ಆರ್‌ಸಿಬಿ ಐಪಿಎಲ್ 2026ರ ಕಪ್ ಗೆದ್ದಿರೋ ಹ್ಯಾಂಗೋವರ್ ಇನ್ನು ಯಾರಿಗೂ ಇಳಿದಂತಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ನಮ್ಮ ಬೆಂಗಳೂರು ಹುಡುಗರು ಈಗ ಫುಲ್ ಪಾರ್ಟಿ ಮೂಡ್‌ನಲ್ಲಿದ್ದಾರೆ. ಇಡೀ ದೇಶಾದ್ಯಂತ ಅಭಿಮಾನಿಗಳು ರಸ್ತೆಯಲ್ಲೇ ಹಬ್ಬ ಮಾಡುತ್ತಿದ್ದರೆ, ಅತ್ತ ಅಹಮದಾಬಾದ್‌ನಲ್ಲಿ ಆರ್‌ಸಿಬಿ ಟೀಮ್ ಹಮ್ಮಿಕೊಂಡಿದ್ದ ಸಕ್ಸಸ್ ಪಾರ್ಟಿಯಲ್ಲಿ ರಿಯಲ್ ಧಮಾಕಾ ನಡೆದಿದೆ.
ಟೂರ್ನಿಯುದ್ದಕ್ಕೂ ರನ್ ಮಷಿನ್ ಆಗಿ ಅಬ್ಬರಿಸಿದ್ದ ಕಿಂಗ್ ವಿರಾಟ್ ಕೊಹ್ಲಿ, ಪಾರ್ಟಿಯಲ್ಲಿ ಡ್ಯಾನ್ಸ್ ಮಷಿನ್ ಆಗಿ ಬದಲಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಡ್ಯಾನ್ಸ್ ಮಾಡಿರೋ ವಿಡಿಯೋ ಅಕ್ಷರಶಃ ಬಿರುಗಾಳಿ ಎಬ್ಬಿಸಿದೆ.
ಕೊಹ್ಲಿ ಮಾಸ್ ಸ್ಟೆಪ್ಸ್ ನೋಡಿ ಶಾಕ್ ಆದ ಅನುಷ್ಕಾ ಶರ್ಮಾ!
ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಪಾರ್ಟಿಯ ಇಂಟರೆಸ್ಟಿಂಗ್ ವಿಡಿಯೋ ಒಂದನ್ನು ಶೇರ್ ಮಾಡಿದೆ. ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಎಂದಿನ ಎನರ್ಜಿಟಿಕ್ ಸ್ಟೈಲ್‌ನಲ್ಲಿ ಬಾಲಿವುಡ್‌ನ ಮಾಸ್ ಸಾಂಗ್ಸ್ ಮತ್ತು ಪಾಪ್ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ ಅವರ ಈ ದಿಢೀರ್ ಮತ್ತು ರಗಡ್ ಡ್ಯಾನ್ಸ್ ಮೂವ್ಸ್ ನೋಡಿ ಪಕ್ಕದಲ್ಲೇ ನಿಂತಿದ್ದ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಒಂದು ಕ್ಷಣ ಕಣ್ಣರಳಿಸಿ ಆಶ್ಚರ್ಯಪಟ್ಟಿದ್ದಾರೆ. ಆಮೇಲೆ ಕೊಹ್ಲಿ ಅವರ ಎನರ್ಜಿಗೆ ಫುಲ್ ಫಿದಾ ಆದ ಅನುಷ್ಕಾ, ಜೋರಾಗಿ ನಗುತ್ತಾ ಪತಿಯ ಡ್ಯಾನ್ಸ್ ಅನ್ನು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಇನ್ನು ಇವರಿಬ್ಬರ ಜೊತೆಗೆ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ತಂಡದ ಇತರೆ ಆಟಗಾರರು ಕೂಡ ಕುಣಿದು ಕುಪ್ಪಳಿಸಿ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಆರ್‌ಸಿಬಿ!
