ಕನ್ನಡದ ಅತಿ ದೊಡ್ಡ ರಿಯಾಲಿಟಿ ಷೋ ಅಂದರೆ ಅದು ಸದ್ಯ ಬಿಗ್ ಬಾಸ್ ಕಾರ್ಯಕ್ರಮ ಎನ್ನಬಹುದು. ನೋಡ ನೋಡ್ತಿದ್ದಂತೆಯೇ ಮತ್ತೊಂದು ವಾರ ಮುಕ್ತಾಯ ಆಗಿದೆ. ಮತ್ತೆ ವಾರದ ಕಥೆ ಕಿಚ್ಚನ ಜೊತೆ ಮಾತುಕತೆಯ ಸಮಯ ಹತ್ತಿರ ಬಂದಿದೆ. ಈ ವಾರ ಬಿಗ್ ಮನೆಯಿಂದ ಹೊರ ಹೋಗೋದಕ್ಕೆ ಏಳು ಜನ ನಾಮಿನೇಟ್ ಆಗಿದ್ದು, ಅದು ಹೆಚ್ಚು ಸದ್ದು ಮಾಡಿರುವ ಪ್ರಭಲ ಸ್ಪರ್ಧಿಗಳೇ ಆಗಿರೋದು ಹೆಚ್ಚು ವಿಶೇಷ. ಗಿಲ್ಲಿ, ಅಶ್ವಿನಿ, ಮಾಳೂ, ದೃವಂತ್, ರಘು, ಜಾಹ್ನವಿ, ಹಾಗೂ ಕಾವ್ಯ ಇವರೆಲ್ಲರೂ ಈ ವಾರ ನಾಮಿನೇಷನ್ ಪಟ್ಟಿಯಲ್ಲಿಇದ್ದಾರೆ.
ಹೀಗಿರುವಾಗ ಯಾರು ಬಿಗ್ ಬಾಸ್ ನಿಂದ ಈ ವಾರ ಹೊರ ಹೊಗಲಿದ್ದಾರೆ ಎನ್ನುವ ಚರ್ಚೆ ಕೂಡ ಒಂದು ಕಡೆ ಆದ್ರೆ, ಈ ವಾರ ಕಿಚ್ಚನ ಪಂಚಾಯಿತಿ ಯಾವ ರೀತಿ ಇರಲಿದೆ, ಹಾಗೆ ಯಾವ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಬಹುದು, ಹಾಗೆ ಯಾವ ವಿಷಯಗಳ ಬಗ್ಗೆ ಕಿಚ್ಚ ಚರ್ಚೆ ಮಾತುಕತೆ ನಡೆಸಬಹುದು ಎಂದು ಇನ್ನೊಂದು ಕಡೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.
ಎಲ್ಲರಿಗೂ ಗೊತ್ತಿರುವಂತೆ ಈ ವಾರ ಬಿಗ್ ಬಾಸ್ ಮನೆಗೆ ಬ್ಯಾಚುಲರ್ ಪಾರ್ಟಿ ಟಾಸ್ಕ್ ಮೂಲಕ ಕಳೆದ ವರ್ಷ ಬಿಗ್ ಮನೆಯಲ್ಲಿ ಸ್ಪರ್ದಿಸಿದ್ದ ಮಂಜು, ಚೈತ್ರಾ, ರಜತ್, ತ್ರಿವಿಕ್ರಮ್ ಅವರನ್ನು ಈ ವಾರ ಕರೆತರಲಾಗಿತ್ತು. ಬಿಗ್ ಮನೆ ಬಿಬಿ ಪ್ಯಾಲೇಸ್ ಆಗಿತ್ತು. ಹೀಗಿರುವಾಗ ಹೆಚ್ಚು ಗಿಲ್ಲಿ ಜೊತೆ ಕಿರಿಕ್ ಮಾಡಿಕೊಂಡ ರಜತ್ ಹಾಗೂ ಮಂಜು ಅವರ ಆಟದ ವರ್ತನೆ ಹೆಚ್ಚು ದಬ್ಬಾಳಿಕೆ ರೀತಿ ಕಂಡು ಬಂದಿದೆ. ಕೆಲವೊಂದಿಷ್ಟು ವಿಷಯಗಳ ಕುರಿತು ಗಿಲ್ಲಿ ಕೂಡ ಒಂದೆರೆಡು ಮಾತುಗಳ ಹೆಚ್ಚು ಆಡಿರುವ ಉದ್ದೇಶದಿಂದ ಕಿಚ್ಚ್ ಸುದೀಪ್ ಅವರು ಗಿಲ್ಲಿ ಜೊತೆ ಹೆಚ್ಚು ಮಾತಾಡುವ ಸಾಧ್ಯತೆ ಇದೆ. ಮಂಜು ಅವರ ಮದ್ವೆ ವಿಚಾರವಾಗಿ ಕಾಲೆಳೆದ ಗಿಲ್ಲಿ ಬಗ್ಗೆ ಚರ್ಚೆ ಮಾಡಬಹದು.
ಮನೆಯ ನಿಯಮಗಳ ಎಚ್ಚರಿಕೆ ಬಗ್ಗೆ ಕಿಚ್ಚ ಮತ್ತೆ ಮಾತನಾಡಬಹದು. ರಜತ್ ಹಾಗು ಗಿಲ್ಲಿ ವಿಚಾರ ಚರ್ಚೆ ಆಗಲಿದೆ. ಇನ್ನೊಂದು ವಿಚಾರ ಅಸಲಿಗೆ ಈ ವಾರ ಅಶ್ವಿನಿ ಆಟಕ್ಕೆ ಬಹತೇಕ ಮೆಚ್ಚುಗೆ ಸಿಗಬಹದು ಎನ್ನಲಾಗುತ್ತಿದೆ. ಇನ್ನೊಂದು ಮುಖ್ಯ ವಿಷಯದ ಬಗ್ಗೆ ಹೆಚ್ಚು ಚರ್ಚೆ ಆಗುವ ಸಾಧ್ಯತೆ ಇದ್ದು ಅದುವೇ ಈ ವಾರ ಕ್ಯಾಪ್ಟನ್ ಆಗಿದ್ದ ಅಭಿ ಬಗ್ಗೆ. ಅಭಿ ತನ್ನ ಮನೆ ಮಂದಿಗೆ ನೀಡಿದ ಪಾಯಿಂಟ್ಸ್ ವಿಷಯ, ಹಾಗು ಫೇವರಿಸಮ್ ಮಾಡಿದ್ದರ ಬಗ್ಗೆ ಕಿಚ್ಚ ಸುದೀಪ್ ಅವರು ಚರ್ಚೆ ಮಾಡಬಹುದು.