Feb 16, 2026 Languages : ಕನ್ನಡ | English

ಪೆಹಲ್ಗಾಂ ದಾಳಿಯ ಕಿಚ್ಚು ಆರಿಲ್ಲ - ಮೈದಾನದಲ್ಲೇ 'ಸೇಡಿನ' ಸಂದೇಶ!!

ಟಿ20 ವಿಶ್ವಕಪ್ ಟೂರ್ನಿಯ ಅತ್ಯಂತ ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಆರಂಭದಲ್ಲೇ ಸಂಚಲನಕ್ಕೆ ಸಾಕ್ಷಿಯಾಗಿದೆ. ಮೈದಾನದಲ್ಲಿ ಬ್ಯಾಟ್ ಹಾಗೂ ಬಾಲ್ ಮೂಲಕ ಫೈಟ್ ನಡೆಯುವ ಮುನ್ನವೇ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕನಿಗೆ ಹಸ್ತಲಾಘವ (Handshake) ಮಾಡಲು ನಿರಾಕರಿಸುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.

“ನೋ ಹ್ಯಾಂಡ್‌ಶೇಕ್” ನೀತಿ ಮುಂದುವರಿಸಿದ ಟೀಂ ಇಂಡಿಯಾ ನಾಯಕ – ಅಭಿಮಾನಿಗಳ ಬೆಂಬಲ
“ನೋ ಹ್ಯಾಂಡ್‌ಶೇಕ್” ನೀತಿ ಮುಂದುವರಿಸಿದ ಟೀಂ ಇಂಡಿಯಾ ನಾಯಕ – ಅಭಿಮಾನಿಗಳ ಬೆಂಬಲ

ಟಾಸ್ ವೇಳೆ ನಡೆದಿದ್ದೇನು?

ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯದ ಟಾಸ್ ಪ್ರಕ್ರಿಯೆ ನಡೆಯುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ಜರುಗಿದೆ. ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಸಾಮಾನ್ಯವಾಗಿ ಟಾಸ್ ಮುಗಿದ ಬಳಿಕ ಉಭಯ ನಾಯಕರು ಪರಸ್ಪರ ಹಸ್ತಲಾಘವ ಮಾಡುವ ಸಂಪ್ರದಾಯವಿದೆ. ಆದರೆ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕನತ್ತ ಕೈ ಚಾಚದೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.

ಈ ಹಿಂದೆ 2025ರ ಏಷ್ಯಾಕಪ್ ವೇಳೆ ತೆಗೆದುಕೊಂಡಿದ್ದ 'ನೋ ಹ್ಯಾಂಡ್‌ಶೇಕ್' ನಿರ್ಧಾರವನ್ನು ಸೂರ್ಯ ಈ ವಿಶ್ವಕಪ್‌ನಲ್ಲೂ ಮುಂದುವರಿಸಿದ್ದಾರೆ. ಇದು ಕೇವಲ ಕ್ರೀಡೆಯಲ್ಲ, ದೇಶದ ಭಾವನೆ ಎಂಬ ಸಂದೇಶವನ್ನು ಅವರು ಮೈದಾನದಲ್ಲಿ ಸಾರಿದ್ದಾರೆ.

ಪೆಹಲ್ಗಾಂ ದಾಳಿ: ಮರೆಯದ ನೋವು, ಮುಗಿಯದ ಸೇಡು

ಭಾರತ ತಂಡದ ಈ ದಿಟ್ಟ ನಿರ್ಧಾರದ ಹಿಂದೆ ಕಾಶ್ಮೀರದ ಪೆಹಲ್ಗಾಂನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನೋವಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ನಡೆಸಿದ ಆ ದಾಳಿಯ ನಂತರ, ಭಾರತವು ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡುವುದಿಲ್ಲ ಎಂದು ಕಟ್ಟುನಿಟ್ಟಿನ ನಿರ್ಧಾರ ಮಾಡಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಅನಿವಾರ್ಯವಾಗಿ ಪಂದ್ಯಗಳನ್ನು ಆಡಲಾಗುತ್ತಿದೆ.

ದೇಶದ ಜನರ ಭಾವನೆಗಳಿಗೆ ಬೆಲೆ ನೀಡಿರುವ ಟೀಂ ಇಂಡಿಯಾ, "ದಾಳಿ ಮತ್ತು ಕ್ರಿಕೆಟ್ ಜೊತೆಜೊತೆಗೆ ಸಾಗಲು ಸಾಧ್ಯವಿಲ್ಲ" ಎಂಬುದನ್ನು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ

ಸೂರ್ಯಕುಮಾರ್ ಅವರ ಈ ನಡೆಯ ಬಗ್ಗೆ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆ ಶುರುವಾಗಿದೆ:

  • ಅಭಿಮಾನಿಗಳ ಬೆಂಬಲ: "ನಮ್ಮ ಯೋಧರ ಪ್ರಾಣಕ್ಕಿಂತ ಕ್ರೀಡೆ ದೊಡ್ಡದಲ್ಲ. ಸೂರ್ಯ ಮಾಡಿದ್ದು ಸರಿ," ಎಂದು ಅಪ್ಪು ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಭಾರತೀಯರು ಬೆಂಬಲ ಸೂಚಿಸಿದ್ದಾರೆ.
  • ವಿರೋಧ: ಮತ್ತೆ ಕೆಲವರು, "ಕ್ರೀಡೆಯಲ್ಲಿ ರಾಜಕೀಯ ತರುವುದು ಸರಿಯಲ್ಲ, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಟೀಂ ಇಂಡಿಯಾ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ.

ಇಂದಿನ ಪಂದ್ಯಕ್ಕೆ ಭಾರತದ ಬಲಿಷ್ಠ ಪ್ಲೇಯಿಂಗ್ 11

ಪಾಕ್ ವಿರುದ್ಧದ ಈ ಸಮರಕ್ಕೆ ಭಾರತ ಅತ್ಯಂತ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿದೆ:

ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

Latest News