ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಚ್ಚುವ ಘಟನೆಗಳು ಮತ್ತು ರೇಬೀಸ್‌ನಿಂದ ಉಂಟಾಗುತ್ತಿರುವ ಸಾವಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಹೊಸ ಪರಿಹಾರ ಯೋಜನೆಯನ್ನು ಘೋಷಿಸಿದೆ. ನವೆಂಬರ್ 2025ರಿಂದ ರಾಜ್ಯಾದ್ಯಂತ ಜಾರಿಗೆ. ಈ ಯೋಜನೆಯ ಉದ್ದೇಶ ಬಾಧಿತ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು. ಬೆಂಗಳೂರಿನಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಈ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಾಯಿ ಕಡಿತಕ್ಕೆ ಒಳಗಾದವರ ಸಂಖ್ಯೆಯು ಸಹ ಹೆಚ್ಚುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಸಹ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತಾಗಿ ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗೆ ಪರಿಹಾರ ಧನ ನೀಡಬೇಕು ಎನ್ನುವ ಅಂಶ ಈ ಲೇಖನದಲ್ಲಿ ನೀವು ಕಾಣಬಹುದು.
ಸಾವಿನ ಪ್ರಕರಣಗಳಿಗೆ ಪರಿಹಾರ
ಹೊಸ ನಿಯಮಗಳ ಪ್ರಕಾರ, ನಾಯಿ ಕಚ್ಚಿದ ಪರಿಣಾಮವಾಗಿ ಸಾವಿಗೀಡಾದವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಬಾಧಿತ ಕುಟುಂಬದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಿಂದ ಬಾಧಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ದೊರೆಯುತ್ತದೆ.
ಗಾಯಗೊಂಡವರಿಗೆ ಪರಿಹಾರ
ಒಂದು ವೇಳೆ ನಾಯಿ ಅಲ್ಪ ಪ್ರಮಾಣದಲ್ಲಿ ಕಚ್ಚಿ ಸಾವಿನ ಪ್ರಕರಣಗಳ ಹೊರತಾಗಿ, ಗಂಭೀರ ಗಾಯಗೊಂಡವರಿಗೆ ₹5,000 ಪರಿಹಾರ ನೀಡಲಾಗುತ್ತದೆ. ಇದರಲ್ಲಿ ₹3,500 ನೇರವಾಗಿ ಬಾಧಿತರಿಗೆ ನೀಡಲಾಗುತ್ತದೆ ಮತ್ತು ಉಳಿದ ₹1,500ನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಜಮೆ ಮಾಡಿ ಚಿಕಿತ್ಸೆ ವೆಚ್ಚಕ್ಕೆ ಬಳಸಲಾಗುತ್ತದೆ.
ಪರಿಶೀಲನಾ ಸಮಿತಿ
ಪರಿಹಾರವನ್ನು ತ್ವರಿತವಾಗಿ ವಿತರಿಸಲು ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಿದೆ. ಈ ಸಮಿತಿ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಬಾಧಿತರಿಗೆ ಪರಿಹಾರ ಬಿಡುಗಡೆ ಮಾಡುವ ಜವಾಬ್ದಾರಿ ಹೊಂದಿದೆ. ಇದರಿಂದ ವಿಳಂಬ ಕಡಿಮೆಯಾಗುತ್ತದೆ ಮತ್ತು ಪಾರದರ್ಶಕತೆ ಹೆಚ್ಚುತ್ತದೆ.
ಉದ್ದೇಶ ಮತ್ತು ಮಹತ್ವ
ಈ ಯೋಜನೆಯ ಮೂಲಕ ಸರ್ಕಾರವು ನಕಲಿ ದಾವೆಗಳನ್ನು ತಡೆಯಲು, ನಿಜವಾದ ಬಾಧಿತರಿಗೆ ಮಾತ್ರ ನೆರವು ತಲುಪಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಜನರ ಆರೋಗ್ಯ ಮತ್ತು ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಒಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಹೊಸ ಪರಿಹಾರ ಯೋಜನೆ ನಾಯಿ ಕಚ್ಚಿದ ಪ್ರಕರಣಗಳಲ್ಲಿ ಬಾಧಿತ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ವೈದ್ಯಕೀಯ ಸಹಾಯ ಒದಗಿಸುತ್ತದೆ. ಸಾವಿನ ಪ್ರಕರಣಗಳಿಗೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹5,000 ಪರಿಹಾರ ನೀಡುವ ಮೂಲಕ ಸರ್ಕಾರವು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಿದೆ. ಹೌದು ಬೆಂಗಳೂರು ನಗರದಲ್ಲಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದರಿಂದ ಇಲ್ಲಿ ಹೆಚ್ಚು ಗಮನ ಸೆಳೆಯಲಾಗಿದೆ. ಆದರೆ, ಈ ಪರಿಹಾರ ಯೋಜನೆ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಎಂದು ಕೇಳಿ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಯ ಜನತೆ ಈ ಘಟನೆ ನಡೆದಿದ್ದೇ ಆದ್ರೆ ಇದನ್ನು ಸದುಪಯೋಗ ಪಡಿಸಕೊಳ್ಳಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ಅನ್ವಯಿಸುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆ ಮತ್ತು ಪರಿಹಾರ ವಿತರಣೆ ಪ್ರಕ್ರಿಯೆ ಸ್ಥಳೀಯ ನಗರಸಭೆ, ಪಂಚಾಯಿತಿ ಅಥವಾ ಜಿಲ್ಲಾ ಆಡಳಿತ ಮೂಲಕ ನಡೆಯುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವೈದ್ಯಕೀಯ ವೆಚ್ಚದ ಭಾಗವನ್ನು ನಿರ್ವಹಿಸಲಾಗುತ್ತದೆ. ಈ ನಿಯಮಗಳು ರಾಜ್ಯಮಟ್ಟದವಾಗಿದ್ದು, ಕೇವಲ ಬೆಂಗಳೂರು ಮಾತ್ರವಲ್ಲ. ಕರ್ನಾಟಕದ ಎಲ್ಲೆಡೆ ಬೀದಿ ನಾಯಿ ಕಚ್ಚಿದ ಪ್ರಕರಣಗಳಲ್ಲಿ ಬಾಧಿತರಿಗೆ ಪರಿಹಾರ ದೊರೆಯುತ್ತದೆ ಎಂದು ಕೇಳಿ ಬಂದಿದೆ.