ಹೋಳಿ ಹಬ್ಬದ ಸಂಭ್ರಮದಲ್ಲಿರುವ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕಾಗಿ ಬೆಂಗಳೂರು ಹಾಗೂ ವಿಶಾಖಪಟ್ಟಣ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಲಾಗಿದ್ದು, ಅದರೊಂದಿಗೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ರಮುಖ ರೈಲುಗಳಿಗೆ ನಿಲುಗಡೆ ಕಲ್ಪಿಸಲಾಗಿದೆ.
ಹೋಳಿ ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ ವಿಸ್ತರಣೆ
ಹಬ್ಬದ ಸಮಯದಲ್ಲಿ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ, ಎಸ್‌ಎಂವಿಟಿ ಬೆಂಗಳೂರು (SMVT Bengaluru) ಮತ್ತು ವಿಶಾಖಪಟ್ಟಣ ನಡುವಿನ ವಿಶೇಷ ರೈಲುಗಳ ಸೇವೆಯನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
- ರೈಲು ಸಂಖ್ಯೆ 08581 (ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು): ಈ ವಾರಾಂತ್ಯದ ಎಕ್ಸ್‌ಪ್ರೆಸ್ ರೈಲು (ಭಾನುವಾರ ಸಂಚಾರ) ಈಗ ಮಾರ್ಚ್ 29 ರವರೆಗೆ ಲಭ್ಯವಿರಲಿದೆ.
- ರೈಲು ಸಂಖ್ಯೆ 08582 (ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ): ಈ ರೈಲು (ಸೋಮವಾರ ಸಂಚಾರ) ಮಾರ್ಚ್ 30 ರವರೆಗೆ ತನ್ನ ಸೇವೆಯನ್ನು ಮುಂದುವರಿಸಲಿದೆ.
ನಾಯಂಡಹಳ್ಳಿ ನಿಲ್ದಾಣದಲ್ಲಿ ಈಗ 4 ಪ್ರಮುಖ ರೈಲುಗಳ ನಿಲುಗಡೆ!
ಬೆಂಗಳೂರಿನ ನಾಯಂಡಹಳ್ಳಿ ಭಾಗದ ನಿವಾಸಿಗಳಿಗೆ ಮತ್ತು ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನುಕೂಲವಾಗುವಂತೆ, ನೈಋತ್ಯ ರೈಲ್ವೆಯು ಇಂದಿನಿಂದಲೇ ಜಾರಿಗೆ ಬರುವಂತೆ ಪ್ರಮುಖ ನಾಲ್ಕು ರೈಲುಗಳಿಗೆ (ಒಟ್ಟು 8 ಸಂಚಾರಗಳು) ಪ್ರಾಯೋಗಿಕವಾಗಿ ತಲಾ ಒಂದು ನಿಮಿಷದ ನಿಲುಗಡೆ ನೀಡಿದೆ.
ನಾಯಂಡಹಳ್ಳಿಯಲ್ಲಿ ನಿಲ್ಲುವ ರೈಲುಗಳ ಸಮಯ ಹೀಗಿದೆ:
- ಚಾಮುಂಡಿ ಎಕ್ಸ್‌ಪ್ರೆಸ್ (ಮೈಸೂರು-ಕೆಎಸ್‌ಆರ್ ಬೆಂಗಳೂರು - 16215)ಬೆಳಿಗ್ಗೆ 8.45
ಚಾಮುಂಡಿ ಎಕ್ಸ್‌ಪ್ರೆಸ್ (ಕೆಎಸ್‌ಆರ್ ಬೆಂಗಳೂರು–ಮೈಸೂರು - 16216)ಸಂಜೆ 6.39 - ಬಸವ ಎಕ್ಸ್‌ಪ್ರೆಸ್ (ಮೈಸೂರು-ಬಾಗಲಕೋಟೆ - 17307)ಮಧ್ಯಾಹ್ನ 3.16
ಬಸವ ಎಕ್ಸ್‌ಪ್ರೆಸ್ (ಬಾಗಲಕೋಟೆ-ಮೈಸೂರು - 17308)ಬೆಳಿಗ್ಗೆ 8.19 - ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ (16235)ಬೆಳಿಗ್ಗೆ 6.49
ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ (16236)ರಾತ್ರಿ 8.14 - ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (ಮೈಸೂರು-ಫಂಡರಾಪುರ - 16535)ಸಂಜೆ 5.40
ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (ಫಂಡರಾಪುರ–ಮೈಸೂರು - 16536)ಬೆಳಿಗ್ಗೆ 7.44
ಪ್ರಯಾಣಿಕರ ಗಮನಕ್ಕೆ:
ಈ ನಿಲುಗಡೆಗಳನ್ನು ಪ್ರಸ್ತುತ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಅವರು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ, ಈ ನಿಲುಗಡೆಯನ್ನು ಕಾಯಂ ಮಾಡುವ ಬಗ್ಗೆ ರೈಲ್ವೆ ಇಲಾಖೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ನಾಯಂಡಹಳ್ಳಿ ಸುತ್ತಮುತ್ತಲಿನ ಜನರು ಇನ್ಮುಂದೆ ಮೆಜೆಸ್ಟಿಕ್ ಅಥವಾ ಕೆಂಗೇರಿವರೆಗೆ ಹೋಗುವ ಬದಲು ತಮ್ಮ ಹತ್ತಿರದ ನಿಲ್ದಾಣದಲ್ಲೇ ಈ ರೈಲುಗಳನ್ನು ಏರಬಹುದಾಗಿದೆ.ರೈಲು ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ಕೋರಲಾಗಿದೆ.