ಕನ್ನಡ ಬಿಗ್ಬಾಸ್ ಸದ್ಯ ಹೆಚ್ಚು ಟಾಕ್ ಇರುವ ಶೋ ಆಗಿದೆ. ಎಲ್ಲಿ ನೋಡಿದರೂ ಗಿಲ್ಲಿ ಗಿಲ್ಲಿ ಎನ್ನುವ ಆತನ ಫ್ಯಾನ್ಸ್ ಹೆಚ್ಚು ಕ್ರೇಜ್ ಹುಟ್ಟಿಸಿಕೊಂಡಿದ್ದಾರೆ. ಅಷ್ಟೇ ಅದ್ಭುವಾಗಿ ಗಿಲ್ಲಿ ಆಡುತ್ತಿದ್ದಾರೆ ಕೂಡ. ಆದರೆ ಬಿಗ್ ಬಾಸ್ ನ ಈ ಬಾರಿಯ ವಿನ್ನರ್ ಸಹ ಆತನೇ ಎಂದು ಹಲವರು ಸಮರ್ಥನೆ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಅಥಿತಿಗಳಾಗಿ ಲಾಸ್ಟ್ ಸೀಸನ್ ನ ಕೆಲ ಸ್ಪರ್ಧಿಗಳು ಬಂದಿದ್ದಾರೆ. ಬಿಗ್ ಮನೆ ಈಗ ಹೋಟೆಲ್ ಆಗಿದೆ. ಎಲ್ಲಾ ಸ್ಪರ್ಧಿಗಳು ಅವರ ಟಾಸ್ಕ್ ನಲ್ಲಿ ಮುಳುಗಿದರೆ, ಗಿಲ್ಲಿ ಮಾತ್ರ ಅವರ ಜೊತೆ ಕಾಮಿಡಿ ಮಾಡುವ ಭರದಲ್ಲಿ ಕೆಲ ವಿಚಾರ ಕೆದಕಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಜು ವಿವಾಹ ಬಗ್ಗೆ ಬಿಗ್ಬಾಸ್ ವಿಶ್ ಮಾಡುವ ವೇಳೆಯೇ, ಮದ್ವೆ ಎರಡನೇಯದಾ? ಅಥ್ವಾ ಮೂರನೆಯದಾ ಎಂದು ಮಂಜು ಬಗ್ಗೆ ಮಾತನಾಡಿದರು. ನಂತರ ಮಂಜು ಕುಪಿತಗೊಂಡು ಪರ್ಸನಲ್ ಬೇಡ ಎಂದು ಗಿಲ್ಲಿ ನಟನಿಗೆ ವಾರ್ನಿಂಗ್ ಮಾಡಿದರು. ಗಿಲ್ಲಿ ಕೂಡ ಸಾರಿ ಸಾರಿ ಎಂದು ತನ್ನ ತಪ್ಪನ್ನ ಸಮಜಾಯಿಸ್ಕೊಂಡು ಮತ್ತೆ ತನ್ನ ಆಟ ಮುಂದುವರೆಸಿದರು. ಇದರ ನಡುವೆ ಮಂಜು ಅವರ ಹೆಂಡತಿ ಗಿಲ್ಲಿ ಮಾತಿಗೆ ಪ್ರತಿಕ್ರಯಿಸಿ ತಮ್ಮ ಆಕ್ರೋಶ ಈ ರೀತಿ ಹೊರ ಹಾಕಿದ್ದಾರೆ ನೋಡಿ.
