ಬಿಗ್ ಬಾಸ್ ಸೀಸನ್ ೧೨ ರ ಫಿನಾಲೆಗಾಗಿ ಕ್ಷಣಗಣನೆ ಆರಂಭಗೊಂಡಿದೆ. ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ಹೊಸ ಪ್ರೋಮೋ ಈಗಷ್ಟೆ ಹೊರ ಬಂದಿದ್ದು, ಅದರಲ್ಲಿ ಕಿಚ್ಚ ಸುದೀಪ್ ನೀಡಿದ ಮಾಹಿತಿಗಳು ಅಭಿಮಾನಿಗಳನ್ನು ಒಂದು ಕ್ಷಣ ಶಾಕ್‌ಗೆ ಗುರಿ ಮಾಡಿವೆ ಎನ್ನಬಹುದು. ಈ ಬಾರಿ ಸ್ಪರ್ಧಿಗಳು ಊಹಿಸಿದ್ದಕ್ಕಿಂತಲೂ ಹೆಚ್ಚು ಪ್ರಮಾಣದ ವೋಟ್‌ಗಳು ವಿನ್ನರ್‌ಗೆ ಬಂದಿರುವುದಾಗಿ ನಟ ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ.
ಹೌದು ಪ್ರೋಮೋದಲ್ಲಿ ಸುದೀಪ್ ಅವರು, “ಕಳೆದ ವರ್ಷ ವಿನ್ನರ್‌ಗೆ 5 ಕೋಟಿ ವೋಟ್‌ಗಳು ಬಂದಿದ್ದವು. ಈ ಬಾರಿ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಹಾಗಾದರೆ ಈ ಸೀಸನ್‌ನಲ್ಲಿ ಎಷ್ಟು ವೋಟ್‌ಗಳು ಬಂದಿರಬಹುದು?” ಎಂದು ಸ್ಪರ್ಧಿಗಳಿಗೆ ಪ್ರಶ್ನೆ ಹಾಕಿದರು. ಇದಕ್ಕೆ ಸ್ಪರ್ಧಿ ರಘು ಅವರು “12 ರಿಂದ 13 ಕೋಟಿ ವೋಟ್‌ಗಳು ಬಂದಿರಬಹುದು” ಎಂದು ಊಹಿಸಿದರು. ಗಿಲ್ಲಿ ಪರ ಅಭಿಮಾನಿಗಳು “8 ರಿಂದ 10 ಕೋಟಿ ವೋಟ್‌ಗಳು ಬಂದಿರಬಹುದು” ಎಂದು ಅಂದಾಜಿಸಿದರು.
ಆದರೆ ಸುದೀಪ್ ನೀಡಿದ ಅಂಕಿ-ಅಂಶಗಳು ಎಲ್ಲರಿಗೂ ಅಚ್ಚರಿ ತಂದವು. ಮೊದಲನೇ ಸ್ಥಾನ ಪಡೆದ ಸ್ಪರ್ಧಿಗೆ ಕೇವಲ 12 ಗಂಟೆಗಳೊಳಗೆ 37 ಕೋಟಿಗೂ ಹೆಚ್ಚು ವೋಟ್‌ಗಳು ಬಂದಿರುವುದಾಗಿ ಅವರು ಘೋಷಿಸಿದರು. ಇದು ಬಿಗ್ ಬಾಸ್ ಇತಿಹಾಸದಲ್ಲೇ ದೊಡ್ಡ ದಾಖಲೆ ಎಂದು ಹೇಳಬಹುದು ಎನ್ನಲಾಗುತ್ತಿದೆ.
ಇನ್ನು ಎರಡನೇ ಸ್ಥಾನ ಪಡೆದ ಸ್ಪರ್ಧಿಗೂ ಲಕ್ಷಾಂತರ ವೋಟ್‌ಗಳು ಬಂದಿದ್ದು, ಅಂತರವು ಬಹಳ ಕಡಿಮೆ ಎಂದು ಸುದೀಪ್ ವಿವರಿಸಿದರು. ಗ್ರಾಫ್ ಪ್ರಕಾರ ಎರಡನೇ ಸ್ಥಾನ ಪಡೆದ ಸ್ಪರ್ಧಿಗೆ 5,23,89,318 ವೋಟ್‌ಗಳು ಬಂದಿವೆ. ಈ ಅಂಕಿ-ಅಂಶಗಳು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, “ಇಷ್ಟು ದೊಡ್ಡ ಪ್ರಮಾಣದ ವೋಟ್‌ಗಳು ಯಾರಿಗೆ ಬಂದಿವೆ? ಈ ಬಾರಿ ವಿನ್ನರ್ ಯಾರು?” ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ.
ಬಿಗ್ ಬಾಸ್ ಸೀಸನ್ ಫಿನಾಲೆ ಯಾವಾಗಲೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸುವ ಕ್ಷಣ. ಈ ಬಾರಿ ವೋಟ್‌ಗಳ ಪ್ರಮಾಣವೇ ಅಭಿಮಾನಿಗಳ ಉತ್ಸಾಹವನ್ನು ತೋರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರವರ ನೆಚ್ಚಿನ ಸ್ಪರ್ಧಿಗಳಿಗೆ ವಿಶ್ ಮಾಡುತ್ತಿದ್ದಾರೆ. ಹೌದು ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ ಫಿನಾಲೆ ಪ್ರೋಮೋ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದು, ವೋಟ್‌ಗಳ ಅಂಕಿ-ಅಂಶಗಳು ದಾಖಲೆ ಮಟ್ಟ ತಲುಪಿವೆ. ಈಗ ಎಲ್ಲರ ಕಣ್ಣುಗಳು ಫಿನಾಲೆ ವೇದಿಕೆಯಲ್ಲಿ ಘೋಷಣೆಯಾಗಲಿರುವ ವಿನ್ನರ್ ಕಡೆ ನೆಟ್ಟಿವೆ ಎಂದೆನ್ನಬಹುದು.