ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಗಮನ ಸೆಳೆದಿರುವ ಬಿಗ್ ಬಾಸ್ ಕಾರ್ಯಕ್ರಮ ಸೀಸನ್ 12 ನಿನ್ನೆಯಷ್ಟೇ ಮುಗಿದಿದೆ. ಹೌದು ಈ ಬಾರಿಯ ವಿನ್ನರ್ ಆಗಿ ಗಿಲ್ಲಿ ನಟ ಗೆದ್ದು ತಮ್ಮ ಖದರ್ ಮೂಡಿಸಿದ್ದಾರೆ. ಆರಂಭದ ದಿನದಿಂದಲೂ ಗಿಲ್ಲಿ ಅವರೆ ಗೆಲ್ಲುತ್ತಾರೆ ಎಂದು ಸಾಕಷ್ಟು ಅವರ ಅಭಿಮಾನಿಗಳು ಹೇಳುತ್ತಿದ್ದರು. ಅವರ ನಟನೆ, ಅವರ ಕಾಮಿಡಿ ಝಲಕ್ ಬಿಗ್ ಬಾಸ್ ಮನೆಯಲ್ಲೂ ಕೂಡ ವರ್ಕ್ ಔಟ್ ಆಗಿದ್ದು ಸೀಸನ್ 12ರ ವಿಜೇತರಾಗಿ ಹೊರಹಮ್ಮಿದ್ದಾರೆ. ಇದು ಒಂದು ಕಡೆ ಖುಷಿ ವಿಚಾರ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಅವರ ಅಭಿಮಾನಿಗಳು ಸಂತಸದಲ್ಲಿ ತೇಲಾಡುತ್ತಿದ್ದಾರೆ.
ಹೌದು ಗಿಲ್ಲಿ ಹೊರಗಡೆ ಬರುತ್ತಿದ್ದಂತೆಯೇ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ಬಿಗ್ ಬಾಸ್ ಮನೆಯೊಳಗಿನ ನಂಟು, ಅವರಾಡಿದ ಆಟಗಳು ಹೇಗೆ ವ್ಯಕ್ತಿತ್ವದ ಆಟದಲ್ಲಿ ಆಡಬೇಕು ಎನ್ನುವ ಅವರ ವಿಚಾರ ಎಲ್ಲವೂ ಕೂಡ ನಿನ್ನೆಯ ಪಿನಾಲೆ ವೇದಿಕೆಯ ಮೂಲಕ ಗೆದ್ದು ಹೊರಹೊಮ್ಮಿದ್ದು ಮತ್ತೊಮ್ಮೆ ಹೀಗೆ ಆಟ ಆಡಬೇಕು ಎಂಬುದಾಗಿ ತೋರಿಸಿದ್ದಾರೆ. ಗಿಲ್ಲಿ ನಟ ಹೇಳಿದ ಹಾಗೆ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಅವರ ಋಣ ತೀರಿಸಲಿಕ್ಕೆ ಆಗುವುದಿಲ್ಲ, ದೊಡ್ಡ ದೊಡ್ಡ ಸ್ಟಾರ್ ನಟರು ಪ್ರೋತ್ಸಾಹ ನೀಡಿರುವುದು ನಿಜಕ್ಕೂ ನನ್ನ ಪುಣ್ಯ, ಅದನ್ನ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಜೊತೆಗೆ ಶಿವಣ್ಣ ಅವರ ಪ್ರೋತ್ಸಾಹದ ಮಾತುಗಳು, ಜಗ್ಗೇಶ್ ಅವರನ್ನು ನೆನೆಸಿಕೊಂಡ ಗಿಲ್ಲಿ, ದರ್ಶನ್ ಅವರ ಜೊತೆಗಿನ ಒಡನಾಟ ಹಂಚಿಕೊಂಡರು. ದರ್ಶನ್ ಅವರೇಷ್ಟು ಸರಳ ವ್ಯಕ್ತಿ ಎಂಬುದಾಗಿ ಹೇಳಿಕೊಂಡರು. ಪ್ರಾಪರ್ಟಿ ಕಾಮಿಡಿ ಮಾಡಿದ ವಿಚಾರ ದರ್ಶನ್ ಅವರ ಬಾಯಲ್ಲಿ ಬರುತ್ತದೆ ಎಂದರೆ ನನ್ನ ಪುಣ್ಯ ಎಂದು ಖುಷಿಯನ್ನ ಹಂಚಿಕೊಂಡರು. ಬಳಿಕ ಗಿಲ್ಲಿಗೆ ಕಾವ್ಯ ಜೊತೆ ಮದುವೆ ಮಾಡಿಸುತ್ತಾರಂತೆ ಮಂಡ್ಯ ಹೈಕಳು ಎನ್ನುವ ಪ್ರಶ್ನೆಗೆ, ಗೊತ್ತಿಲ್ಲ ಅಣ್ಣ ಕಂಕಣ ಕೂಡಿ ಬರಬೇಕು ಎಂದರು. ಬಳಿಕ ನಿಮಗೆ ಕಾವ್ಯ ಅವರ ಮೇಲೆ ಲವ್ ಆಗಿದ್ದು ನಿಜಾನಾ ಎನ್ನುವ ಪ್ರಶ್ನೆಗೆ ಅಲ್ಲಿಂದ ಕಾಲ್ ಕಿತ್ತಾ ಗಿಲ್ಲಿ ತದನಂತರದಲ್ಲಿ ಪ್ರತಿಕ್ರಿಯೆ ನೀಡಿ ಇಲ್ಲ ಕಾವ್ಯ ಅವರು ಒಳ್ಳೆಯ ಸ್ನೇಹಿತರು ಸ್ನೇಹಿತರಾಗಿ ಇರುತ್ತಾರೆ ಎಂದುಕೊಂಡಿದ್ದೇನೆ ಎಂದು ಸಿಂಪಲ್ ಆಗಿ ಉತ್ತರ ನೀಡಿದ್ದಾರೆ..