿ ನಟ ಕೇವಲ ಟಾಸ್ಕ್ ನಲ್ಲಿ ಮಾತ್ರವಲ್ಲದೆ, ಅದ್ಭುತ ವ್ಯಕ್ತಿತ್ವದ ಜೊತೆ ಆಟದ ವೈಖರಿಯನ್ನು ಅರ್ಥ ಮಾಡಿಕೊಂಡು ಆಟವಾಡಿದರು ಎನ್ನಬಹದು.
ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಎಲ್ಲರನ್ನು ರಂಜಿಸಿ ಹೊರಗಡೆ ಕೂಡ ಅಪಾರ ಅಭಿಮಾನಿ ಬಳಗ ಪಡೆದುಕೊಳ್ಳುವಲ್ಲಿ ಗಿಲ್ಲಿ ಯಶಸ್ವಿಯಾದರು, ಅದರಂತೆ ನಿನ್ನೆ ನಡೆದ ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಕಪ್ಪನ್ನು ಗೆದ್ದುಕೊಂಡು ಹೋದರು. ಹೌದು ಬಿಗ್ ಬಾಸ್ ಮನೆಯಿಂದ ಗೆದ್ದು ಹೊರ ಬಂದಿರುವ ಗಿಲ್ಲಿ ಅವರು ಬಂದ ಕೂಡಲೇ ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡಿದರು. ಶಿವಣ್ಣ ಹಾಗೂ ಅನುಶ್ರೀ ಜೊತೆಗೆ ದರ್ಶನ್ ಅವರ ಫ್ಯಾನ್ಸ್ ನೀಡಿದ ಪ್ರೋತ್ಸಾಹ ಬಗ್ಗೆಯೂ ಹೇಳಿ ಗಿಲ್ಲಿ ಖುಷಿ ಪಟ್ಟರು.
ಹೌದು ಸುದೀಪಣ್ಣ ನನ್ನ ಕೈ ಹಿಡಿದುಕೊಂಡಾಗ ಒಂದು ಕ್ಷಣ ಶಾಕ್ ಆಯ್ತು ಒಂದು ಕ್ಷಣ ಎದೆ ಚಳಕ್ ಎಂದಿತು. ಇಷ್ಟು ಕ್ರೇಜು ಹೊರಗಡೆ ಇದೆ ಎಂಬುದಾಗಿ ನನಗೆ ಗೊತ್ತಾಗಲಿಲ್ಲ, ಇದು ನಿಜಾನೋ ಸುಳ್ಳು ಎಂದು ನನ್ನ ಮೈ ನಾನೇ ಗಿಂಡಿಕೊಂಡು ನೋಡಿದೆ, ಹೊರಗಡೆ ತೋರಿಸುತ್ತಿರುವ ಜನರ ಪ್ರೀತಿಯನ್ನು ನಾನು ಎಂದೂ ತೀರಿಸಲು ಸಾಧ್ಯವಿಲ್ಲ, ಇದು ನನ್ನ ಪುಣ್ಯ ಅನ್ನಿಸುತ್ತೆ, ನನ್ನ ತಂದೆ ತಾಯಿ ಮಾಡಿರುವ ಪುಣ್ಯ ಅನಿಸುತ್ತೆ ಎಂದರು. ಹೌದು ಸೀಸನ್ 12ರ ವಿಜೇತರಾಗಿ ಗಿಲ್ಲಿ ಹೊರಹೊಮ್ಮಿರುವುದು ನಿಮಗೂ ಕೂಡ ಖುಷಿ ಇದೆಯಾ? ಗಿಲ್ಲಿ ಅವರು ನನಗೆ ನಂಬಲು ಆಗುತ್ತಿಲ್ಲ, ಅಷ್ಟು ಪ್ರೀತಿ ಕೊಡುತ್ತಾರೆ ಜನರು ಅಂದುಕೊಂಡಿರಲಿಲ್ಲ ಏಳರಿಂದ ಎಂಟು ವಾರಕ್ಕೆ ಹೊರಗಡೆ ಬರುತ್ತೇನೆ ಅಂದುಕೊಂಡಿದ್ದೆ ನಿಜಕ್ಕೂ ನನ್ನ ಪುಣ್ಯ, ತುಂಬಾ ಜನರು ಪ್ರೋತ್ಸಾಹ ನೀಡಿದ್ದಾರೆ, ಅವರ ಋಣ ನಾನು ತೀರಿಸಲು ಸಾಧ್ಯವಿಲ್ಲ ಅವರಿಗೆ ನಾನು ಚಿರಋಣಿಯಾಗಿ ಇರುತ್ತೇನೆ ಎಂದು ಖುಷಿಯಿಂದಲೇ ತಮ್ಮ ಗೆಲುವನ್ನ ಸಂಭ್ರಮಿಸಿದರು ಗಿಲ್ಲಿ.