ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಸಕತ್ ಸದ್ದು ಮಾಡುತ್ತಿರುವ ಕಲರ್ಸ್ ಕನ್ನಡ ಚಾನೆಲ್ ನ ಬಿಗ್ಬಾಸ್ ಕಾರ್ಯಕ್ರಮ ಸದ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ನೂರು ದಿನಗಳ ಹತ್ತಿರ ಬರುತ್ತಿರುವ ಬಿಗ್ಬಾಸ್ ಕಾರ್ಯಕ್ರಮ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೀಸನ್ 12 ಸಹ ಅದ್ಭುವಾಗಿ ಮೂಡಿ ಬರುತ್ತಿದೆ ಎಂದು ಬಿಗ್ಬಾಸ್ ವಿಕ್ಷಕರು ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಬಿಗ್ ಮನೆಯಿಂದ ಹೊರ ಬಂದಿರುವ ಸ್ಪಂದನಾ ಸೋಮಣ್ಣ ಅವರು ಬಿಗ್ ಮನೆಯೊಳಗಿನ ಕೆಲವೊಂದಿಷ್ಟು ವಿಚಾರಗಳನ್ನು ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡರು. ಹಾಗೆ ನಾನು ಹೊರಗಡೆ ಬಂದಿರೋದು ಏನು ಬೇಜಾರಿಲ್ಲ, ಅಷ್ಟು ದಿವಸ ಇದ್ದದ್ದು ಖುಷಿ ನೀಡಿತು, ಹಾಗೆ ನನ್ನ ಆಟ ಇಲ್ಲಿಯವರೆಗೆ ನಮ್ಮ ಫ್ಯಾಮಿಲಿಗೂ ಇಷ್ಟ ಆಗಿತ್ತು, ಅಷ್ಟು ಸಾಕು ಎಂದರು.
ಹೌದು ಇನ್ನೂ ರಕ್ಷಿತಾ ಆಟದ ಬಗ್ಗೆ ಮಾತನಾಡಿದ ಸ್ಪಂದನ 'ಅವಳು ತುಂಬಾ ಜಾಣ್ಮೆಯಿಂದ ಆಟವನ್ನು ಆಡುತ್ತಿದ್ದಾಳೆ, ಎಲ್ಲರೂ ಅವಳ ಮೇಲೆ ಸುಖಾಸುಮ್ಮನೆ ಎರಗಿ ಬಂದರೂ ಅವಳು ಯೋಚನೆ ಮಾಡಿ ಹೇಗೆ ಆಟ ಆಡಬೇಕು ಹಾಗೆ ಆಡುತ್ತಿದ್ದಾಳೆ. ಬಿಗ್ ಬಾಸ್ ಮನೆಯೊಳಗೇ ಬದಲಾವಣೆ ಬೇಕು ಹಾಗೆ ಆಟ ಆಡ್ತಿದ್ದಾಳೆ' ಎಂದರು. ಮನೆಯಿಂದ ಹೊರ ಬಂದ ಬಳಿಕ, ನಾನು ಹೇಗೆ ಬಿಗ್ಬಾಸ್ ಮನೆಗೆ ಹೋಗುವಾಗ ಇದ್ದೆನೋ ಅದೇ ರೀತಿ ಹೊರಗಡೆ ಬಂದಾಗಲೂ ಇದ್ದೇನೆ, ನನ್ನ ವ್ಯಕ್ತಿತ್ವ ನನ್ನ ಮನೆಯವರಿಗೆ ಹಾಗೂ ಬಿಗ್ಬಾಸ್ ಪ್ರಿಯರಿಗೆ ಇಷ್ಟ ಆಗಿದೆ. ಹಾಗೆ ಬಿಗ್ ಬಾಸ್ ಮನೆಯೊಳಗೇ ಏನು ಕಲಿತು ಬಂದೆ ಎಂದು ಹೇಳಿದ ಸ್ಪಂದನ, ತುಂಬಾ ತಾಳ್ಮೆ ಕಲಿತಿದ್ದೇನೆ ಎಂದರು.
ಜೊತೆಗೆ ಇನ್ನೊಂದು ಮಾತು ಸಹ ಹೊರಗಡೆ ಹೆಚ್ಚು ಓಡಾಡ್ತ ಇತ್ತು, ನೀವು ಕಲರ್ಸ್ ಚಾನೆಲ್ ನ ಮನೆ ಮಗಳು ಎನ್ನುವ ಕಾರಣಕ್ಕೆ ಬಿಗ್ಬಾಸ್ ನಿಮ್ಮನ್ನು ಒಳಗೆ ಇಟ್ಟುಕೊಂಡಿದ್ದಾರೆ ಎಂದು ಹೇಳುವ ಮಾತಿಗೆ ಏನು ಹೇಳುತ್ತೀರಿ ಎಂದಾಗ, ಸ್ಪಂದನ ಅವರು, 'ನೋಡಿ ನಂಗೆ ನಗು ಬರುತ್ತೆ ಆ ಮಾತು ಕೇಳಿದರೆ, ಅಲ್ಲಿ ಯಾವ ಮಗಳು, ಸೊಸೆ, ಮಗನು ನಡೆಯೋಲ್ಲ,ವೀಕ್ಷಕರ ಮಗಳು ಆಗಿ ಅವರ ಮನಸ್ಸು ಗೆಲ್ಲಬೇಕು, ಬಿಗ್ಬಾಸ್ ನಲ್ಲಿ ನಮ್ಮ ಆಟ ಹೇಗಿರುತ್ತದೆಯೋ ಹಾಗೆ ನಡೆಯುತ್ತದೆ ಎಂದು ಜಾಹ್ನವಿ ಹೇಳಿದ್ದ ಮನೆ ಮಗಳು ವಿಚಾರವಾಗಿ ನಗು ಬರುತ್ತೆ' ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಜಾಹ್ನವಿ ಅವ್ರು ಕಲರ್ಸ್ ಚಾನೆಲ್ ಅವರೇ ಆಗಿದ್ದರು ಎಂದು ತಮ್ಮ ಮಾತನ್ನು ಸ್ಪಂಧನಾ ಮುಗಿಸಿದರು. ಜೊತೆಗೆ ನನ್ನ ಫ್ಯಾಮಿಲಿ ನನ್ನ ಜೊತೆ ನಿಂತಿದೆ ನನ್ನ ವ್ಯಕ್ತಿತ್ವದ ಆಟ ಅವರಿಗೆ ಹಾಗೂ ನನ್ನನ್ನ ಇಷ್ಟ ಪಟ್ಟವಿಗೆ ಇಷ್ಟ ಆಗಿದೆ ಅಷ್ಟು ಸಾಕು ಎಂದರು.