Jan 25, 2026 Languages : ಕನ್ನಡ | English

ಗಿಲ್ಲಿ ಫಿನಾಲೆ ಗೆದ್ದರೂ ಅಶ್ವಿನಿ ಸೋಲಪ್ಪಿಕೊಳ್ಳುತ್ತಿಲ್ಲ - ಗೆದ್ದ ಗಿಲ್ಲಿ ಬಗ್ಗೆ ಆಡಿದ ಮಾತುಗಳು ವೈರಲ್!!

ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ತೆರೆ ಬಿದ್ದಿದೆ. ದಾಖಲೆ ಮಟ್ಟದ ಮತಗಳನ್ನು ಪಡೆದು ಗಿಲ್ಲಿ ಟ್ರೋಫಿ ಎತ್ತಿ ಹಿಡಿದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಭಿಮಾನಿಗಳು ಗಿಲ್ಲಿ ಗೆಲುವನ್ನು ಸಂಭ್ರಮಿಸುತ್ತಿರುವಾಗ, ರಕ್ಷಿತಾ ಫಸ್ಟ್ ರನ್ನರ್ ಅಪ್ ಆಗಿ, ಅಶ್ವಿನಿ ಗೌಡ ಸೆಕೆಂಡ್ ರನ್ನರ್ ಅಪ್ ಆಗಿ 14 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಹೌದು ಗಿಲ್ಲಿ ಕ್ರೇಜ್ ಬಗ್ಗೆ ಹೇಳಬೇಕಿಲ್ಲ. ಜನರ ಬೆಂಬಲವೇ ಅವರ ಗೆಲುವಿಗೆ ಕಾರಣವಾಗಿದೆ. ಆದರೆ ಅಶ್ವಿನಿ ಗೌಡ ಮಾತ್ರ ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಒಂದ್ಕಡೆ ಖುಷಿಯಿದೆ, ಮತ್ತೊಂದು ಕಡೆ ಬೇಸರವಿದೆ. ನಾನು ಟಾಪ್-2 ಫೈನಲಿಸ್ಟ್‌ಗಳಲ್ಲಿ ಇರ್ತೀನಿ ಅಂದುಕೊಂಡಿದ್ದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಿಲ್ಲಿ ಕ್ರೇಜ್, ಅಶ್ವಿನಿ ಅಸಮಾಧಾನ – ಫೈನಲ್ ನಂತರದ ಚರ್ಚೆಗಳು
ಗಿಲ್ಲಿ ಕ್ರೇಜ್, ಅಶ್ವಿನಿ ಅಸಮಾಧಾನ – ಫೈನಲ್ ನಂತರದ ಚರ್ಚೆಗಳು

ಅಶ್ವಿನಿ ಗಿಲ್ಲಿಯ ಆಟದ ಬಗ್ಗೆ ಪ್ರಶ್ನೆ ಎತ್ತಿ, “ನಿಜವಾದ ಬಡವ ಬೇರೆ, ಬಡವನಂತೆ ಗೆಟಪ್ ಹಾಕಿಕೊಂಡು ಬದುಕುವುದು ಬೇರೆ. ಬಡವ ಎನ್ನುವುದನ್ನು ಸ್ಟ್ರ್ಯಾಟರ್ಜಿ ಕಾರ್ಡ್ ಆಗಿ ಬಳಸಬಾರದು” ಎಂದು ಹೇಳಿದರು. ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಮತ್ತು ಜಾನ್ವಿ ಒಂದಾಗಿದ್ದಾಗ, ಗಿಲ್ಲಿ ಜೊತೆ ಸಂಘರ್ಷಗಳು ಹೆಚ್ಚಾಗಿದ್ದವು. ಮಾತಿಗೆ ಮಾತು ಬೆಳೆಯುತ್ತಾ ಕೆಲವೊಮ್ಮೆ ತಾರಕಕ್ಕೇ ಏರಿತ್ತು. ಗಿಲ್ಲಿ ಅವರಿಬ್ಬರ ಬಗ್ಗೆ ಕಾಮಿಡಿ ಮಾಡಿದಾಗ ವೀಕ್ಷಕರು ಅದನ್ನು ಎಂಜಾಯ್ ಮಾಡಿದ್ದರು. ಶೋ ಮುಗಿದರೂ, ಅಶ್ವಿನಿ ಮತ್ತು ಜಾನ್ವಿ ಗಿಲ್ಲಿ ವಿರುದ್ಧ ಹಗೆ ಸಾಧಿಸುತ್ತಿದ್ದಾರಾ ಎಂಬ ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಶ್ವಿನಿ ತಮ್ಮ ನೇರಾನೇರ ಮಾತುಗಳಿಂದಲೇ ಗಮನ ಸೆಳೆದಿದ್ದರು. “ಯುದ್ಧ ಮಾಡುವಾಗ ಕತ್ತಿ ಹಿಡ್ಕೊಂಡಿರ್ತೀವಿ, ಮುಗಿದ ಮೇಲೆ ಇಟ್ಟುಬಿಡ್ತೀವಿ. ಬಿಗ್‌ಬಾಸ್ ಮುಗಿದ ಮೇಲೆ ಕತ್ತಿ ಎತ್ತಿಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಅವರು ವಿವರಿಸಿದ್ದಾರೆ. ಆದರೆ ನೆಟ್ಟಿಗರು, “ಶೋ ಮುಗಿದಿದೆ ಎಂದು ಯಾರಾದರೂ ಆಕೆಗೆ ಹೇಳಿ” ಎಂದು ವ್ಯಂಗ್ಯ ಕಾಮೆಂಟ್ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಬಿಗ್‌ಬಾಸ್ ಮನೆಗೆ 18ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರ ಕೆಲವು ಮಾತುಗಳು ನೆಗೆಟಿವ್ ಆಗಿದ್ದರೂ, ಬಳಿಕ ತಿದ್ದಿಕೊಳ್ಳಲು ಪ್ರಯತ್ನಿಸಿದರು. 

ತಮ್ಮ ಗತ್ತಿನ ಆಟದಿಂದ ಇತರೆ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಿದರು. ಕಿಚ್ಚನ ಚಪ್ಪಾಳೆ ಪಡೆದು ಹಿಗ್ಗಿದರೂ, ಕೊನೆಗೆ 3ನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು. ಅತ್ತ ಗಿಲ್ಲಿ ಜನರ ಬೆಂಬಲದಿಂದ ಶೋ ಗೆದ್ದಿದ್ದಾರೆ ಎಂಬುದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಅಶ್ವಿನಿ ಗೌಡ ಅವರ ಅಸಮಾಧಾನ, ಗಿಲ್ಲಿ ಕ್ರೇಜ್ ಬಗ್ಗೆ ಜಾನ್ವಿ ಮಾಡಿದ ವ್ಯಂಗ್ಯ ಒಟ್ಟಾರೆ ಬಿಗ್‌ಬಾಸ್ ಕನ್ನಡ ಸೀಸನ್ 12ರ ಫೈನಲ್ ಕೇವಲ ಗೆಲುವಿನ ಬಗ್ಗೆ ಮಾತ್ರವಲ್ಲ, ಉಳಿದಿರುವ ವಿವಾದಗಳ ಬಗ್ಗೆ ಕೂಡ ಚರ್ಚೆ ಆಗುತ್ತಿದೆ. ನಿಮ್ಮ ಪ್ರಕಾರ ಗಿಲ್ಲಿ ಗೆದ್ದಿರುವುದು ಸರಿ ಇದೆಯಾ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Latest News