Jan 25, 2026 Languages : ಕನ್ನಡ | English

ಈ ವಾರ ಪ್ರಭಲ ಸ್ಪರ್ಧಿಯೇ ಬಿಗ್ಬಾಸ್ ಮನೆಯಿಂದ ಔಟ್? ಶಾಕ್ ಆದ ಮನೆ ಮಂದಿ!!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಹೆಚ್ಚು ಗಮನ ಸೆಳೆದಿರುವ ಹಾಗೆ ಅತಿ ಹೆಚ್ಚು ಪ್ರೇಕ್ಷಕರು ಹುಚ್ಚು ಹಿಡಿಸಿಕೊಂಡಿರುವ ಬಿಗ್ಬಾಸ್ ಈ ಬಾರಿಯೂ ತನ್ನ ಮೇಲುಗೈ ಸಾಧಿಸಿದೆ ಎನ್ನಬಹುದು. ಆರಂಭದಿಂದಲೇ ಒಂದಲ್ಲ ಒಂದು ವಿಚಾರವಾಗಿ ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಸಹ ಸುದ್ದಿಯಲ್ಲಿದ್ದಾರೆ. ಈ ಬಾರಿ ಹೆಚ್ಚು ಫ್ಯಾನ್ಸ್ ಹೊಂದಿರುವ ಬಿಗ್ ಬಾಸ್ ಮನೆಯ ಗಿಲ್ಲಿ ಈ ಬಾರಿ ವಿಜೇತ ಆಗುತ್ತಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಭಾನುವಾರ ಬಿಗ್ಬಾಸ್ ಮನೆಯಿಂದ ಒಬ್ಬೊಬ್ಬರೇ ಹೊರ ಹೋಗುವುದು ಮಾಮೂಲಿ. ಕೆಲವೊಮ್ಮೆ ಇಬ್ಬರು ಸಹ ಎಲಿಮಿನೇಟ್ ಆಗಿ ಹೊರ ಹೋಗಿರೋದು ಇದೆ. ಸದ್ಯ ಸೀಸನ್ ೧೨ ಬಿಗ್ಬಾಸ್ ಕಾರ್ಯಕ್ರಮ ಹೆಚ್ಚು ಟಿ ಆರ್ ಪಿ ಪಡೆಯುತ್ತಿದ್ದು ನಂಬರ್ ಒನ್ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. 

ವಾರಾಂತ್ಯದ ಬಿಗ್‌ಬಾಸ್ ಎಪಿಸೋಡ್: ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆ?
ವಾರಾಂತ್ಯದ ಬಿಗ್‌ಬಾಸ್ ಎಪಿಸೋಡ್: ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆ?

ಹೀಗಿರುವಾಗ ಇನ್ನೇನು ಕೊನೆಯ  ಹಂತಕ್ಕೆ ಬಿಗ್ಬಾಸ್ ಆಟ ಬಂದು ನಿಂತಿದ್ದು,ಈ ವಾರ ಬಿಗ್ಬಾಸ್ ಮನೆಯಿಂದ ನಾಮಿನೇಟ್ ಆಗಿರುವ ಸ್ಪರ್ದಿಗಳು ಅಂದರೆ, ಗಿಲ್ಲಿ ನಟ, ಧ್ರುವಂತ್, ಸ್ಪಂದನಾ, ರಕ್ಷಿತಾ, ಸುರಜ್ ಸಿಂಗ್, ಮಾಳು, ರಘು, ಧನುಷ್ ಗೌಡ, ಅಶ್ವಿನಿ ಗೌಡ ಮತ್ತು ರಶಿಕಾ ಮುಂಚೂಣಿಯಲ್ಲಿದ್ದಾರೆ. ವಾರಾಂತ್ಯದ ಎಪಿಸೋಡ್‌ನಲ್ಲಿ ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಆತುರ ಹೆಚ್ಚಾಗಿದೆ. ಹೌದು ಈ ವಾರ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ಹೊರ ಹೊಮ್ಮಿದ್ದು, ಈ ಭಾನುವಾರ ಮನೆಯಿಂದ ಹೊರಹೋಗುವ ಸ್ಪರ್ಧಿಗಳ ಎಲಿಮಿನೇಷನ್ ಲಿಸ್ಟ್ ನಲ್ಲಿ ಗಿಲ್ಲಿ ಇದ್ದರೂ ಅವರು ಸೇಫ್ ಆಗ್ತಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. 

ಒಂದು ಕಡೆ ಗಿಲ್ಲಿ ಚೆನ್ನಾಗಿ ಆಟ ಆಡುತ್ತಿದ್ದರೆ, ಇನ್ನೊಂದು ಕಡೆ ಅಶ್ವಿನಿ ಅವರು ಸಹ ಸಕತ್ ಗಮನ ಸೆಳೆಯುತ್ತಿದ್ದಾರೆ. ಧ್ರುವಂತ್ ಸಹ ಅದ್ಭುತ ಆಟವಾಡುತ್ತಾ ಎಲ್ಲರ ಗಮನ ಸೆಳೆಯುತ್ತಲಿದ್ದಾರೆ ಎನ್ನಬಹುದು. ಹಾಗೆ ಬಿಗ್ಬಾಸ್ ಮನೆ ಹೊರಗಡೆ ಸಹ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಧ್ರುವಂತ್. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಟ್ಟು ಹತ್ತು ಸ್ಪರ್ಧಿಗಳು ಇದ್ದು ಅತಿ ಕಡಿಮೆ ಓಟ್ ಬಂದಿರುವ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಕಳಿಹಿಸುತ್ತಾರೆ. ಮಾಹಿತಿ ಬಂದಿರುವ ಪ್ರಾಕಾರ ಕಡಿಮೆ ಓಟ್ ಗಳಿಸಿರುವ ರಾಶಿಕ ಈ ವಾರ ಬಿಗ್ಬಾಸ್ ಮನೆಯಿಂದ ಹೊರ ಬರುವ ಸಾಧ್ಯತೆ ಹೆಚ್ಚಿದೆ. ಆದರೆ ಸ್ಪಂದನಾ ಅಥವಾ ಮಾಳು ಅಥ್ವಾ ರಕ್ಷಿತಾ ಹೊರ ಬಂದರೂ ಬರಬಹುದು ಎನ್ನಲಾಗಿದೆ. ಈ ನಾಲ್ಕು ಜನರಲ್ಲಿ ಒಬ್ಬರು ಈ ವಾರ ಎಲಿಮಿನೇಟ್ ಆಗಿ ಬಿಗ್ಬಾಸ್ ಮನೆಯಿಂದ ಔಟ್ ಆಗೋದಂತೂ  ಪಕ್ಕ ಆಗಿದೆ. ನಿಮ್ಮ ಪ್ರಕಾರ ಯಾರು ಈ ವಾರ ಬಿಗ್ ಮನೆಯಿಂದ ಔಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ... 

Latest News