Jan 25, 2026 Languages : ಕನ್ನಡ | English

ನಿಜವಾದ ವಿನ್ನರ್ ನಾನೇ - ಗಿಲ್ಲಿ ವಿರುದ್ಧ ಅಶ್ವಿನಿ ಗೌಡ ಮಾತು!! ಕಿಚ್ಚ ಸುದೀಪ್ ಬಗ್ಗೆ ನಿರಾಶೆ!!

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಮುಗಿದರೂ ವಿವಾದ ಇನ್ನೂ ಮುಂದುವರಿಯುತ್ತಿದೆ. ಗಿಲ್ಲಿ ನಟ ಟ್ರೋಫಿ ಹಾಗೂ ನಗದು ಬಹುಮಾನ ಗೆದ್ದರೆ, ಎರಡನೇ ರನ್ನರ್-ಅಪ್ ಅಶ್ವಿನಿ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶ್ವಿನಿ ಅವರು ಹೇಳಿದಂತೆ “ನಿಜವಾದ ವಿಜೇತೆ ನಾನು” ಎಂದು ಹೇಳಿ, ಗಿಲ್ಲಿ ಸಹಾನುಭೂತಿ ಆಧಾರದ ಮೇಲೆ ಜಯ ಸಾಧಿಸಿದ್ದಾರೆ ಎಂದು ಆರೋಪಿಸಿದರು. ಅವರು “ಪೂರ್ ಕಾರ್ಡ್” ಆಡಿದ್ದಾರೆ, ಆದರೆ ನಿಜವಾಗಿಯೂ ಬಡವರೇ ಎಂಬ ಪ್ರಶ್ನೆ ಎತ್ತಿದರು.

ಗಿಲ್ಲಿ ನಟ ಜಯದ ಮೇಲೆ ಪ್ರಶ್ನೆ – ಮತದಾನ ಪಾರದರ್ಶಕತೆ ಬೇಡಿಕೆ
ಗಿಲ್ಲಿ ನಟ ಜಯದ ಮೇಲೆ ಪ್ರಶ್ನೆ – ಮತದಾನ ಪಾರದರ್ಶಕತೆ ಬೇಡಿಕೆ

ಹೌದು ಅಶ್ವಿನಿ ಅವರ ಮತದಾನ ಫಲಿತಾಂಶಗಳ ಬಗ್ಗೆ ಗಂಭೀರ ಆರೋಪ ಮಾಡಿದರು. “ನನಗೆ ಬಂದ ಮಾಹಿತಿಯ ಪ್ರಕಾರ ಮತಗಳಲ್ಲಿ ವ್ಯತ್ಯಾಸವಿದೆ. ನಿಜವಾದ ಸಂಖ್ಯೆಗಳು ಹೊರಬಂದರೆ ವಿಜೇತನ ಹೆಸರು ಬದಲಾಗುತ್ತದೆ” ಎಂದು ಹೇಳಿದರು. ಅವರು ಕಿಚ್ಚ ಸುದೀಪ್ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. “ಈ ಬಾರಿ ಮಹಿಳೆಯ ಕೈ ಎತ್ತುತ್ತಾರೆ ಎಂದು ಭಾವಿಸಿದ್ದೆ, ಆದರೆ ನಿರಾಶೆಗೊಂಡೆ” ಎಂದರು. ಗಿಲ್ಲಿ ನಟ ಶಾಂತವಾಗಿ ಪ್ರತಿಕ್ರಿಯಿಸಿ, “ಅವರು ನಿರಾಶೆಯಿಂದ ಹೇಳಿರಬಹುದು. ನಾನು ಮಾತಿನ ಯುದ್ಧಕ್ಕೆ ಇಳಿಯುವುದಿಲ್ಲ” ಎಂದಿದ್ದಾರೆ. 

ಗಿಲ್ಲಿ ಜಯವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಹುಟ್ಟೂರಿನಲ್ಲಿ ವಿಜಯ ಮೆರವಣಿಗೆ ನಡೆಯಿತು. ಟ್ರೋಫಿ, ನಗದು ಬಹುಮಾನ ಹಾಗೂ ಲಕ್ಸುರಿ ಕಾರು ಪಡೆದ ಅವರು ಕುಟುಂಬ ಮತ್ತು ಸಮುದಾಯಕ್ಕೆ ಬಳಸುವುದಾಗಿ ಹೇಳಿದರು. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು “ಟೀಮ್ ಅಶ್ವಿನಿ” ಮತ್ತು “ಟೀಮ್ ಗಿಲ್ಲಿ” ಎಂದು ವಿಭಜಿತರಾಗಿದ್ದಾರೆ. ಕೆಲವರು ಅಶ್ವಿನಿ ಅರ್ಹ ಸ್ಪರ್ಧಿ ಎಂದರೆ, ಇನ್ನು ಕೆಲವರು ಗಿಲ್ಲಿಯ ಸರಳತೆ ಮತ್ತು ಹಾಸ್ಯವೇ ಜಯಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಶೋ ನಿರ್ಮಾಪಕರು ಮತದಾನ ಪಾರದರ್ಶಕತೆ ಕುರಿತ ಬೇಡಿಕೆಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ವಿವಾದ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ. 

Latest News