Dec 16, 2025 Languages : ಕನ್ನಡ | English

ಅಶ್ವಿನಿ ಗೌಡಗೆ ಕಿಚ್ಚನಿಂದ ಭರ್ಜರಿ ಕ್ಲಾಸ್! ವುಮೆನ್ ಕಾರ್ಡ್ ಬೇಡವೆಂದು ರೊಚ್ಚಿಗೆದ್ದ ಕಿಚ್ಚ

ಕನ್ನಡದ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ಬಾಸ್ ಈ ಬಾರಿಯೂ ತನ್ನ ಛಾಪನ್ನು ಭರ್ಜರಿ ಆಗಿಯೇ ಮೂಡಿಸಿದೆ. ೫೦ ದಿನ ಪೂರಸಿರುವ ಬಿಗ್ಬಾಸ್ ಸೀಸನ್ ೧೨ ಕಿಕ್ಕೇರಿರೋದಂತೂ ನಿಜ. ಹೌದು ನಟ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಈ ಬಾರಿಯೂ ಅವರೇ ನಿರೂಪಕರಾಗಿದ್ದು ಕೆಲ ಪರ ವಿರೋಧ ಅಭಿಪ್ರಾಯಗಳನ್ನ ಅವರು ಮಾಡುವ ವಾರಾಂತ್ಯದ ಚರ್ಚೆ ಮೂಲಕ ಬಿಗ್ಬಾಸ್ ವೀಕ್ಷಕರಿಂದ ಪಡೆದುಕೊಂಡಿದ್ದಾರೆ. ಹೌದು ಅಶ್ವಿನಿ ಗೌಡ ಅವರು ಸಹ ಬಿಗ್ ಮನೆಯಲ್ಲಿ ಸಕತ್ ಸುದ್ದಿ ಆಗುತ್ತಿದ್ದಾರೆ. ಅವರದೇ ಆದ ವಿಶಿಷ್ಟ ಶೈಲಿಯ ಆಟದ ಮೂಲಕ ವಿಭಿನ್ನವಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಕೆಲವರು ಅವರಿಗೆ ದುಡ್ಡು ಹೆಚ್ಚಿದೆ ಹಾಗಾಗಿ ಅಷ್ಟು ಸೊಕ್ಕು ಗರ್ವ ಎನ್ನುತ್ತಾರೆ. ಅಷ್ಟೇ ಅಲ್ಲದೆ ಬಿಗ್ಬಾಸ್ ಮನೆಯಲ್ಲಿ ರಘು ಮ್ಯುಟೆಂಟ್ ಹಾಗೂ ಗಿಲ್ಲಿ ಜೊತೆ ಕೆಲವೊಂದಿಷ್ಟು ವಿಚಾರಗಳ ಕುರಿತು ಹೆಚ್ಚು ಜಗಳ ಆಡುತ್ತಲೇ ಇದ್ದರು ಅಶ್ವಿನಿ. ಈ ವಾರ ಗಿಲ್ಲಿ ಜೊತೆ ಮತ್ತು ರಘು ಅವರ ಜೊತೆಗೆ ಆಡಿದ ಜಗಳ, ಮತ್ತು ಹೆಣ್ಣು ಮಕ್ಕಳ ವಿಚಾರವಾಗಿ ಆಡಿದ ಮಾತುಗಳು, ಮರಿಯಾದೆ ಕೊಡುವ ವಿಚಾರಕ್ಕೆ ಹೆಚ್ಚು ಜಗಳ ಆಡಿ ಊಟವನ್ನೇ ಬಿಟ್ಟಿದ್ದರು ಅಶ್ವಿನಿ ಗೌಡ.  

