Feb 16, 2026 Languages : ಕನ್ನಡ | English

ಬಿಗ್ಬಾಸ್ ಮನೆ ತೊರೆಯಲು ಮುಂದಾದ ಧ್ರುವಂತ್! ಮತ್ತೆ ಮಾಡಿದ ಮನವಿಗೆ ಬಿಗ್ ಬಾಸ್ ಸಿಗ್ನಲ್ ಕೊಟ್ರಾ?

ಬಿಗ್‌ಬಾಸ್ ಕನ್ನಡ 12ರ ಇತ್ತೀಚಿನ ಎಪಿಸೋಡಿನಲ್ಲಿ ಸ್ಪರ್ಧಿ ಧ್ರುವಂತ್ ಮಾಡಿದ ಮನವಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕಿಚ್ಚ ಸುದೀಪ್ ಅವರ ಮುಂದೆಯೇ ನಿನ್ನೆಯ ಎಪಿಸೋಡ್ ನಲ್ಲಿ ಕಾರ್ಯಕ್ರಮ ನಡೆಯುವಾಗಲೇ ಧ್ರುವಂತ್ ಅವರು ಮನೆಯಿಂದ ಹೋಗುವ ಹೇಳಿಕೆ ಕೊಟ್ಟರು. ಬಳಿಕ ಕಿಚ್ಚನ ಎಪಿಸೋಡ್ ಮುಗಿದ ಮೇಲೆ ಮತ್ತೆ ಕ್ಯಾಮೆರಾ ಮುಂದೆ ಬಂದು ಹೇಳಿಕೆ ಕೊಟ್ಟಿದ್ದು ಇದೀಗ ಹೆಚ್ಚು ಚರ್ಚೆ ಆಗುತ್ತಿದೆ. ಹೌದು ಧ್ರುವಂತ್ ಅವರು ಹೇಳಿರುವ ಹಾಗೇ  “ದಯವಿಟ್ಟು ನನ್ನನ್ನ ಮನೆಗೆ ಕಳುಹಿಸಿ ಕೊಡಿ ಬಿಗ್‌ಬಾಸ್” ಎಂದು ಅವರು ನೇರವಾಗಿ ಮನವಿ ಮಾಡಿದ ಕ್ಷಣವೇ ಎಪಿಸೋಡಿನ ಪ್ರಮುಖ ಹೈಲೈಟ್ ಆಗಿ ಪರಿಣಮಿಸಿತು.

ಬಿಗ್ಬಾಸ್ ಮನೆ ತೊರೆಯಲು ಮುಂದಾದ ಧ್ರುವಂತ್
ಬಿಗ್ಬಾಸ್ ಮನೆ ತೊರೆಯಲು ಮುಂದಾದ ಧ್ರುವಂತ್

ಮನೆಯಲ್ಲಿನ ನಿರಂತರ ಟಾಸ್ಕ್‌ಗಳು, ಒತ್ತಡ ಹಾಗೂ ಸಹಭಾಗಿಗಳೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಬೇಸತ್ತ ಧ್ರುವಂತ್, ನಿನ್ನೆ ಪ್ರಸಾರವಾದ ಎಪಿಸೋಡಿನಲ್ಲಿ ತಮ್ಮ ಮನಸ್ಥಿತಿಯನ್ನು ಬಿಚ್ಚಿಟ್ಟರು. ಅವರು ಬಿಗ್‌ಬಾಸ್‌ಗೆ ನೇರವಾಗಿ ಮನವಿ ಮಾಡಿ, ಆಟದಿಂದ ಹೊರಬರಲು ಬಯಸಿದರು. ಸ್ಪಂದನಾ ಜೊತೆ ನಡೆದ ಘರ್ಷಣೆ ಕೂಡ ಇವರಿಗೆ ಬೇಸರ ಉಂಟು ಮಾಡಿರಬಹದು. ಎಪಿಸೋಡಿನಲ್ಲಿ ಸ್ಪಂದನಾ ಮತ್ತು ಧ್ರುವಂತ್ ನಡುವೆ ತೀವ್ರ ವಾಗ್ವಾದ ನಡೆಯಿತು. ಸ್ಪಂದನಾ, ಧ್ರುವಂತ್ unsportive ಎಂದು ಆರೋಪಿಸಿ, ಟಾಸ್ಕ್‌ಗಳಲ್ಲಿ ಭಾಗವಹಿಸಲು ತಡೆಯುವ ಮೂಲಕ ವಿವಾದ ಸೃಷ್ಟಿಸಿದರು. ಈ ಘರ್ಷಣೆ ಧ್ರುವಂತ್ ಮನಸ್ಸಿಗೆ ಇನ್ನಷ್ಟು ಒತ್ತಡ ತಂದಿತು.

ಧ್ರುವಂತ್ ಮನವಿ ಮಾಡಿದ ನಂತರ ಮನೆಯ ವಾತಾವರಣ ಗಂಭೀರಗೊಂಡಿತು. ಕೆಲವರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೆ, ಇತರರು ಅವರ ನಿರ್ಧಾರವನ್ನು ಗೌರವಿಸಿದರು. ಈ ಘಟನೆ ಅಭಿಮಾನಿಗಳ ಗಮನ ಸೆಳೆಯುವಂತೆಯೇ ಮನೆಯಲ್ಲಿನ ಚರ್ಚೆಯ ಕೇಂದ್ರಬಿಂದುವಾಯಿತು. ಈ ಬೆನ್ನಲ್ಲೇ ಬಿಗ್‌ಬಾಸ್ ಮತ್ತು ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ. ಹೌದು ಬಿಗ್‌ಬಾಸ್ ಧ್ರುವಂತ್ ಮನವಿಗೆ ತಕ್ಷಣ ಪ್ರತಿಕ್ರಿಯೆ ನೀಡದಿದ್ದರೂ, ಮುಂದಿನ ಎಪಿಸೋಡಿನಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ನಿರ್ಧಾರವನ್ನು ಬೆಂಬಲಿಸಿದರೆ, ಇತರರು ಅವರು ಇನ್ನೂ ಆಟದಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಧ್ರುವಂತ್ ಮನವಿ ಬಿಗ್‌ಬಾಸ್ ಕನ್ನಡ 12ರ ಚರ್ಚೆಯ ಕೇಂದ್ರಬಿಂದುವಾಗಿದೆ.

Latest News