Feb 16, 2026 Languages : ಕನ್ನಡ | English

ಎಲ್ಲರಿಗೂ ಸಕತ್ ಪೈಪೋಟಿ ಕೊಡ್ತಿದ್ದ ಸ್ಪರ್ಧಿಯೇ ಈ ವಾರ ಮನೆಯಿಂದ ಔಟ್ - ಶಾಕ್ ಆದ ಮನೆ ಮಂದಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಕಾರ್ಯಕಮ. ದಿನೇ ದಿನೇ ಹೆಚ್ಚುತ್ತಿರುವ ಬಿಗ್ ಬಾಸ್ ಮನೆಯ ಕೆಲವು ವಿಚಾರಗಳು, ಆಟದ ವೈಖರಿ , ವ್ಯಕ್ತಿತ್ವದ ಶೈಲಿ ಎಲ್ಲರಲ್ಲಿ ಹೆಚ್ಚು ಗಮನ ಸೆಳೆಯುವಂತೆ ಮಾಡುತ್ತಿದೆ  ಎಂದು ಹೇಳಬಹುದು. ಹೌದು ಬಿಗ್ ಬಾಸ್ ಮನೆಯ ಆಟ ಈಗ ತೊಂಬತ್ತು ದಿನಗಳ ಪೂರೈಸಿದ್ದು ಸಕತ್ ಆಗಿ ಶೋ ಮೂಡಿ ಬರುತ್ತಿದೆ. ಫಿನಾಲೆ ಕಾವು ಹೆಚ್ಚುತ್ತಿದೆ. ಯಾರು ಈ ಬಾರಿಯ ವಿಜೇತ ಆಗಿ ಸೀಸನ್ 12 ರ ವಿಜಯಶಾಲಿ ಆಗುತ್ತಾರೆ ಎಂದು ಬಿಗ್ಬಾಸ್ ವೀಕ್ಷಕರು ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಈ ವಾರದ ಎಲಿಮಿನೇಷನ್ ವಿಚಾರ ಸಹ ಚರ್ಚೆ ಆಗುತ್ತಿದ್ದು, ಕಳೆದ ವಾರ ಎಲಿಮಿನೇಷನ್ ಅಲ್ಲಿ ಆದಂಥಹ ಕೆಲವು ಬಿಗ್ಬಾಸ್ ನಿರ್ಧಾರಗಳು ವೀಕ್ಷಕರಲ್ಲಿ ಬಾರಿ ಬೇಸರ ಮೂಡಿಸಿದ್ದವು. 

ಕನ್ನಡದ ಬಿಗ್ ಬಾಸ್ ಸೀಸನ್ 12 | Photo Credit: https://www.instagram.com/colorskannadaofficial/
ಕನ್ನಡದ ಬಿಗ್ ಬಾಸ್ ಸೀಸನ್ 12 | Photo Credit: https://www.instagram.com/colorskannadaofficial/

ಮಾಳೂ ಹಾಗೂ ಸೂರಜ್ ಎಲಿಮಿನೇಟ್ ಆಗಿದ್ದು ಕೆಲವರಲ್ಲಿ ಅಸಮಾಧಾನ ಆಗಿತ್ತು. ಕಾರಣ ಇವರಿಬ್ಬರಿಗಿಂತ ದುರ್ಭಲ ಆಗಿರುವ ಇನ್ನೂ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಒಳಗೆ ಇದ್ದಾರೆ ಎಂದು ಹೇಳಿಕೊಂಡರು. ಬಿಗ್ಬಾಸ್ ನ ಕೆಲವೊಂದು ನಿರ್ಧಾರ ಅಸಂಜಸ ಆಗಿರುತ್ತವೆ. ಅವರಿಗೆ ಬೇಕಾದವರನ್ನು ಮಾತ್ರ ಮನೇಲಿ ಉಳಿಸಿಕೊಳ್ಳುತ್ತಾರೆ ಎಂದು ಅಸಮಾಧಾನ ಹೊರ ಹಾಕಿದ್ರು. ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಒಟ್ಟು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಅದರಲ್ಲಿ ಮುಂಚೂಣಿಯಲ್ಲಿರುವುದು ರಾಶಿಕ, ಅಶ್ವಿನಿ ಗೌಡ, ಧ್ರುವಂತ್, ಧನುಷ್ ಹಾಗೂ ಸ್ಪಂದನ ನಾಮಿನೇಟ್ ಆಗಿದ್ದಾರೆ. ಸದ್ಯ ಕೊನೆಯ ಹಂತಕ್ಕೆ ಬಂದಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವ ರೀತಿ, ಯಾವ ಸ್ಪರ್ಧಿ ಹೇಗೆ ಆಟ ಆಡುತ್ತಿದ್ದಾರೆ ಎಂದು ಯಾರು ಸಹ ಊಹೆ ಮಾಡಲು ಆಗುತ್ತಿಲ್ಲ. 