ಈ ಬಾರಿಯ ಐಪಿಎಲ್‌ನಲ್ಲಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮತ್ತೊಮ್ಮೆ ಚಾಂಪಿಯನ್ ಆಗಿ ಗೆದ್ದು ಬೀಗಿದೆ. ಕಳೆದ ಬಾರಿ ಅಂದ್ರೆ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಧೂಳೀಪಟ ಮಾಡಿದ್ದ ಆರ್‌ಸಿಬಿ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಮ್ಯಾಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 155 ರನ್ ಕಲೆಹಾಕಿತ್ತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನು ಎರಡು ಓವರ್‌ಗಳು ಬಾಕಿ ಇರುವಂತೆಯೇ, ಅಂದರೆ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಚಚ್ಚಿ ಭರ್ಜರಿ ಜಯ ದಾಖಲಿಸಿತು. ಈ ಐತಿಹಾಸಿಕ ಗೆಲುವಿನೊಂದಿಗೆ ಆರ್‌ಸಿಬಿ ಇತಿಹಾಸದಲ್ಲೇ ಎರಡನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.
𝗞𝗶𝗻𝗴 𝗞𝗼𝗵𝗹𝗶’𝘀 𝗺𝗮𝘀𝘁𝗲𝗿𝗰𝗹𝗮𝘀𝘀 𝗼𝗻 𝘁𝗵𝗲 𝗱𝗮𝗻𝗰𝗲 𝗳𝗹𝗼𝗼𝗿 😉
— Royal Challengers Bengaluru (@RCBTweets) June 1, 2026
Pure vibes. Wholesome. And so much more. Anushka Sharma, thank you for being our Day 1. ❤️ pic.twitter.com/7Qmxxv6QtG
ಇತಿಹಾಸದ ಪುಟ ಸೇರಿದ ಬೆಂಗಳೂರು ಹುಡುಗರು!
ಐಪಿಎಲ್ ಹಿಸ್ಟರಿಯಲ್ಲೇ ಸತತವಾಗಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೂರನೇ ಬಲಿಷ್ಠ ತಂಡ ಅನ್ನೋ ಹೆಗ್ಗಳಿಕೆಗೆ ಈಗ ನಮ್ಮ ಆರ್‌ಸಿಬಿ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಅಪರೂಪದ ಸಾಧನೆಯನ್ನು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮಾತ್ರ ಮಾಡಿದ್ದವು.
ಚೆನ್ನೈ ಸೂಪರ್ ಕಿಂಗ್ಸ್ (CSK): 2010 ಮತ್ತು 2011 ರಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಿತ್ತು.
ಮುಂಬೈ ಇಂಡಿಯನ್ಸ್ (MI): 2019 ಮತ್ತು 2020 ರಲ್ಲಿ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಈಗ 2025 ಮತ್ತು 2026 ರಲ್ಲಿ ಸತತವಾಗಿ ಕಪ್ ಗೆಲ್ಲುವ ಮೂಲಕ ಇತಿಹಾಸವನ್ನು ರೀ-ರೈಟ್ ಮಾಡಿದೆ.
ವರ್ಷಗಳ ಕಾಲ ಟ್ರೋಫಿ ಗೆದ್ದಿಲ್ಲ ಅಂತ ಟ್ರೋಲ್ ಮಾಡ್ತಿದ್ದವರಿಗೆ ಆರ್‌ಸಿಬಿ ಈಗ ಸತತ ಎರಡು ಕಪ್ ಗೆದ್ದು ಬಾಯಿ ಮುಚ್ಚಿಸಿದೆ. ಮೈದಾನದಲ್ಲಿ ಬ್ಯಾಟ್‌ನಿಂದ ಅಬ್ಬರಿಸಿದ್ದ ಕಿಂಗ್ ಕೊಹ್ಲಿ, ಈಗ ಪಾರ್ಟಿಯಲ್ಲೂ ಸಖತ್ ಆಗಿ ಸ್ಟೆಪ್ಸ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.