ಕಿಚ್ಚನ ಅಭಿಮಾನಿಗಳಿಗೆ ಬಿಗ್ ಸರ್​​ಪ್ರೈಸ್ - ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ ಸುದೀಪ್!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಇವತ್ತು ಒಂದು ಸೂಪರ್ ನ್ಯೂಸ್ ಸಿಕ್ಕಿದೆ. ಇಷ್ಟು ದಿನ ಸ್ಯಾಂಡಲ್‌ವುಡ್‌ನಿಂದ ಕೊಂಚ ಬ್ರೇಕ್ ತಗೊಂಡಿದ್ದ ಕಿಚ್ಚ, ಈಗ ಮತ್ತೆ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಸುದೀಪ್ ಅವರ ಮುಂಬರುವ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಸ್ವತಃ ಕಿಚ್ಚನೇ ಟ್ವಿಟರ್ (X) ಮೂಲಕ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ ಕಿಚ್ಚ | Photo Credit: https://x.com/KicchaSudeep
ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ ಕಿಚ್ಚ | Photo Credit: https://x.com/KicchaSudeep

‘ಮಾರ್ಕ್’ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ಸುದೀಪ್ ಅವರು ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ತಗೊಂಡಿದ್ದರು. ಕಿಚ್ಚ ಯಾಕೆ ಸೈಲೆಂಟ್ ಆಗಿದ್ದಾರೆ, ಮುಂದಿನ ಸಿನಿಮಾ ಯಾವುದು, ಶೂಟಿಂಗ್ ಯಾವಾಗ ಶುರುವಾಗುತ್ತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದಿನಾ ಪ್ರಶ್ನೆ ಮಾಡ್ತಲೇ ಇದ್ರು. ಈಗ ಫ್ಯಾನ್ಸ್‌ನ ಈ ಎಲ್ಲಾ ಪ್ರಶ್ನೆಗಳಿಗೆ ಸುದೀಪ್ ಖುದ್ದಾಗಿ ಉತ್ತರ ನೀಡುವ ಮೂಲಕ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.

ಟ್ವಿಟರ್‌ನಲ್ಲಿ ಕಿಚ್ಚ ಬರೆದ ಭಾವನಾತ್ಮಕ ಪೋಸ್ಟ್

ಟ್ವಿಟರ್‌ನಲ್ಲಿ ಒಂದು ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರೋ ಸುದೀಪ್, ಅಭಿಮಾನಿಗಳ ಮೇಲಿರೋ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. "ನಿಮ್ಮ ಪ್ರೀತಿಯನ್ನು ನಾನೆಂದೂ ಲಘುವಾಗಿ ತಗೊಂಡಿಲ್ಲ. ನಿಮ್ಮೆಲ್ಲರ ಮಾತುಗಳು ನನಗೆ ಕೇಳಿಸುತ್ತಿವೆ. ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆ ಅಂದ ತಕ್ಷಣ, ನಿಮ್ಮ ಪ್ರೀತಿಯನ್ನಾಗಲಿ ಅಥವಾ ನನ್ನ ಈ ಸಿನಿಮಾಗಳ ವೃತ್ತಿಜೀವನವನ್ನಾಗಲಿ ನೆಗ್ಲೆಕ್ಟ್ ಮಾಡಿದ್ದೀನಿ ಅಂತ ಅಲ್ಲ. ನನಗೆ ಸಿನಿಮಾಗಳನ್ನು ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ನಿಮ್ಮನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ ನಾನು ಯಾವುದನ್ನೂ ಇಷ್ಟಪಡಲ್ಲ. ನೀವೆಲ್ಲ ನನ್ನನ್ನು ಇಷ್ಟು ಸೀರಿಯಸ್ ಆಗಿ ಕೇಳ್ತಿರೋದೇ ನನ್ನ ಕೆಲಸದ ಮೇಲಿರೋ ಪ್ರೀತಿಯನ್ನು ತೋರಿಸುತ್ತೆ, ಎಲ್ಲರಿಗೂ ಥ್ಯಾಂಕ್ಸ್" ಅಂತ ಕಿಚ್ಚ ಬರೆದುಕೊಂಡಿದ್ದಾರೆ.

