Apr 28, 2026 Languages : ಕನ್ನಡ | English

ನಿನ್ನೆಯ ಪಂದ್ಯದ ಬಳಿಕ ಈ ಸಲಾನೂ ಕಪ್ ನಮ್ದೇ ಅಂತಿದ್ದಾರೆ ಆರ್ಸಿಬಿ ಫ್ಯಾನ್ಸ್ - ಪ್ಲೇ ಆಫ್ ಗೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಇವತ್ತು ನಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳೆಲ್ಲಾ ಫುಲ್ ಕೆಂಪು ಮಯವಾಗಿರೋದಕ್ಕೆ ಕಾರಣ ಗೊತ್ತಲ್ಲ? ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಮ್ಮ ಬೆಂಗಳೂರು ಹುಡುಗರು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅವರದ್ದೇ ಮನೆಯಲ್ಲಿ ಧೂಳೀಪಟ ಮಾಡಿದ್ದಾರೆ!

ಡೆಲ್ಲಿ ತಂಡವನ್ನ ಧೂಳೀಪಟ ಮಾಡಿ ಪ್ಲೇಆಫ್‌ಗೆ ಹತ್ತಿರವಾದ ಆರ್‌ಸಿಬಿ; | Photo Credit: https://www.indiatoday
ಡೆಲ್ಲಿ ತಂಡವನ್ನ ಧೂಳೀಪಟ ಮಾಡಿ ಪ್ಲೇಆಫ್‌ಗೆ ಹತ್ತಿರವಾದ ಆರ್‌ಸಿಬಿ; | Photo Credit: https://www.indiatoday

ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆರಿಸಿಕೊಂಡಾಗ ಏನೋ ಪ್ಲಾನ್ ಇತ್ತು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ಡೆಲ್ಲಿ ತಂಡ ಬರಿ 75 ರನ್‌ಗಳಿಗೆ ಆಲ್-ಔಟ್ ಆಗುತ್ತೆ ಅಂತ ಯಾರೂ ಅಂದಾಜು ಮಾಡಿರಲಿಲ್ಲ. ನಮ್ಮ ಬೌಲರ್‌ಗಳ ಬೆಂಕಿಯಂತಹ ದಾಳಿಗೆ ಡೆಲ್ಲಿಯ ಬ್ಯಾಟರ್‌ಗಳು ಪೆವಿಲಿಯನ್‌ಗೆ ಕ್ಯೂ ಹಚ್ಚಿದ್ರು. ಬರಿ 9 ವಿಕೆಟ್ ಬಾಕಿ ಇರುವಂತೆಯೇ ಆರ್‌ಸಿಬಿ ಈ ಚೇಸಿಂಗ್ ಮುಗಿಸಿ, ಭರ್ಜರಿ ಗೆಲುವು ದಾಖಲಿಸಿತು!

ನಮ್ಮ ಕಿಂಗ್ ಕೊಹ್ಲಿ ಈ ಮ್ಯಾಚ್‌ನಲ್ಲಿ ಮಾತ್ರ ಮಸ್ತ್ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ! ಐಪಿಎಲ್ ಹಿಸ್ಟರಿಯಲ್ಲೇ 9,000 ರನ್ ಬಾರಿಸಿದ ಮೊದಲ ಪ್ಲೇಯರ್ ಅಂತ ಸೌಂಡ್ ಮಾಡಿರೋದು ನಮ್ಮ ಕೊಹ್ಲಿನೇ. ಐಪಿಎಲ್ ಶುರುವಾದಾಗಿನಿಂದ ಇವತ್ತಿನವರೆಗೂ ಆರ್‌ಸಿಬಿ ಬಿಟ್ಟು ಬೇರೆ ಟೀಮ್ ಕಡೆ ತಿರುಗಿಯೂ ನೋಡದ ಅವರ ನಿಷ್ಠೆ ಮತ್ತೆ ಮೈದಾನದಲ್ಲಿ ಅವರ ಅಬ್ಬರ ನೋಡೋಕೆ ಎರಡು ಕಣ್ಣು ಸಾಲಲ್ಲ. ಸ್ಟೇಡಿಯಂ ತುಂಬಾ ಬರೀ ಕೊಹ್ಲಿ ಹೆಸರೇ ಕೇಳಿಸ್ತಾ ಇತ್ತು, ಇದು ಡೆಲ್ಲಿ ಸ್ಟೇಡಿಯಂನೋ ಅಥವಾ ನಮ್ಮ ಚಿನ್ನಸ್ವಾಮಿನೋ ಅಂತ ಕನ್ಫ್ಯೂಸ್ ಆಗೋ ರೇಂಜ್‌ಗೆ ಫ್ಯಾನ್ಸ್ ಅಬ್ಬರಿಸ್ತಾ ಇದ್ರು!

