ಬಿಗ್ ಬಾಸ್ ಕೇವಲ ಮನರಂಜನಾ ಕಾರ್ಯಕ್ರಮ ಮಾತ್ರವಲ್ಲ, ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷದ ವೇದಿಕೆಯಾಗಿದೆ. ಮನೆಯೊಳಗಿನ ಸ್ಪರ್ಧಿಗಳು ತಮ್ಮನ್ನು ಶ್ರೇಷ್ಠರೆಂದು ತೋರಿಸಲು ಪ್ರಯತ್ನಿಸುವಾಗ, ಕೆಲವರು ಕುತಂತ್ರದ ಮೂಲಕ ಗೆಲ್ಲಲು ಮುಂದಾಗುತ್ತಾರೆ ಕೂಡ. ಆದರೆ ನಿಯಮಾನುಸಾರ ವಾರಾಂತ್ಯದಲ್ಲಿ ಒಬ್ಬರ ಲ್ಲೊಬ್ಬರು ಮನೆಯಿಂದ ಹೊರಗಡೆ ಬರಲೇಬೇಕು. ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಅಗ್ನಿ ಪರೀಕ್ಷೆ ನಡೆಯುತ್ತಿದೆ. ಮನೆಯ ಏಳು ಸ್ಪರ್ಧಿಗಳ ಮೇಲೆ ಎಲಿಮಿನೇಷನ್‌ನ ತೂಗುಕತ್ತಿ ಜೋರಾಗಿ ನೇತಾಡುತ್ತಿದೆ. ಯಾರು ಮನೆ ಹೊರಗಡೆ ಬರುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ಎನ್ನಬಹುದು.
ಈ ಬಾರಿ ನಾಮಿನೇಟ್ ಆಗಿರುವವರು ಗಿಲ್ಲಿ, ಅಶ್ವಿನಿ ಗೌಡ, ಕಾವ್ಯ ಶೈವ, ಜಾಹ್ನವಿ, ಧ್ರುವಂತ್, ರಘು ಮತ್ತು ಉತ್ತರ ಕರ್ನಾಟಕದ ಸಿಂಗರ್ ಮಾಳು ನಿಪನಾಳ. ಎಲ್ಲರೂ ಘಟಾನುಘಟಿಗಳೇ ಆಗಿರುವುದರಿಂದ ಸ್ಪರ್ಧೆ ಹೇಳಬೇಕು ಅಂದರೆ ಅತಿ ತೀವ್ರವಾಗಿದೆ. ಗಿಲ್ಲಿ ಫಿನಾಲೆಯವರೆಗೆ ಇರುತ್ತಾನೆ ಎಂದು ಹಲವರು ಹೇಳುತ್ತಿದ್ದಾರೆ. ಸುರಕ್ಷಿತ ಅಭ್ಯರ್ಥಿ ಅಶ್ವಿನಿ ಗೌಡ ಕೂಡ ಹೌದು ಎನ್ನುತ್ತಿದ್ದಾರೆ. ಈ ಬಾರಿಯ ಪ್ರಬಲ ಸ್ಪರ್ಧಿ ರಘು ಕೂಡ ಹೌದು ಎಂದು ಬಿಗ್ಬಾಸ್ ಪ್ರಿಯರು ಹೇಳುತ್ತಿದ್ದಾರೆ.
ಕಾವ್ಯ ಶೈವ ಕೂಡ ಈ ವಾರ ಎಲಿಮಿನೇಷನ್‌ಗೆ ಒಳಗಾಗುವ ಸಾಧ್ಯತೆ ಕೂಡ ಕಡಿಮೆ ಎಂದು ಕಾಮೆಂಟ್‌ಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಯಾವ ತಿರುವು ಪಡೆಯಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ದೃವಂತ್ ಹಾಗೂ ಮಾಳೂ ಸಹ ಎಲಿಮಿನೇಷನ್ ಅಲ್ಲಿದ್ದು, ಮನೆಯಿಂದ ಹೊರಗೆ ಹೋಗಬಹುದು ಎನ್ನುವ ಪಟ್ಟಿಯಲ್ಲಿ ಜಾಹ್ನವಿ ಅಥ್ವಾ ಮಾಳೂ ಇಬ್ಬರಲ್ಲಿ ಒಬ್ಬರು ಈ ವಾರ ಹೊರ ಬರುವ ಸಾಧ್ಯತೆ ಇದೆ. ನಿಮ್ಮ ಪ್ರಕಾರ ಯಾರು ಬಿಗ್ ಮನೆಯಿಂದ ಹೊರ ಹೋಗ್ತಾರೆ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು.