ಕನ್ನಡ ಬಿಗ್ಬಾಸ್ ಸೀಸನ್ 12 ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಪ್ರತಿಯೊಬ್ಬರೂ ಅವರದೇ ಶೈಲಿಯ ಸಕತ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾರೆ. ಹೀಗಿರುವಾಗ ಸ್ಪರ್ಧಿ ಧ್ರುವಂತ್ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಗ್ಗೆ ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಅಸಲಿಗೆ ಜಾಹ್ನವಿ ಅವರು ಅಶ್ವಿನಿ ಗೌಡ ಜೊತೆ ಹೆಚ್ಚು ಆತ್ಮೀಯತೆ ಬೆಳೆಸಿಕೊಳ್ಳುತ್ತಿರುವುದು ಬಿಗ್ ಬಾಸ್ ಮನೆಯ ಲಾಭಕ್ಕ್ಕಲ್ಲ ಬದಲಿಗೆ ವಯಕ್ತಿಕ ಲಾಭಕ್ಕೆ ಎನ್ನುವ ಮಾತು ಕೇಳಿ ಬಂದಿದ್ದು ಅತ್ತ ಧ್ರುವಂತ್ ಹೇಳಿರುವ ಮಾತುಗಳಿಂದ. ಹೌದು ಅಶ್ವಿನಿ ಗೌಡ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ ಹತ್ತಿರ ಯಾಕೆ ಇದ್ದಾರೆ ಎನ್ನುವ ಪ್ರಶ್ನೆಗೆ ಧ್ರುವಂತ್ ಅಚ್ಚರಿ ವಿಷ್ಯ ತಿಳಿಸಿದ್ದಾರೆ. ಜಾಹ್ನವಿಗೆ ಮಗನ ಪತ್ರದಲ್ಲಿ ಒಂಟಿಯಾಗು ಆಡು ಅಮ್ಮ ಎಂದಿದ್ದರೂ, ಅವರು ಸ್ವಲ್ಪ ದಿವಸ ಅಶ್ವಿನಿ ಅವರಿಂದ ಪ್ಲಾನ್ ಮಾಡಿ ದೂರ ಸರಿದರು. ಸ್ವಲ್ಪ ಪಾಸಿಟಿವ್ ಮಾತುಗಳು ಜಾಹ್ನವಿ ಬಗ್ಗೆ ಕೇಳಿ ಬಂದಿದ್ದವು . ಆದರೆ ಇದೀಗ ಮೆತ್ತೆ ಅಶ್ವಿನಿ ಅವರೊಟ್ಟಿಗೆ ಇರುವುದ ಕಂಡು ಬಿಗ್ ಮನೆಯಿಂದ ಹೊರ ಹೋದ್ಮೇಲೆ ಕಷ್ಟ ಸುಖಕ್ಕೆ ಬೇಕಲ್ವಾ ಅದಕ್ಕೆ ಅಶ್ವಿನಿ ಗೌಡ ಅವರ ಜೊತೆಗಿದ್ದಾರೆ ಈ ಜಾಹ್ನವಿ ಎಂದು ಧ್ರುವಂತ್ ಗಿಲ್ಲಿ ಮುಂದೆ ಹೇಳಿದ್ದಾರೆ. ಅಸಲಿಗೆ ಗಿಲ್ಲಿ ಜೊತೆ ಮಾತನಾಡುವಾಗ ಧ್ರುವಂತ್ ಜಾಹ್ನವಿ ಬಗ್ಗೆ ಹೇಳಿದ್ದು ಏನು? ಇಲ್ಲಿದೆ ನೋಡಿ.
ಗಿಲ್ಲಿ ನಟನಿಗೆ ಧ್ರುವಂತ್ ಏನೆಲ್ಲಾ ಹೇಳಿದರು?
ಗಿಲ್ಲಿ ನಟ - ಅಶ್ವಿನಿ ಮೇಡಂ ಗೊತ್ತಿದ್ದೂ ಹಾಗೆ ಮಾಡ್ತಾರೋ, ಗೊತ್ತಿಲ್ಲದೆ ಮಾಡ್ತಾರೋ ಗೊತ್ತಿಲ್ಲ.
ಧ್ರುವಂತ್ - ಮುಂದೆ ಇರೋರು ಮುಟ್ಠಾಳರು ಅಂದುಕೊಳ್ತಾರೆ.
ಗಿಲ್ಲಿ ನಟ - ಅದು ನನ್ನ ಮನಸ್ಸಲ್ಲೂ ಸಿಕ್ಕಾಪಟ್ಟೆ ಕಾಡುತ್ತಿತ್ತು.
