ಇನ್ನು ಪೆಟ್ರೋಲ್ ಬಂಕ್‌ಗೆ ಹೋಗಿ ಜೇಬು ಖಾಲಿ ಮಾಡಿಕೊಳ್ಳುವ ಚಿಂತೆ ಇಲ್ಲ! ಟೊಯೋಟಾ ಕಂಪನಿ 2026ರ ಮಧ್ಯಭಾಗದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರು ‘ಅರ್ಬನ್ ಕ್ರೂಸರ್ ಇಬೆಲ್ಲಾ’ (Urban Cruiser Ebella) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ತುಂಬಾ ಗೊಂದಲಕ್ಕೆ ಈಡಾಗಿರುವ ಗ್ರಾಹಕರಿಗೆ ಇದು ಸಿಹಿ ಸುದ್ದಿ. ಟೊಯೋಟಾ ಕಂಪನಿ ತನ್ನ ಗಟ್ಟಿತನ ಮತ್ತು ವಿಶ್ವಾಸಾರ್ಹತೆಯಿಂದ ಹೆಸರಾಗಿದ್ದು, ಈ ಹೊಸ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಆಯ್ಕೆಯಾಗಿ ಹೊರಹೊಮ್ಮಲಿದೆ.
ಈ ಕಾರಿನ ವಿನ್ಯಾಸ ‘ಅರ್ಬನ್ ಎಸ್‌ಯುವಿ’ ಶೈಲಿಯಲ್ಲಿದ್ದು, ನಗರ ಹಾಗೂ ಹಳ್ಳಿಯ ರಸ್ತೆಗಳಿಗೂ ಸೂಕ್ತವಾಗಿದೆ. ಮುಂಭಾಗದಲ್ಲಿ ಶಾರ್ಪ್ ಎಲ್‌ಇಡಿ ಲೈಟ್‌ಗಳು, ಆಕರ್ಷಕ ಗ್ರಿಲ್, ಹಿಂಭಾಗದಲ್ಲಿ ಪ್ರೀಮಿಯಂ ಬಂಪರ್ ಮತ್ತು ಲೈಟಿಂಗ್ ಸಿಸ್ಟಮ್ ಇದನ್ನು ವಿಶಿಷ್ಟವಾಗಿಸುತ್ತವೆ. ರಸ್ತೆಯಲ್ಲಿ ಓಡುತ್ತಿರುವಾಗ ಜನರ ಕಣ್ಣು ಸೆಳೆಯುವಂತಿದೆ. ಕಾರಿನ ಲುಕ್ ಮಾತ್ರವಲ್ಲ, ಅದರ ಬಿಲ್ಟ್ ಕ್ವಾಲಿಟಿಯೂ ಪ್ರೀಮಿಯಂ ಮಟ್ಟದಲ್ಲಿದೆ.
ಒಳಾಂಗಣದ ವಿಷಯಕ್ಕೆ ಬಂದರೆ, ಈ ಕಾರು ಐಷಾರಾಮಿ ಅನುಭವ ನೀಡುತ್ತದೆ. ದೊಡ್ಡ ಟಚ್‌ಸ್ಕ್ರೀನ್, ಬ್ಲೂಟೂತ್, ನ್ಯಾವಿಗೇಷನ್, ವಾಯ್ಸ್ ಕಮಾಂಡ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆರಾಮದಾಯಕ ಸೀಟು, ಈ ಎಲ್ಲವು ಸೇರಿ ಆರಾಮದಾಯಕ ಅತಿ ಹೆಚ್ಚು ದೂರ ಗಾಡಿ ಓಡಿಸಬಹುದು. ಈ ಕಾರು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ದೀರ್ಘ ದೂರ ಸಾಗುವ ಸಾಮರ್ಥ್ಯವಿದೆ. ಟೊಯೋಟಾ ಕಂಪನಿ ಈ ಕಾರಿನ ರೇಂಜ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ, ಆದರೆ ಮಾರುಕಟ್ಟೆ ನಿರೀಕ್ಷೆಗಳ ಪ್ರಕಾರ ಇದು ಉತ್ತಮ ಮೈಲೇಜ್ ನೀಡಲಿದೆ.
ಸುರಕ್ಷತೆ ವಿಷಯದಲ್ಲಿ ಟೊಯೋಟಾ ಎಂದರೆ ನಂಬಿಕೆ. ಈ ಕಾರಿನಲ್ಲಿ ಏರ್‌ಬ್ಯಾಗ್ಸ್, ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್ ಮುಂತಾದ ಫೀಚರ್ಸ್ ಇವೆ. ಬೆಟ್ಟ ಹತ್ತುವಾಗ ಕಾರು ಹಿಂದಕ್ಕೆ ಜಾರದಂತೆ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ₹15 ಲಕ್ಷದಿಂದ ₹20 ಲಕ್ಷದವರೆಗೆ ಇದರ (ex-showroom) ಬೆಲೆ ನಿರೀಕ್ಷಿಸಲಾಗಿದೆ. ಕಂಪನಿ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ, ಆದರೆ ಮಾರುಕಟ್ಟೆ ವರದಿಗಳ ಪ್ರಕಾರ 2026ರ ಮಧ್ಯಭಾಗದಲ್ಲಿ ಬಿಡುಗಡೆ ಖಚಿತ.
'ಟೊಯೋಟಾ ಅರ್ಬನ್ ಕ್ರೂಸರ್ ಇಬೆಲ್ಲಾ' ಎಲೆಕ್ಟ್ರಿಕ್ ಕಾರು ತಂತ್ರಜ್ಞಾನ, ವಿನ್ಯಾಸ ಮತ್ತು ಸುರಕ್ಷತೆಯ ಸಮತೋಲನ ಹೊಂದಿದ್ದು, ಪೆಟ್ರೋಲ್ ಖರ್ಚು ಕಡಿಮೆ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಕಾರು ಬಿಡುಗಡೆಗೆ ಕಾಯುತ್ತಿರುವವರಿಗೆ ಇದು ಭರವಸೆಯ ಸುದ್ದಿ. ಪರಿಸರ ಸ್ನೇಹಿ ವಾಹನಗಳತ್ತ ಭಾರತ ಸಾಗುತ್ತಿರುವ ಈ ಸಮಯದಲ್ಲಿ ಟೊಯೋಟಾ ಇಬೆಲ್ಲಾ ಹೊಸ ದಿಕ್ಕು ತೋರಿಸಲಿದೆ ಎನ್ನಬಹುದು.