ಎಲ್ಲರ ಹತ್ತಿರ ಪರ್ಸನಲ್ ವಿಷಯಗಳನ್ನ ಇಡ್ಕೊಂಡು ಕೆಟ್ಟ ಜೋಕ್ಸ್ ಮಾಡೋದು ಕಾಮಿಡಿನಾ? ಎಲ್ಲಾ ಶೋಗಳಲ್ಲು ಒಂದ್ ಒಂದ್ ಹುಡುಗಿ ಬಲಿಕೊಟ್ಟು ಗೆಲ್ಲೋ ಗಿಲ್ಲಿ ಬೇರೆ ಅಲ್ಲಿಗೆ ಎಷ್ಟನೇದು ಅಂತ ಕೇಳ್ತಿದಾನಾ? ಬಿಟ್ಟಿ ಊಟ ಕೊಡೋ ಅಂಥ ಯೋಗ್ಯತೆ ಇದ್ಯಾ ನಿನಗೆ ಗಿಲ್ಲಿ? ಗಿಲ್ಲಿ ನಿನಗೇ ಬಿಟ್ಟಿ ಊಟ ಹಾಕ್ತಿರೋದು ಬಿಗ್ ಬಾಸ್ ಮತ್ತು ಕಲರ್ಸ್ ಅನ್ನೋದು ನೆನಪಿರಲಿ" ಎಂದು ಮಂಜು ಅವರ ಕೈ ಹಿಡಿಯಲಿರುವ ಸಂಧ್ಯಾ ಖುಷಿ ತಿರುಗೇಟು ನೀಡಿದ್ದಾರೆ. ಸದ್ಯ ಈ ಸ್ಕ್ರೀನ್‌ಶಾಟ್ ಹೆಚ್ಚು ವೈರಲ್ ಆಗ್ತಿದ್ದು ಗಿಲ್ಲಿ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ನಟ ಮಂಜು ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಮಂಜು ಮದುವೆಯಾಗುತ್ತಿರುವ ಹುಡುಗಿ ಸಂಧ್ಯಾ ಖುಷಿ ಪ್ರಸ್ತುತ ಆರ್‌ಆರ್ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು ಮೂರು ತಿಂಗಳ ಹಿಂದೆ ಸ್ನೇಹಿತರೊಬ್ಬರ ಮೂಲಕ ಉಗ್ರಂ ಮಂಜು ಅವರಿಗೆ ಸಂಧ್ಯಾ ಅವರ ಪರಿಚಯವಾಗಿತ್ತು. ಆ ಪರಿಚಯವು ನಂತರ ಸ್ನೇಹಕ್ಕೆ ತಿರುಗಿ, ಇಬ್ಬರ ಆಲೋಚನೆಗಳು ಒಂದೇ ರೀತಿಯದ್ದಾಗಿರುವುದರಿಂದ ಮದುವೆ ನಿರ್ಧಾರಕ್ಕೆ ಬಂದರು. ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಕೊನೆಗೆ ಮದುವೆ ನಿಶ್ಚಯವಾಯಿತು. ಪೀಣ್ಯದಲ್ಲಿರುವ ಸಂಧ್ಯಾ ಅವರ ಮನೆಯಲ್ಲಿ ಇದೆ ತಿಂಗಳು ನವೆಂಬರ್ 9ರಂದು ಸಿಂಪಲ್ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆದಿತ್ತು. ಜನವರಿ ಅಥವಾ ಫೆಬ್ರವರಿಯಲ್ಲಿ ಮಂಜು ಹಾಗೂ ಸಂಧ್ಯಾ ಅವರ ಮದುವೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂಧ್ಯಾ ಅವರಿಗೂ ಚಿತ್ರರಂಗಕ್ಕೂ ಯಾವುದೇ ನಂಟಿಲ್ಲ. ಅವರು ಆಸ್ಪತ್ರೆಯ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸಿನಿಮಾಗಳನ್ನು ನೋಡುವುದು ಕಡಿಮೆ, ಆದರೆ ಕಳೆದ ವರ್ಷ ಬಿಗ್‌ಬಾಸ್ ಶೋ ವೀಕ್ಷಿಸಿದ್ದರಂತೆ. ಮಂಜು ಅವರು ಇತ್ತೀಚಿನ ಒಂದು ಮಾಧ್ಯಮದ ಮೂಲಕ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಮಂಜು, ‘ಉಗ್ರಂ’ ಚಿತ್ರದ ಪಾತ್ರದಿಂದ ಗಮನ ಸೆಳೆದಿದ್ದರು. ಅದಾದ ನಂತರ ಅವರು ‘ಉಗ್ರಂ ಮಂಜು’ ಎಂದೇ ಖ್ಯಾತರಾಗಿದ್ದಾರೆ. ‘ಮ್ಯಾಕ್ಸ್’ ಚಿತ್ರದಲ್ಲಿಯೂ ಅವರು ನಟಿಸಿದ್ದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ನಿಮ್ಮ ನೆಚ್ಚಿನ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಯಾರೆಂದು ಕಾಮೆಂಟ್ ಮಾಡಿ, ಧನ್ಯವಾದಗಳು.