ಈ ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ 2ನೇ ಸ್ಥಾನಕ್ಕೆ ಜಿಗಿದಿದೆ. 8 ಪಂದ್ಯಗಳಲ್ಲಿ 6 ಗೆಲುವು ಕಂಡಿರೋ ನಮ್ಮ ತಂಡಕ್ಕೆ ಈಗ 12 ಪಾಯಿಂಟ್ಸ್‌ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್‌ಸಿಬಿಯ ನೆಟ್ ರನ್ ರೇಟ್ (+1.919) ಈಗ ಲೀಗ್‌ನಲ್ಲೇ ಕಿಂಗ್. ಇನ್ನುಳಿದ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದರೂ ಆರ್‌ಸಿಬಿ ಪ್ಲೇಆಫ್‌ ಹಂತಕ್ಕೆ ಆರಾಮಾಗಿ ಕ್ವಾಲಿಫೈ ಆಗುತ್ತೆ.

ಇತ್ತ ಪಂತ್‌ ಅಂಡ್ ಟೀಮ್ ಪರಿಸ್ಥಿತಿಯಂತೂ ಫುಲ್ ಡಲ್ ಆಗಿದೆ. 7ನೇ ಪ್ಲೇಸ್‌ನಲ್ಲಿರೋ ಡೆಲ್ಲಿ ಏನಾದ್ರೂ ಪ್ಲೇಆಫ್‌ ಹತ್ತಿರ ಸುಳಿಯಬೇಕಾದ್ರೆ, ಬಾಕಿ ಇರೋ 6 ಮ್ಯಾಚ್‌ನಲ್ಲಿ ಕನಿಷ್ಠ 5 ಮ್ಯಾಚ್‌ ಗೆಲ್ಲಲೇಬೇಕು. ಅವರ ರನ್ ರೇಟ್ ಕೂಡ ಮೈನಸ್‌ನಲ್ಲಿರೋದ್ರಿಂದ, ಇನ್ಮುಂದೆ ಅವರಿಗೆ ಆಡೋ ಪ್ರತಿಯೊಂದು ಮ್ಯಾಚ್ ಕೂಡ ಡು-ಆರ್-ಡೈ ಫೈನಲ್ ಇದ್ದ ಹಾಗೆ!

ಆದ್ರೆ ನಮ್ಮ ಆರ್‌ಸಿಬಿ ನೋಡಿ, ಬ್ಯಾಟಿಂಗ್ ಪಕ್ಕಾ ಇತ್ತು, ಬೌಲಿಂಗ್ ಅಂತೂ ಬೆಂಕಿ.. ಇನ್ನು ಫೀಲ್ಡಿಂಗ್ ಬಗ್ಗೆ ಕೇಳಲೇಬೇಡಿ, ಸೂಪರ್ ಅಷ್ಟೇ! ರೆಡ್ ಆರ್ಮಿಯ ಈ ರೇಂಜ್ ಪರ್ಫಾರ್ಮೆನ್ಸ್ ನೋಡಿದ್ರೆ, ಈ ಸಲ ಕಪ್ ನಮ್ಮ ಕೈ ಸೇರೋದು ಗ್ಯಾರಂಟಿ ಅಂತ ಫ್ಯಾನ್ಸ್ ಫುಲ್ ಖುಷಿಯಲ್ಲಿ ಹಬ್ಬ ಮಾಡ್ತಿದ್ದಾರೆ..

Latest News