ಧ್ರುವಂತ್ - ಮಾರನೇ ದಿನ ಬೆಳಗ್ಗೆ ಹಿಂದಿನ ದಿನ ಏನೂ ಆಗಿಲ್ಲ ಅನ್ನೋ ತರಹ ಬರ್ತಾರೆ. ನಿನ್ನ ಕಂಡ್ರೆ ಆಗಿಲ್ಲ ಅಂದ್ರೆ ನಿನ್ನ ವಿರುದ್ಧ ಬರ್ತಾರೆ. ಅದು ವರ್ಕ್ ಆಗಲಿಲ್ಲ ಅಂದ್ರೆ ನಿನ್ನ ಜೊತೆ ಚೆನ್ನಾಗಿ ಆಗುತ್ತಾರೆ. ಆದರೆ ಮನಸ್ಸಿನಲ್ಲಿ ಧಗಧಗ ಉರಿಯುತ್ತಿರುತ್ತೆ. ಆಮೇಲೆ ನನ್ನ ಬಳಿ ಬಂದು ನಿನ್ನ ಬಗ್ಗೆ ಡೇಟಾ ತಗೊಳ್ಳೋದು. ಎಲ್ಲರ ಹತ್ತಿರ ಕೇಳಿ.. ಯಾರಿಗೆ ಗಿಲ್ಲಿ ಬಗ್ಗೆ ಆಗಲ್ಲ ಅಂತ ತಿಳ್ಕೊಂಡು ಅವರ ಬಳಿ ನಿನ್ನ ಬಗ್ಗೆ ಹೇಳೋದು. ಆಮೇಲೆ ಜಾಹ್ನವಿ ಸಿಕ್ಕಾಪಟ್ಟೆ ಸ್ಮಾರ್ಟ್.
ಗಿಲ್ಲಿ ನಟ - ಜಾಹ್ನವಿಗೆ ಕನ್‌ಫ್ಯೂಸ್ ಆಗಿದೆ.
ಧ್ರುವಂತ್ - ಇಲ್ಲ ಗಿಲ್ಲು.. ನಾವು ಥಿಂಕ್ ಮಾಡ್ತಿರೋದು ಮನೆಯೊಳಗೆ ಮಾತ್ರ. ಜಾಹ್ನವಿ ಏನು ದಡ್ಡಿ ಅಲ್ಲ. ವಿಷಯ ಗೊತ್ತಾಯಿತಾ ನಿಮಗೆ.. ಜಾಣರು ಅವರು.! ಅಶ್ವಿನಿ ಮೇಡಂ ಸಿಕ್ಕಾಪಟ್ಟೆ ರಾಯಲ್ ಬಿಲ್ಡಪ್ ಕೊಟ್ಟಿದ್ದಾರೆ. ಗೋಲ್ಡನ್ ಸ್ಪೂನ್, ಅಪ್ಪ ಮಾಡಿಟ್ಟಿದ್ದಾರೆ, ಕಷ್ಟ ಅಂದ್ರೇನು ಅಂತಲೇ ಗೊತ್ತಿಲ್ಲ ಅಂತ. ಜಾಹ್ನವಿ ಅಲ್ಲೇ ಲೆಕ್ಕ ಹಾಕಿದ್ದಾರೆ. ‘ಬಿಗ್ ಬಾಸ್’ ಎಷ್ಟು.. ಇನ್ನೊಂದು ತಿಂಗಳು ಇರುತ್ತಾ? ಅಷ್ಟರಲ್ಲಿ ಯಾವಾಗ ಬೇಕಾದರೂ ಹೋಗಬಹುದು. ಹೋದ್ಮೇಲೆ ಒಬ್ಬರು ‘ಬಿಗ್ ಬಾಸ್’ ಬೇಕಲ್ವಾ ನಮಗೆ.. ಒಂದು ಕಷ್ಟ-ಸುಖಕ್ಕೆ… ಅದು ಅಲ್ಲಿ ಹೋಗ್ತಿದೆ ಟ್ರ್ಯಾಕ್. ಈ ಮನೆಯನ್ನ ಮೀರಿದ ಟ್ರ್ಯಾಕ್ ಅದು. ನಾವು ದಡ್ಡರು. ಒಳ್ಳೊಳ್ಳೆ ಜಾಣರು ಇದ್ದಾರೆ ಇಲ್ಲಿ. ಎಂದು ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.