ದೇಶದ ಯುವಶಕ್ತಿಯೇ ಭಾರತದ ಅತ್ಯಂತ ಪ್ರಬಲ ಶಕ್ತಿ ಹಾಗೂ ಹಳ್ಳಿಗಳೇ ರಾಷ್ಟ್ರದ ನಿಜವಾದ ಜೀವಾಳ ಎಂಬ ದೃಢ ನಂಬಿಕೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ವಿಶಿಷ್ಠವಾದ ‘ವಿಕಸಿತ್ ವೈಬ್ರಂಟ್ ವಿಲೇಜ್-2026’ (Viksit Vibrant Village 2026) ಕಾರ್ಯಕ್ರಮದ ಮುಖೇನ ದೇಶದ ನಾನಾ ಭಾಗಗಳ ಯುವಜನರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಅಧಿಕೃತವಾಗಿ ತಿಳಿಸಿದ್ದಾರೆ.
ಗಡಿ ಭಾಗದ ಗ್ರಾಮಗಳ ಸಮಗ್ರ ಅಭಿವೃದ್ಧಿ ಮತ್ತು ಯುವ ಸಮುದಾಯವನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಮಹತ್ವದ ಕಾರ್ಯಕ್ರಮದ ಕುರಿತು ರಾಜಧಾನಿ ಹೊಸದಿಲ್ಲಿಯಲ್ಲಿ ಸಚಿವರು ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಭಾರತದ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ, ದೇಶದ ಮೂಲೆಮೂಲೆಗಳಿಂದ ಆಯ್ಕೆಯಾದ ಆಯ್ದ 400ಕ್ಕೂ ಹೆಚ್ಚು ಪ್ರತಿಭಾವಂತ ಯುವ ಜನರು ನೇsರವಾಗಿ ಭಾಗಿಯಾಗಲಿದ್ದಾರೆ.
ಈ ಐತಿಹಾಸಿಕ ಸಂವಾದಕ್ಕಾಗಿ ದೇಶಾದ್ಯಂತ ಆನ್‌ಲೈನ್ ಮೂಲಕ ಬೃಹತ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಯುವಜನರ ಪೈಕಿ ಕಠಿಣ ಸ್ಪರ್ಧೆಯ ಬಳಿಕ ಅಂತಿಮವಾಗಿ ಅತ್ಯಂತ ಪ್ರತಿಭಾವಂತರಾದ 400 ಅರ್ಹ ವಿದ್ಯಾರ್ಥಿ ಹಾಗೂ ಯುವಜನರನ್ನು ಈ ಸಂವಾದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಜೂನ್ 4 ರಿಂದ ಜೂನ್ 30 ರವರೆಗೆ ‘ವಿಕಸಿತ್ ವೈಬ್ರಂಟ್ ವಿಲೇಜ್ ಪ್ರೋಗ್ರಾಂ-2026’ ಅನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಪ್ರಮುಖ 74 ವೈಬ್ರಂಟ್ ಗಡಿ ಗ್ರಾಮಗಳನ್ನು ಸಂಪರ್ಕಿಸಿ, ಅಲ್ಲಿಯ ಭೌಗೋಳಿಕ ಪರಿಸ್ಥಿತಿ ಹಾಗೂ ವಾಸ್ತವತೆಯನ್ನು ಅರಿತುಕೊಳ್ಳುವ ಅರ್ಹ ಯುವಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಭಾರತದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ವಿಶಿಷ್ಠ ಭೂದೃಶ್ಯ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಗಡಿ ನಿವಾಸಿಗಳ ಅಭಿವೃದ್ಧಿ ಆಕಾಂಕ್ಷೆಗಳಿಗೆ ನೇರವಾಗಿ ಸ್ಪಂದಿಸುವ ದಿಸೆಯಲ್ಲಿ ಈ ಕಾರ್ಯಕ್ರಮವು ಭಾರತ ಸರ್ಕಾರದ ಅತ್ಯಂತ ವಿಶಿಷ್ಠ ಹಾಗೂ ಐತಿಹಾಸಿಕ ಹೆಗ್ಗುರುತಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ಜುಲೈ 26 ರಂದು ಸಂಜೆ 4:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸಿಂಗ್ (Video Conferencing) ಮೂಲಕ 'ವಿಕಸಿತ್ ವೈಬ್ರಂಟ್ ವಿಲೇಜ್-2026' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮವು ಕೇವಲ ಒಂದು ಸಂವಾದ ಸಭೆಯಷ್ಟೇ ಅಲ್ಲದೆ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಹತ್ವಾಕಾಂಕ್ಷೆಯಂತೆ ರಾಷ್ಟ್ರೀಯ ಏಕೀಕರಣ (National Integration) ಮತ್ತು ದೇಶದ ಗಡಿ ಗ್ರಾಮಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವ ಪ್ರಮುಖ ನಿದರ್ಶನವಾಗಿದೆ.
ಈ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಭಾರತದ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ, ದೇಶದ ಮೂಲೆಮೂಲೆಗಳಿಂದ ಆಯ್ಕೆಯಾದ ಆಯ್ದ 400ಕ್ಕೂ ಹೆಚ್ಚು ಪ್ರತಿಭಾವಂತ ಯುವ ಜನರು ನೇsರವಾಗಿ ಭಾಗಿಯಾಗಲಿದ್ದಾರೆ. ದೇಶದ ಗಡಿ ಭಾಗದ ಗ್ರಾಮಗಳನ್ನು ಬರೀ ಕೊನೆಯ ಹಳ್ಳಿಗಳೆಂದು ಭಾವಿಸದೆ, ಅವುಗಳನ್ನು 'ರಾಷ್ಟ್ರದ ಮೊದಲ ಗ್ರಾಮಗಳು' (First Villages of the Nation) ಎಂದು ಪರಿಗಣಿಸಬೇಕು ಮತ್ತು ಮುಂಬರುವ 'ವಿಕಸಿತ್ ಭಾರತ' (Viksit Bharat) ನಿರ್ಮಾಣದತ್ತ ಸಾಗುವ ಹೆಮ್ಮೆಯ ಪ್ರಯಾಣದಲ್ಲಿ.
ಆ ಗ್ರಾಮಗಳ ಜನತೆ ಹಾಗೂ ಯುವಕರನ್ನು ಸಕ್ರಿಯ ಪಾಲುದಾರರನ್ನಾಗಿಸಬೇಕು ಎಂಬ ಪ್ರಧಾನಿ ಅವರ ಮಹಾನ್ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 'ಮೈ ಭಾರತ್' (My Bharat) ವೇದಿಕೆ ಮೂಲಕ ಜಾರಿಗೆ ತರಲಾದ ಈ ವಿಕಸಿತ್ ವೈಬ್ರಂಟ್ ವಿಲೇಜ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪುನರುಚ್ಚರಿಸಿದ್ದಾರೆ. ಈ ವಿಶಿಷ್ಠ ಕಾರ್ಯಕ್ರಮವು ದೇಶದ ಯುವಕರಲ್ಲಿ ದೇಶಭಕ್ತಿ, ನಾಯಕತ್ವ ಗುಣ ಹಾಗೂ ಗಡಿ ಪ್ರದೇಶಗಳ ಬಗ್ಗೆ ಕಾಳಜಿಯನ್ನು ಮತ್ತಷ್ಟು ಹೆಚ್ಚಿಸಲಿದೆ.