ಐಪಿಎಲ್ ಸಮರಕ್ಕೆ ಸಜ್ಜಾದ ರನ್ ಮಷಿನ್ - ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ದೊಡ್ಡ ಸೂಚನೆ ಕೊಟ್ಟ ವಿರಾಟ್!!

ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕಾಯುವಿಕೆಗೆ ಈಗ ಅಂತ್ಯ ಬೀಳುವ ಸಮಯ ಹತ್ತಿರ ಬಂದಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ (IPL 2026) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ ವೇಳಾಪಟ್ಟಿಯ ಮೊದಲ ಹಂತ ಮಾರ್ಚ್ 12 ರಂದೇ ಬಿಡುಗಡೆಯಾಗಲಿದೆ.

ವಿರಾಟ್ ಕೊಹ್ಲಿ ‘ದ ಕಿಂಗ್ ಇಸ್ ರೆಡಿ’!! | Photo Credit: X@Muffadal_vohra
ವಿರಾಟ್ ಕೊಹ್ಲಿ ‘ದ ಕಿಂಗ್ ಇಸ್ ರೆಡಿ’!! | Photo Credit: X@Muffadal_vohra

ಹಂತ ಹಂತವಾಗಿ ವೇಳಾಪಟ್ಟಿ ಬಿಡುಗಡೆ

ಈ ಬಾರಿ ದೇಶದಲ್ಲಿ ವಿವಿಧ ರಾಜ್ಯಗಳ ಚುನಾವಣೆಗಳು ನಡೆಯಲಿರುವುದರಿಂದ, ಬಿಸಿಸಿಐ ಇಡೀ ವೇಳಾಪಟ್ಟಿಯನ್ನು ಒಮ್ಮೆಲೇ ಪ್ರಕಟಿಸುತ್ತಿಲ್ಲ. ಅದರ ಬದಲಾಗಿ, ಮೊದಲ 20 ದಿನಗಳ ಪಂದ್ಯಗಳ ಪಟ್ಟಿಯನ್ನು ಮಾತ್ರ ಮಾರ್ಚ್ 12 ಬಿಡುಗಡೆ ಮಾಡಲಾಗುತ್ತಿದೆ. ಚುನಾವಣೆಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ನಂತರದ ಪಂದ್ಯಗಳ ದಿನಾಂಕ ಮತ್ತು ಸ್ಥಳಗಳನ್ನು ನಿರ್ಧರಿಸಲಾಗುತ್ತದೆ. ಇದು ಭದ್ರತಾ ದೃಷ್ಟಿಯಿಂದ ಕೈಗೊಂಡಿರುವ ಮಹತ್ವದ ನಿರ್ಧಾರವಾಗಿದೆ.

ಮಾರ್ಚ್ 28ಕ್ಕೆ ಅದ್ದೂರಿ ಚಾಲನೆ?

ಐಪಿಎಲ್ ಹಬ್ಬಕ್ಕೆ ಮುಹೂರ್ತ ಫಿಕ್ಸ್. ಮಾರ್ಚ್ 28ರಂದು ಕ್ರೀಡಾಂಗಣದಲ್ಲಿ ಹೈ-ವೋಲ್ಟೇಜ್ ಪಂದ್ಯ ನಡೆಯೋದು ಬಹುತೇಕ ಖಚಿತ. ಮೊದಲ ಮ್ಯಾಚ್‌ನಲ್ಲೇ ಕಿಂಗ್ ಕೊಹ್ಲಿಯ ಆರ್‌ಸಿಬಿ ಮತ್ತು ಎಂ.ಎಸ್. ಧೋನಿಯ ಸಿಎಸ್‌ಕೆ ತಂಡಗಳು ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಮಾರ್ಚ್ 15ರಂದು ದೆಹಲಿಯಲ್ಲಿ ಎಲ್ಲಾ ಕ್ಯಾಪ್ಟನ್‌ಗಳು ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಕ್ರಿಕೆಟ್ ಸಮರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಆರ್‌ಸಿಬಿ ಅಭಿಮಾನಿಗಳೇ, ನಿಮ್ಮ ಸಂಭ್ರಮಕ್ಕೆ ಈಗಲೇ ತಯಾರಿ ನಡೆಸಿ.

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್

ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋ ಮತ್ತು ಫೋಟೋಗಳು ಈಗ ಕಾಳ್ಗಿಚ್ಚಿನಂತೆ ಹಬ್ಬಿವೆ. 'ದ ಕಿಂಗ್ ಈಸ್ ರೆಡಿ' ಎನ್ನುವ ಪವರ್‌ಫುಲ್ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಅವರ ಮಾಂಟೇಜ್ ವಿಡಿಯೋ ನೋಡಿದ ಆರ್‌ಸಿಬಿ ಅಭಿಮಾನಿಗಳು ಅಕ್ಷರಶಃ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೊಹ್ಲಿ ಅವರ ಆ ಕಿಲ್ಲರ್ ಲುಕ್ ಮತ್ತು ಬ್ಯಾಟಿಂಗ್ ಝಲಕ್ ನೋಡಿ, ಈ ಸಲ ಕಪ್ ಮತ್ತೊಮ್ಮೆ ಗೆಲ್ಲೋದು ಪಕ್ಕಾ ಎನ್ನುವ ಚೈತನ್ಯ ಫ್ಯಾನ್ಸ್‌ನಲ್ಲಿ ಮನೆಮಾಡಿದೆ. 

ಹೊಸ ಫಾರ್ಮ್ಯಾಟ್ ಮತ್ತು ರೋಚಕತೆ

ಈ ಬಾರಿಯ ಐಪಿಎಲ್ ಮತ್ತಷ್ಟು ದೊಡ್ಡದಾಗಿರಲಿದೆ. ವರದಿಗಳ ಪ್ರಕಾರ, ಪಂದ್ಯಗಳ ಸಂಖ್ಯೆಯನ್ನು 84ಕ್ಕೆ ಹೆಚ್ಚಿಸುವ ಚರ್ಚೆಗಳು ನಡೆಯುತ್ತಿವೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಮನರಂಜನೆ ನೀಡಲಿದೆ. ರೋಹಿತ್ ಶರ್ಮಾ, ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರ ಮಿಂಚಿನ ಆಟವನ್ನ ನೋಡಲು ಐಪಿಎಲ್ ಟೀಸರ್ ವಿಡಿಯೋ ಈಗಾಗಲೇ ಕಾತರವನ್ನು ಹೆಚ್ಚಿಸಿದೆ. ಆರ್‌ಸಿಬಿ ಅಭಿಮಾನಿಗಳೇ, ನಿಮ್ಮ ಜರ್ಸಿಗಳನ್ನು ರೆಡಿ ಮಾಡಿಕೊಳ್ಳಿ, ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆ ಮತ್ತೊಮ್ಮೆ ಮೊಳಗಲಿದೆ. 

Latest News