Jan 25, 2026 Languages : ಕನ್ನಡ | English

ಇದ್ದಕಿದ್ದಂತೆಯೇ ಆಟದ ಶೈಲಿ ಬದಲಿಸಿಕೊಂಡ್ರಾ ಅಶ್ವಿನಿ ? ಮುಖವಾಡ ಕಳಚಿತು ಎಂದ ರಕ್ಷಿತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರ ಬರುತ್ತಿರುವಂತೆಯೇ ಸ್ಪರ್ಧಿಗಳ ವರ್ತನೆಯಲ್ಲಿ ಬದಲಾವಣೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ವಿಶೇಷವಾಗಿ ಅಶ್ವಿನಿ ಗೌಡ ಅವರ ಆಟ ಈಗ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹದು. ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅಶ್ವಿನಿ ಗೌಡ ಅವರು ಮೊದಲಿನಿಂದಲೂ ರಗಡ್ ಆಗಿ ಬಂದವರು, ತಮ್ಮ ಸ್ವಾಭಿಮಾನಕ್ಕೆ ಇಲ್ಲ ಗೌರವಕ್ಕೆ ಧಕ್ಕೆ  ಬಂದ್ರೆ ಸಿಡಿದೆದ್ದಿರುವ ಅಶ್ವಿನಿ ಗೌಡ ಅವರನ್ನ ನೋಡಿದ್ದೇವೆ, ಎಲ್ಲರ ಜೊತೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಡಿಕೊಂಡು ಬಂದಿರುವ ಇವರು ಈಗ ಫಿನಾಲೆ ಹತ್ರ ಬರುತ್ತಿದ್ದಂತೆಯೇ  ತಮ್ಮ ವರಸೆಯನ್ನ ಚೇಂಜ್ ಮಾಡಿದ್ರಾ, ಎಂಬ ಪ್ರಶ್ನೆ ಎದ್ದಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 12: ಅಶ್ವಿನಿ ಗೌಡ ಅವರ ಆಟದ ಬದಲಾವಣೆ
ಬಿಗ್ ಬಾಸ್ ಕನ್ನಡ ಸೀಸನ್ 12: ಅಶ್ವಿನಿ ಗೌಡ ಅವರ ಆಟದ ಬದಲಾವಣೆ

ಹೌದು ಮಹಿಳೆಯರ ಪರ ನಿಲ್ಲುತ್ತೇನೆ ಎಂದಿದ್ದ ಅಶ್ವಿನಿ ಗೌಡ, ವೀಕೆಂಡ್ ಎಪಿಸೋಡ್ ನಲ್ಲಿ ರಾಶಿಕಾ ಬಗ್ಗೆ ಅವಹೇಳನಕಾರಿಯಾಗಿ  ಮಾತುಗಳನ್ನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. 'ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು' ಎಂಬ ಇವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಶಿಕಾ ಅವ್ ಅವರು ಕೂಡ ಈ ಹೇಳಿಕೆಯನ್ನು ಖಂಡಿಸಿ, ಅಶ್ವಿನಿಗೆ ಸವಾಲು ಹಾಕಿದ್ದಾರೆ.  ಈಗ ಅದೇ ಅಶ್ವಿನಿ ಗೌಡ ಅವರು ಟಾಸ್ಕ್ ನಲ್ಲಿ ಎದುರಾಳಿಗೆ ನೀರು ಎರಚಿ ಕಂಬದಿಂದ ಕೈಬಿಡುವಂತೆ ಮಾಡಬೇಕು. ಆದರೆ ಅಶ್ವಿನಿ ಗೌಡ ರಾಶಿಕಾ ರವರ ಯೋಗಕ್ಷೇಮವನ್ನು ವಿಚಾರಿಸಿ, ಜೋರಾಗಿ ನೀರು ಎರಚದೆ, ನಿಧಾನವಾಗಿ ನೀರು ಹಾಕಿ ಆಟದ ಭರದಲ್ಲಿ ಯಾವ ವ್ಯಕ್ತಿತ್ವನಾ ಕೆಳಗೆ ಇಡಬಾರದು ಎಂದು ಹೇಳಿದ್ದಾರೆ.  

“ಅದು ನನ್ನ ವ್ಯಕ್ತಿತ್ವ ಅಲ್ಲ” ಎಂದು ಅಶ್ವಿನಿ ಹೇಳಿದರು. ಈ ಬದಲಾವಣೆಯನ್ನು ಗಮನಿಸಿದ ರಕ್ಷಿತಾ, ಮೊದಲಿನಿಂದ ಟ್ರಬಲ್ ಮಾಡಿ ಇವಾಗ ಟ್ರಬಲ್ ಮಾಡೋಕೆ ಮನಸಿಲ್ಲ ಎಂದು ಪ್ರಶ್ನಿಸಿ, “ಮುಖವಾಡ ಬದಲಿಸುತ್ತಾರೆ” ಎಂಬ ಅಭಿಪ್ರಾಯವನ್ನು ರಕ್ಷಿತಾ ಹೊರಹಾಕಿದ್ದಾರೆ. ಅನೇಕರು ಫಿನಾಲೆ ಸಮೀಪಿಸುತ್ತಿರುವುದರಿಂದ ಅಶ್ವಿನಿ ತಂತ್ರ ಬದಲಿಸಿಕೊಂಡಿದ್ದಾರೆ ಎಂದು ಊಹಿಸುತ್ತಿದ್ದಾರೆ. ಬಿಗ್ ಬಾಸ್ ಮನೆಗೆಲ್ಲಾ ಅಶ್ವಿನಿ ಗೌಡ ಅವರ ಈ ಹೊಸ ಶಾಂತ ಸ್ವಭಾವ ಚರ್ಚೆಗೆ ಕಾರಣವಾಗಿದ್ದು, ಫಿನಾಲೆ ಹತ್ತಿರದಲ್ಲಿ ಅವರ ಆಟ ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚುತ್ತಿದೆ.

ಮಹಿಳೆಯರ ಪರ ನಿಲ್ಲುತ್ತೇನೆ ಎಂದು ಘೋಷಿಸಿದರೂ, ರಾಶಿಕಾ ಬಗ್ಗೆ ನೀಡಿದ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಟ್ಟಿತು. ಆದರೆ, ನಂತರದ ಟಾಸ್ಕ್‌ನಲ್ಲಿ ಎದುರಾಳಿಯ ಯೋಗಕ್ಷೇಮವನ್ನು ಗಮನಿಸಿ, ಶಾಂತವಾಗಿ ಆಟ ಆಡಿದ ಅಶ್ವಿನಿ, ತಮ್ಮ ಹೊಸ ಮುಖವನ್ನು ತೋರಿಸಿದರು. ಇದು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಸಹಸ್ಪರ್ಧಿಗಳ ಅಭಿಪ್ರಾಯಗಳು ವಿಭಿನ್ನವಾಗಿವೆ. ಕೆಲವರು ಅಶ್ವಿನಿ ತಂತ್ರ ಬದಲಿಸಿಕೊಂಡಿದ್ದಾರೆ ಎಂದು ಹೇಳಿದರೆ, ಕೆಲವರು ಇದು ಅವರ ನಿಜವಾದ ವ್ಯಕ್ತಿತ್ವ ಎಂದು ನಂಬುತ್ತಾರೆ. ಯಾವುದು ಸತ್ಯ ಎಂಬುದನ್ನು ಫಿನಾಲೆ ಹತ್ತಿರದಲ್ಲಿ ಮಾತ್ರ ತಿಳಿಯಬಹುದು.

Latest News