ಒಂದು ಕಡೆ ಅಶ್ವಿನಿ ಗೌಡ ಅವರು ಸಕತ್ ಆಗಿ ಆಟ ಆಡುತ್ತಿದ್ದಾರೆ, ಧ್ರುವಂತ್ ಸಹ ಅದ್ಭುತವಾಗಿ ಗೇಮ್ ಆಡ್ತಿದ್ದಾರೆ. ಹಾಗೆಯೇ ರಾಶಿಕಾ, ಧನುಷ್ ಸಹ ಒಳ್ಳೆ ಅಭಿಪ್ರಾಯ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಐದು ಜನರಲ್ಲಿ ಕೊನೆಯ ಜಾಗದಲ್ಲಿರೋದು ಸ್ಪಂದನ ಎಂದು ವೀಕ್ಷಕರು ಹೇಳುತ್ತಿದ್ದಾರೆ.  ಬಿಗ್ಬಾಸ್ ಮನೆ ಎನ್ನುವುದು ಒಂದು ವ್ಯಕ್ತಿತ್ವದ ಆಟ ಆಗಿದೆ. ವಾರ ವಾರ ಸ್ಪರ್ದಿಗಳ ಮೇಲಿರುವ ಅಭಿಪ್ರಾಯಗಳು ಬದಲಾಗುತ್ತಲೇ ಇರುತ್ತವೆ. ಅವರ ಆಟದ ಗತ್ತುಗಳು, ಶೈಲಿಗಳು ಕೆಲವರಿಗೆ ಇಷ್ಟ ಆದ್ರೆ, ಇನ್ನು ಕೆಲವರು  ಈ ಸ್ಪರ್ದಿ ಬಿಗ್ಬಾಸ್ ಮನೆಗೆ ಸೂಟ್ ಆಗಲ್ಲ ಎಂದು ಅವರನ್ನ ಇಷ್ಟ ಪಡದವರು ಇದ್ದಾರೆ. ಮಾಹಿತಿ ಪ್ರಕಾರ ಈ ವಾರ ಮಿಸ್ ಇಲ್ಲದೆ ಸ್ಪಂದನ ಹೊರಗಡೆ ಬರುವ ಸ್ಪರ್ಧಿ ಎಂದು ಬಿಗ್ಬಾಸ್ ವಿಕ್ಷಕರು ಅವರವರ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.. 

ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ಬಾಸ್ ಈ ಬಾರಿಯೂ ತನ್ನ ಛಾಪನ್ನು ಭರ್ಜರಿ ಆಗಿಯೇ ಮೂಡಿಸಿದೆ. ಫಿನಾಲೆ ದಿನ ಇನ್ನೇನು ಹತ್ತಿರ ಬರುತ್ತಿದೆ. 93 ದಿನ ಪೂರಸಿರುವ ಬಿಗ್ಬಾಸ್ ಸೀಸನ್ 12 ಕಿಕ್ಕೇರಿರೋದಂತೂ ನಿಜ. ನಿಮ್ಮ ಪ್ರಕಾರ ಯಾವ ಸ್ಪರ್ಧಿ ಬಿಗ್ ಮನೆಯಿಂದ ಈ ವಾರ ಹೊರ ಬರಬೇಕು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

Latest News