ಅಶ್ವಿನಿ ಗೌಡಗೆ ಕಿಚ್ಚನಿಂದ ಭರ್ಜರಿ ಕ್ಲಾಸ್
ಅಶ್ವಿನಿ ಗೌಡಗೆ ಕಿಚ್ಚನಿಂದ ಭರ್ಜರಿ ಕ್ಲಾಸ್

ನಂತರ ಸ್ವತಃ ಬಿಗ್ಬಾಸ್ ಅವರೇ ಅಶ್ವಿನಿ ಗೌಡ ಅವರನ್ನ ಕರೆದು ಊಟ ಮಾಡುವಂತೆ ಮತ್ತು ನಡೆದ ವಿಚಾರವಾಗಿ ಸಂಕ್ಷಿಪ್ತ ಮಾಹಿತಿ ಪಡೆದು ಊಟ ಮಾಡಲು ಹೇಳಿದ್ದರು. ಇದೆ ವಿಚಾರವಾಗಿ ಇದೀಗ ಕಿಚ್ಚ ಸುದೀಪ್ ಅವರ ವಾರಾಂತ್ಯದ ವಾರದ ಕಥೆ ಕಿಚ್ಚನ ಜೊತೆ ಹಂತಕ್ಕೆ ಒಂದು ಸಕತ್ ಪ್ರೊಮೊ ಬಿಟ್ಟಿದ್ದಾರೆ. ಪ್ರೋಮೋದಲ್ಲಿ ನಟಿ ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್ ಅವರು ಸಕತ್ ಕ್ಲಾಸ್ ತೆಗೆದುಕೊಂಡಿರೋದು ಕಂಡು ಬಂದಿದೆ. ಬಿಗ್ ಮನೆಯಲ್ಲಿ ನೀವು ಎಲ್ಲರಿಂದ ಗೌರವ, ಮರಿಯಾದೆ ಪಡೆಯಬೇಕಾದರೆ ಮೊದಲು ನೀವು ಚಿಕ್ಕಮಕ್ಕಳಿಂದ ಹಿಡಿದು ಬಿಗ್ ಮನೆಯಲ್ಲಿರುವ ಎಲ್ಲರಿಗೂ ಮರಿಯಾದೆ ಕೊಟ್ಟು ಮಾತನಾಡುವುದ ಕಲಿಯಿರಿ ಎಂದು ಸ್ಪಷ್ಟವಾಗಿ ಹೇಳಿ ಅವರ ವಿರುದ್ಧವಾಗಿ ಗುಡುಗಿದ್ದಾರೆ. ಹೆಣ್ಣು ಮಕ್ಕಳಿಗೆ ಹಾಗೆ ಹೇಳಬೇಡಿ ಎನ್ನುತ್ತೀರಿ. ಅಂತದ್ದು ಏನು ಅಂದಿದ್ದಾರೆ ಅವರು ಎಂದು ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ ಸುದೀಪ್. 

ಮಾತು ಮುಂದುವರೆಸಿದ ಅವರು ಅಶ್ವಿನಿ ಗೌಡ ಅವರಿಗೆ ವುಮೆನ್ ಕಾರ್ಡ್ ಪ್ಲೆ ಮಾಡಬೇಡಿ ಎಂದು ಪ್ರೋಮೋದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಹೀಗಿರುವಾಗ ಬಿಗ್ಬಾಸ್ ನ ಕೆಲವು ಪ್ರೇಕ್ಷಕರು ಪ್ರೊಮೊ ವಿಡಿಯೋ ನೋಡಿ ಅಶ್ವಿನಿ ಗೌಡ ಅವ್ರಿಗೆ ಕ್ಲಾಸ್ ತೆಗೆದುಕೊಂಡ ಪರಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವ್ರು ಇದೆಲ್ಲ ಪ್ರೋಮೋದಲ್ಲಿ ಅಷ್ಟೇ ಪೂರ್ತಿ ಎಪಿಸೋಡ್ ನೋಡಿದರೆ ಎಲ್ಲಾ ತಿಳಿಯುತ್ತದೆ ಎನ್ನುತ್ತಾರೆ. ನೀವೂ ಕೂಡ ಬಿಗ್ಬಾಸ್ ವೀಕ್ಷಣೆ ಮಾಡುತ್ತಿದ್ದರೆ, ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಹಾಗೆ ಈ ವಾರ ಯಾರು ಬಿಗ್ ಮನೆಯಿಂದ ಔಟ್ ಆಗಿ ಎಲಿಮಿನೇಟ್ ಆಗುತ್ತಾರೆ ಎಂದು ನಿಮ್ಮ ಅನಿಸಿಕೆಯ ತಿಳಿಸಿ ಧನ್ಯವಾದಗಳು.

Latest News