ಬ್ರೇಕ್ ತಗೊಂಡಿದ್ದರ ಅಸಲಿ ಕಾರಣ ಏನು?

ಇದೇ ಪೋಸ್ಟ್‌ನಲ್ಲಿ ಸುದೀಪ್ ಇಷ್ಟು ದಿನ ಸಿನಿಮಾದಿಂದ ದೂರ ಉಳಿಯೋಕೆ ಅಸಲಿ ಕಾರಣ ಏನು ಅನ್ನೋದನ್ನೂ ಬಿಚ್ಚಿಟ್ಟಿದ್ದಾರೆ. "ನನ್ನ ಪ್ರೆಸೆನ್ಸ್ ಹಾಗೂ ಸಪೋರ್ಟ್ ಬೇಕಾಗಿದ್ದ ಕೆಲವು ಮುಖ್ಯವಾದ ವ್ಯಕ್ತಿಗಳು ಮತ್ತು ಪರಿಸ್ಥಿತಿಗಳು ಎದುರಾಗಿದ್ದವು. ಹಾಗಾಗಿ, ಈ ಸಣ್ಣ ಬ್ರೇಕ್‌ನಲ್ಲೂ ನಾನು ಒಂದು ಜವಾಬ್ದಾರಿಯುತ ಕೆಲಸದಲ್ಲೇ ಬ್ಯುಸಿಯಾಗಿದ್ದೆ" ಅಂತ ಹೇಳಿದ್ದಾರೆ.

ಜೂನ್ 26ರಿಂದ 'BRB' ಅಖಾಡಕ್ಕೆ ಕಿಚ್ಚ; 4 ಸ್ಕ್ರಿಪ್ಟ್ ಲಾಕ್!

ಕಿಚ್ಚನ ಈ ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ಅತಿ ದೊಡ್ಡ ಹಬ್ಬದ ಅಪ್‌ಡೇಟ್ ಅಂದ್ರೆ ಅದು ಅವರ ಮುಂದಿನ ಸಿನಿಮಾಗಳ ಲೈನ್‌ಅಪ್. ಹೌದು, ಇದೇ ತಿಂಗಳು ಜೂನ್ 26ರಿಂದ ಸುದೀಪ್ ಅವರ ಬಹುನಿರೀಕ್ಷಿತ ‘ಬಿಆರ್​​ಬಿ’ (BRB) ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಸ್ಟಾರ್ಟ್ ಆಗಲಿದೆ.

ಇಷ್ಟಕ್ಕೇ ಮುಗಿಯಲ್ಲ, ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡೋದಾಗಿ ಸುದೀಪ್ ಪ್ರಾಮಿಸ್ ಮಾಡಿದ್ದಾರೆ. ಈಗಾಗಲೇ ಅವರು 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು (ಕಥೆಗಳನ್ನು) ಓದಿ ಫೈನಲ್ ಮಾಡಿದ್ದಾರಂತೆ! ಈ ನಾಲ್ಕೂ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡೋಕೆ ತಾವೂ ಕೂಡ ಅಷ್ಟೇ ಎಕ್ಸೈಟ್ ಆಗಿದ್ದೀನಿ ಅಂತ ಸುದೀಪ್ ಹೇಳಿದ್ದಾರೆ.

ಇಷ್ಟು ದಿನ ಸುದೀಪ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಅಂತ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈ ಒಂದೇ ಒಂದು ಪೋಸ್ಟ್ ಈಗ ಡಬಲ್ ಧಮಾಕಾ ಕೊಟ್ಟಂತಾಗಿದೆ. ಜೂನ್ 26ರಿಂದ ಕಿಚ್ಚ ಮತ್ತೆ ಕ್ಯಾಮೆರಾ ಮುಂದೆ ನಿಲ್ಲುತ್ತಿರೋದು ಗಾಂಧಿನಗರದಲ್ಲೂ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ.

Latest News