ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ಕೆಲ ದಿನಗಳಾಗಿದ್ದರೂ, ಅದರ ಕ್ರೇಜ್ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇದೀಗ ಕಲರ್ಸ್ ಕನ್ನಡ ವಾಹಿನಿ, ಬಿಗ್ ಬಾಸ್ 12ರ ಎಲ್ಲಾ ಸ್ಪರ್ಧಿಗಳನ್ನು ಮತ್ತೆ ಒಂದೇ ವೇದಿಕೆಗೆ ಕರೆತಂದು ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವಿಶೇಷ ಎಪಿಸೋಡ್ ಫೆಬ್ರವರಿ 14ರಂದು ಪ್ರಸಾರವಾಗಲಿದೆ. ಹೌದು ಸುಷ್ಮಾ ಕೆ. ರಾವ್ ಅವರ ನಿರೂಪಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಡಾನ್ಸ್, ಕಾಮಿಡಿ ಹಾಗೂ ಮಸ್ತಿಯ ಜೊತೆಗೆ, ಬಿಗ್ ಬಾಸ್ ಮನೆಯೊಳಗೆ ಹುಟ್ಟಿಕೊಂಡ ಅಸಮಾಧಾನಗಳೂ ಮತ್ತೆ ಚರ್ಚೆಗೆ ಬರಲಿವೆ.
ಸೀಸನ್ 12ರಲ್ಲಿ ಜೋಡಿ ಹಕ್ಕಿಗಳೆಂದೇ ಫೇಮಸ್ ಆದ ರಾಶಿಕಾ ಶೆಟ್ಟಿ–ಸೂರಜ್ ಸಿಂಗ್ ಹಾಗೂ ಗಿಲ್ಲಿ ನಟ–ಕಾವ್ಯಾ ಶೈವ ಜೋಡಿಯನ್ನು ಮತ್ತೆ ಒಟ್ಟಿಗೇ ಈ ಶೋನಲ್ಲಿ ನೋಡಬಹುದು. ಇದರ ಜೊತೆಗೆ, ಬಿಗ್ ಬಾಸ್ ಮುಗಿದ ನಂತರವೂ ಗಿಲ್ಲಿ ನಟನ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲ ಸ್ಪರ್ಧಿಗಳು ಇದೀಗ ಅವನ ಎದುರು ಮುಖಾಮುಖಿಯಾಗಲಿದ್ದಾರೆ. ಈ ಕ್ಷಣಗಳು ಕಾರ್ಯಕ್ರಮಕ್ಕೆ ಹೆಚ್ಚುವರಿ ಕುತೂಹಲ ತಂದಿವೆ.
ಹೌದು, ಪ್ರೊಮೋದಲ್ಲೇ ಭರ್ಜರಿ ನೃತ್ಯ, ನಗುವು ಮತ್ತು ಹಾಸ್ಯದ ಕ್ಷಣಗಳು ಕಂಡುಬಂದಿವೆ. ವಿಶೇಷವಾಗಿ ‘ಗಾಸಿಪ್ ಅಂದ್ರೆ ತೆಂಗಿನ ಚಿಪ್ಪು’ ಎನ್ನುವ ಮಲ್ಲಮ್ಮ ಅವರ ಡೈಲಾಗ್ ಈಗಾಗಲೇ ಗಮನ ಸೆಳೆದಿದೆ. ಒಟ್ಟಿನಲ್ಲಿ ‘ದೊಡ್ಮನೆ ಹಬ್ಬ’ ವೀಕ್ಷಕರಿಗೆ ಮತ್ತೊಮ್ಮೆ ಬಿಗ್ ಬಾಸ್ ಸವಿಯೂಟ ನೀಡಲಿದೆ. ನೀವು ಕೂಡ ಈ ಗಳಿಗೆಗೆ ಕಾತುರದಿಂದ ಕಾಯುತ್ತಿದ್ದರೆ ಕಾಮೆಂಟ್ ಮಾಡಿ, ಹಾಗೇನೇ ನಿಮ್ಮ ನೆಚ್ಚಿನ ಜೋಡಿ ಯಾವುದು ಎಂದು ಅಭಿಪ್ರಾಯ ಸಹ ವ್ಯಕ್ತಪಡಿಸಬಹುದು.