ಕನ್ನಡ ಬಿಗ್‌ಬಾಸ್ ಸೀಸನ್ 12ರಲ್ಲಿ ಹೊಸ ತಿರುವು ತಂದಂಥಹ ಸ್ಪರ್ಧಿಗಳಲ್ಲಿ ರಕ್ಷಿತಾ ಮತ್ತು ಮ್ಯೂಟೆಂಟ್ ರಘು ಕೂಡ ಹೌದು. ರಕ್ಷಿತಾ ತನ್ನ ನೇರ ಮಾತು ಮತ್ತು ಧೈರ್ಯಶಾಲಿ ಸ್ವಭಾವದಿಂದ ಮನೆಮಂದಿಯ ಗಮನ ಸೆಳೆದಿದ್ದರು. ಬಿಗ್‌ಬಾಸ್ ಮನೆಯಲ್ಲಿ ಆಕೆಯ ಹಾಸ್ಯ, ಸ್ನೇಹಪರ ನಡವಳಿಕೆ ಮತ್ತು ಕೆಲವೊಮ್ಮೆ ತೀಕ್ಷ್ಣ ಪ್ರತಿಕ್ರಿಯೆಗಳು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿತ್ತು. ಮ್ಯೂಟೆಂಟ್ ರಘು ಸಹ – ತನ್ನ ವಿಭಿನ್ನ ಶೈಲಿ, ಅಸಾಮಾನ್ಯ ಆಲೋಚನೆಗಳು ಮತ್ತು ಮನರಂಜನಾತ್ಮಕ ವರ್ತನೆಯಿಂದ ಮನೆಯಲ್ಲಿ ಎಲ್ಲರಿಗೂ ವಿಭಿನ್ನ ಅನುಭವ ನೀಡಿದ್ದರು. ಇದೀಗ ಇಬ್ಬರು ಸೇರಿ ಅಡುಗೆ ಮಾಡಿದಂತಹ ಒಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಣ್ಣ–ತಂಗಿ ಸಂಬಂಧದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ರಘು ಮತ್ತು ರಕ್ಷಿತಾ ಶೆಟ್ಟಿ, ಇದೀಗ ಶೋ ಹೊರಗೆ ಮತ್ತೆ ಒಂದಾಗಿದ್ದಾರೆ. ರಘು ಆರಂಭಿಸಿರುವ ಹೊಸ ಯೂಟ್ಯೂಬ್ ಚಾನೆಲ್‌ನಲ್ಲಿ ರಕ್ಷಿತಾ ಶೆಟ್ಟಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡು, ಅಣ್ಣ–ತಂಗಿ ಸೇರಿ ಅಡುಗೆ ಮಾಡಿರುವ ವಿಡಿಯೋ ಭರ್ಜರಿ ವೈರಲ್ ಆಗಿದೆ. ರಘು ಮನೆಯಲ್ಲೇ ಶೂಟ್ ಮಾಡಿದ ಈ ಅಡುಗೆ ವಿಡಿಯೋ ಕೇವಲ ಕೆಲ ದಿನಗಳಲ್ಲಿ 9.6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ರಘು ಪಾಲಿಗೆ ರಕ್ಷಿತಾ “ಭಾಗ್ಯಲಕ್ಷ್ಮೀ” ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯಲ್ಲೇ ಫೇಮಸ್ ಆದ ಮೊಟ್ಟೆ ಮತ್ತು ಆಲೂಗಡ್ಡೆ ಪಾಕ ವಿಧಾನ ರೆಸಿಪಿಯನ್ನು ರಘು ಹಂಚಿಕೊಂಡಿದ್ದಾರೆ. ಕಡಿಮೆ ಪದಾರ್ಥಗಳಲ್ಲಿ, ಸುಲಭವಾಗಿ ಮಾಡುವ ಈ ರೆಸಿಪಿಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. “ಬಿಗ್ ಬಾಸ್ ಮನೆಯ ವೈಬ್, ನನ್ನ ಸ್ಟೈಲ್ ಮತ್ತು ಫುಲ್ ಟೇಸ್ಟ್ ಗ್ಯಾರಂಟಿ” ಎಂದು ರಘು ಹೇಳಿದ್ದಾರೆ. ವಿಡಿಯೋಗೆ ಬಂದಿರುವ ಕಾಮೆಂಟ್‌ಗಳಲ್ಲಿ ಅಭಿಮಾನಿಗಳು ಅಣ್ಣ–ತಂಗಿ ಜೋಡಿಯನ್ನು ಹಾರೈಸಿದ್ದು, ಇವರ ಸ್ನೇಹ, ಪ್ರೀತಿ ಮತ್ತು ನೈಸರ್ಗಿಕ ಬಾಂಧವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿಜವಾದ ಬಿಗ್ ಬಾಸ್ ವಿನ್ನರ್ ನೀವೇ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ರಘು ಅವರ ಯೂಟ್ಯೂಬ್ ಪ್ರಯಾಣಕ್ಕೆ ಶುಭಾಶಯ ಕೋರಿದ್ದಾರೆ.