Dec 16, 2025 Languages : ಕನ್ನಡ | English

ಕೆಲಸ ಹುಡುಕುತ್ತಿದ್ದವರಿಗೆ ಇದು ಸುವರ್ಣ ಅವಕಾಶ! ಈ ಉದ್ಯೋಗ ಮೇಳಕ್ಕೆ ಭೇಟಿ ನೀಡಿ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಹಲವು ಬಾರಿ ಉದ್ಯೋಗ ಮೇಳಗಳನ್ನು ಈಗಾಗಲೇ ಹೆಚ್ಚು ಬಾರಿ ಆಯೋಜಿಸಿದೆ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ಧರಿಸಿದೆ. ಈ ಮಹತ್ವದ ಕಾರ್ಯಕ್ರಮವು 2026ರ ಜನವರಿಯಲ್ಲಿ ನಡೆಯಲಿದ್ದು, ವಿದೇಶಿ ಕಂಪನಿಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರ ನೇಮಕಾತಿಗೆ ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಜಾಬ್ ಮೇಳದ ಅಸಲಿ ಉದ್ದೇಶವೇನು ಅಂದರೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಮೇಳವನ್ನು ಆಯೋಜಿಸುತ್ತಿದ್ದು, ವಿದೇಶಿ ಕಂಪನಿಗಳಲ್ಲಿ ನುರಿತ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದೇ ಇದರ ಮುಖ್ಯ ಗುರಿಯಾಗಿದೆ. ವಿಶೇಷವಾಗಿ ಯುರೋಪಿಯನ್, ಗಲ್ಫ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ದಾದಿಯರು, ಆರೈಕೆದಾರರು, ಪ್ಲಂಬರ್‌ಗಳು, ಬಡಗಿಗಳು, ಮೆಕ್ಯಾನಿಕ್‌ಗಳು ಮತ್ತು ಇತರ ನುರಿತ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಮೇಳವು ಅವರಿಗೆ ಉತ್ತಮ ಅವಕಾಶವನ್ನು ನೀಡಲಿದೆ ಎಂದೆನ್ನಬಹದು. 

Job Fair
Job Fair

ಈ ವಿಭಾಗದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು, ಭಾರತವು ಪ್ರಬಲ ಮಾನವ ಸಂಪನ್ಮೂಲವನ್ನು ಹೊಂದಿದೆ ಮತ್ತು ಅನೇಕ ದೇಶಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಜನವರಿ 2026ರಲ್ಲಿ ಬೆಂಗಳೂರಿನಲ್ಲಿ ಮೆಗಾ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ನ್ಯೂಸ್ ಮಾದ್ಯಮದ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಇಲಾಖೆಯು ಈಗಾಗಲೇ ಕಾನ್ಸುಲೇಟ್‌ಗಳನ್ನು ಸಂಪರ್ಕಿಸುತ್ತಿದ್ದು, ಕಂಪನಿಗಳು ಮತ್ತು ಏಜೆನ್ಸಿಗಳನ್ನು ಇಮೇಲ್ ಮೂಲಕ ಸಂಪರ್ಕಿಸುವುದರ ಜೊತೆಗೆ ಕೆಲವು ದೇಶಗಳಲ್ಲಿ ರೋಡ್‌ಶೋಗಳನ್ನು ನಡೆಸುತ್ತಿದೆ. ಜೊತೆಗೆ ಇದಕ್ಕೆ ಬೇಕಾದ ತರಬೇತಿ ನೀವು ಪಡೆದುಕೊಳ್ಳಿ. ಕೇರಳ ಮಾದರಿಯಿಂದ ಪ್ರೇರಣೆ ಪಡೆದು ಕರ್ನಾಟಕದಲ್ಲಿ ತರಬೇತಿ ಪಡೆದ ದಾದಿಯರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ನರ್ಸಿಂಗ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ರಾಜ್ಯವು ಡಿಪ್ಲೊಮಾ ಮತ್ತು ಅಲ್ಪಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡುವ ಜಿಟಿಟಿಸಿ ಕೇಂದ್ರಗಳನ್ನು ಹೊಂದಿದೆ. 

ಎರಡು ಕೇಂದ್ರಗಳಲ್ಲಿ ಜರ್ಮನ್ ಪ್ರಯೋಗಾಲಯಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿದ್ದು, ಅಲ್ಲಿ ಜರ್ಮನ್ ಭಾಷಾ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ನೇಮಕಾತಿಗೆ ಮೊದಲು ಒಂದು ವರ್ಷದ ಭಾಷಾ ತರಬೇತಿಯನ್ನು ಪಡೆಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ತರಬೇತಿ ಮೂಲಭೂತ ಭಾಷಾ ಕಲಿಕೆಗೆ ಮಾತ್ರ ಸೀಮಿತವಾಗದೆ, ರೋಗಿಗಳು ಮತ್ತು ವೃದ್ಧರೊಂದಿಗೆ ಸಂವಹನ ನಡೆಸುವ ಮಟ್ಟದ ಪ್ರಾವೀಣ್ಯತೆ ಪಡೆಯಲು ಸಹಾಯ ಮಾಡಲಿದೆ. ಪರೀಕ್ಷೆಗಳ ಮೂಲಕ ಭಾಷಾ ಪ್ರಮಾಣಪತ್ರಗಳನ್ನು ನೀಡಲಾಗುವುದು. ಒಟ್ಟಿನಲ್ಲಿ, ಈ ಅಂತಾರಾಷ್ಟ್ರೀಯ ಉದ್ಯೋಗ ಮೇಳವು ನುರಿತ ಕಾರ್ಮಿಕರಿಗೆ ವಿದೇಶಿ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ವದ ವೇದಿಕೆಯಾಗಲಿದೆ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಲಿದೆ ನೋಡಿ ಸದುಪಯೋಗ ಪಡಿಸಿಕೊಳ್ಳಿ.

Latest News