Feb 16, 2026 Languages : ಕನ್ನಡ | English

ಬಿಗ್ಬಾಸ್ ಮನೆಗೆ ಹಳೆ ಸ್ಪರ್ಧಿಗಳು ಯಾಕೆ ಬಂದ್ರು ಗೊತ್ತಾ? ಬಾಯ್ತಪ್ಪಿ ಎಲ್ಲಾ ಬಾಯ್ಬಿಟ್ಟ ಚೈತ್ರಾ

ಬಿಗ್ ಬಾಸ್ ಮನೆ ಸದ್ಯ ಸಕತ್ ಟಾಕ್ ಆಗ್ತಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಷೋ ಆಗಿ ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷ. ಬಿಗ್‌ಬಾಸ್ ಸೀಸನ್ 12 ರಲ್ಲಿ ಈ ವಾರ ಮಾಜಿ ಸ್ಪರ್ಧಿ ಬಂದಿದ್ದರಿಂದ ಮನೆ ಹೆಚ್ಚು ಗದ್ದಲದಿಂದ ತುಂಬಿದೆ. ರಜತ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಮನೆಗೆ ಅತಿಥಿಗಳಾಗಿ ಪ್ರವೇಶಿಸಿ, ಈಗ ಇರುವ ಸ್ಪರ್ಧಿಗಳಿಗೆ ಹೆಚ್ಚು ಕ್ವಾಟ್ಲೆ ಕೊಡುತ್ತಿದ್ದಾರೆ. ಗಿಲ್ಲಿ ಎಲ್ಲರಿಗೂ ಟಾಂಗ್ ಕೊಡ್ತಿರೋದು ಬಿಗ್ ಬಾಸ್ ವೀಕ್ಷಕರಿಗೆ ಮಜಾ ನೀಡುತ್ತಿದ್ದರೂ, ಕೆಲವರಿಗೆ ಅಸಮಾಧಾನ ಆಗ್ತಿದೆ ಎನ್ನಬಹುದು. 

ಬಿಗ್‌ಬಾಸ್ ಸೀಸನ್ 12
ಬಿಗ್‌ಬಾಸ್ ಸೀಸನ್ 12

ಮನೆ ಈ ಸಾರಿ ಹೋಟೆಲ್ ಆಗಿ ಬದಲಾಗಿದ್ದು, ಸ್ಪರ್ಧಿಗಳು ಸಿಬ್ಬಂದಿಯಾಗಿ ಅತಿಥಿಗಳಿಗೆ ಊಟೋಪಚಾರ ಮಾಡುವ ಟಾಸ್ಕ್ ಪಡೆದಿದ್ದಾರೆ. ಆರಂಭದಲ್ಲೇ ಮಂಜು ಮತ್ತು ಈ ರಜತ್ ಬಗ್ಗೆ ಗಿಲ್ಲಿ ಮಾಡಿದ ಕಾಮಿಡಿ ಅತಿಥಿಗಳಿಗೆ ಬೇಸರ ತಂದಿದ್ದು, ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಅತಿಥಿಗಳ ಪ್ರವೇಶದ ಹಿಂದೆ ಬಿಗ್‌ಬಾಸ್ ನೀಡಿರುವ ಸೀಕ್ರೆಟ್ ಟಾಸ್ಕ್ ಮನೆಯಲ್ಲಿನ ಒಗ್ಗಟ್ಟನ್ನು ಪರೀಕ್ಷಿಸುವುದಾಗಿದೆ ಎಂಬ ಮಾತು ಹರಿದಾಡುತ್ತಿದೆ.

ಚೈತ್ರಾ ತ್ರಿವಿಕ್ರಮ್ ಜೊತೆ ಮಾತನಾಡುವಾಗ, "ಇವತ್ತು ಆಡಿದ ಆಟದಿಂದ ಇವರಲ್ಲಿ ಒಗ್ಗಟ್ಟು ಇಲ್ಲ ಅನ್ನೋದು ಗೊತ್ತಾಯ್ತು. ನಾವು ಬಂದಿರುವುದು ಅವರ ಒಗ್ಗಟ್ಟು ಪರೀಕ್ಷಿಸಲು" ಎಂದು ಹೇಳಿದ್ದು ವೈರಲ್ ಆಗಿದೆ. ಇದರಿಂದ ವೀಕ್ಷಕರು ಮಾಜಿ ಸ್ಪರ್ಧಿಗಳಿಗೆ ಮನೆಯ ಒಗ್ಗಟ್ಟು ಮುರಿಯುವ ಟಾಸ್ಕ್ ನೀಡಲಾಗಿದೆ ಎಂದು ಹೆಚ್ಚು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಅತಿಥಿಗಳ ಆರ್ಭಟದ ನಡುವೆ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಹೊಸ ಬದಲಾವಣೆ ಕಂಡುಬಂದಿದೆ. ಮೊದಲಿನಿಂದಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಈ ವಾರ ಅತಿಥಿಗಳ ಅತಿಯಾದ ಆಟದಿಂದ ಇಬ್ಬರೂ ಒಂದಾಗಿದ್ದಾರೆ. ಗಿಲ್ಲಿ ಸದಾ ಅಶ್ವಿನಿ ಕಾಲೆಳೆಯುತ್ತಿದ್ದರೆ, ಆಕೆ ಕೂಗಾಡುತ್ತಿದ್ದಳು. ಆದರೆ ಈಗ ಇಬ್ಬರೂ ಒಟ್ಟಾಗಿ ಅತಿಥಿಗಳ ವಿರುದ್ಧ ನಿಂತಂತೆ ತೋರುತ್ತಿದೆ.

ಅತಿಥಿಗಳ ಗರಂ ಆಟದಿಂದ ಮನೆ ಮಂದಿ ಗಿಲ್ಲಿ ವಿರುದ್ಧ ತಿರುಗಿಬಿದ್ದಾಗ, ಗಿಲ್ಲಿ ಸೈಲೆಂಟ್ ಆಗಿರುವುದು ಅಶ್ವಿನಿಗೆ ಇಷ್ಟವಾಗಲಿಲ್ಲ. ಆಕೆ ಗಿಲ್ಲಿಯನ್ನು ಸಮಾಧಾನಪಡಿಸಿ, "ಕೂಲ್ ಆಗಿರು, ಏನಾದರೂ ಹಿಂಸೆ ಅನ್ನಿಸಿದರೆ ನಾನು ಕೂಗುತ್ತೇನೆ" ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ. ಈ ನಡೆ ವೀಕ್ಷಕರಿಗೆ ಅಚ್ಚರಿ ಮೂಡಿಸಿದ್ದು, ಇಬ್ಬರೂ ಸ್ನೇಹಿತರಾಗಿ ಮುಂದುವರಿಯಲಿ, ಅತಿಥಿಗಳ ಆಟಕ್ಕೆ ಆದಷ್ಟು ಬೇಗ ಬ್ರೇಕ್ ಹಾಕಲಿ ಎಂದು ಹಾರೈಸುತ್ತಿದ್ದಾರೆ. ಬಿಗ್ ಮನೇಲಿ ಯಾರು ಸದ್ಯ ಸಕತ್ ಆಟ ಆಡುತ್ತಿದ್ದಾರೆ ಎಂದು ನಿಮ್ಮ ಅನಿಸಿಕೆ ತಿಳಿಸಿ, ಹಾಗೆ ನಿಮಗೆ ಯಾರು ಇಷ್ಟ ಎಂದು ಕಾಮೆಂಟ್ ಮಾಡಿ ತಿಳಿಸಿ.

Latest News