ಕ್ರಿಕೆಟ್ ಮೈದಾನದಲ್ಲಿ ಆರ್‌ಸಿಬಿ ಆಟಗಾರರು ಅಬ್ಬರಿಸುತ್ತಿದ್ದರೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗ್ಯಾಲರಿಯಲ್ಲಿ ಕುಳಿತು ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ ಈ ಬಾರಿ ಸುದ್ದಿಯಾಗಿದ್ದು ಅವರು ಕೊಟ್ಟ ರಿಯಾಕ್ಷನ್ ಅಲ್ಲ, ಬದಲಾಗಿ ಅವರು ಧರಿಸಿದ್ದ ಉಡುಪು ಮತ್ತು ಆಭರಣದಂತಿದ್ದ ಆ ಒಂದು ಗಡಿಯಾರ!
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ್ರೆ ಮೈತುಂಬಾ ಒಡವೆ, ಅತಿಯಾದ ಮೇಕಪ್ ಇರುತ್ತೆ ಅಂದುಕೊಂಡರೆ ಅದು ತಪ್ಪು. ಅನುಷ್ಕಾ ಶರ್ಮಾ ಅವರ ಈ ಲೇಟೆಸ್ಟ್ ಲುಕ್ ನೋಡಿದರೆ ಸರಳತೆಯಲ್ಲೂ ಇಷ್ಟೊಂದು ಶ್ರೀಮಂತಿಕೆ ಇರುತ್ತಾ? ಅಂತ ನೀವು ಆಶ್ಚರ್ಯ ಪಡುತ್ತೀರಾ.
ಹದಿನೇಳು ಸಾವಿರದ ಆ 'ವೈಟ್ ಟಾಪ್'
ಪಂದ್ಯದ ವೇಳೆ ಅನುಷ್ಕಾ ತುಂಬಾ ಕೂಲ್ ಆಗಿ ಕಾಣಲು ಬಿಳಿ ಬಣ್ಣದ ಎಂಬ್ರಾಯ್ಡರಿ ಇರುವ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ಈ ಟಾಪ್ 'ಸೆಜಾನ್ನೆ' ಎಂಬ ಫ್ರೆಂಚ್ ಬ್ರ್ಯಾಂಡ್‌ನದ್ದು. ಇದರ ಬೆಲೆ ಸರಿಸುಮಾರು 17,000 ರೂಪಾಯಿ. ಒಬ್ಬ ಸಾಮಾನ್ಯ ಮನುಷ್ಯನ ಇಡೀ ತಿಂಗಳ ಸಂಬಳವನ್ನು ಅನುಷ್ಕಾ ಕೇವಲ ಒಂದು ಟಾಪ್‌ಗೆ ಖರ್ಚು ಮಾಡಿದ್ದಾರೆ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಆದರೆ ಅಸಲಿ ವಿಷಯ ಇರೋದು ಅವರ ಮಣಿಕಟ್ಟಿನ ಮೇಲೆ!
ಅರವತ್ತು ಲಕ್ಷದ 'ಚಿನ್ನದ' ಗಡಿಯಾರ;
ಅನುಷ್ಕಾ ಧರಿಸಿದ್ದ ಆ ಪುಟ್ಟ ಗೋಲ್ಡನ್ ವಾಚ್ ಬೆಲೆ ಕೇಳಿದರೆ ಯಾರಾದರೂ ಒಂದು ಕ್ಷಣ ಶಾಕ್ ಆಗಲೇಬೇಕು. ಅದು ಬರೀ ವಾಚ್ ಅಲ್ಲ, ಅದು 18 ಕ್ಯಾರೆಟ್ ಹಳದಿ ಚಿನ್ನದಿಂದ ಮಾಡಿದ 'ಕಾರ್ಟಿಯರ್' ಬ್ರ್ಯಾಂಡ್‌ನ ಅಮೂಲ್ಯ ಆಸ್ತಿ.
ಇದರ ಬೆಲೆ ಮಾರುಕಟ್ಟೆಯಲ್ಲಿ 28 ಲಕ್ಷದಿಂದ ಆರಂಭವಾಗಿ 61 ಲಕ್ಷ ರೂಪಾಯಿ ವರೆಗೂ ಇದೆ. ಅಂದರೆ, ಈ ಒಂದು ವಾಚ್ ಮಾರಿದರೆ ಬೆಂಗಳೂರಿನಂತಹ ನಗರದಲ್ಲಿ ಒಂದು ಸುಂದರವಾದ ಫ್ಲಾಟ್ ಅಥವಾ ಒಂದು ಐಷಾರಾಮಿ ಕಾರನ್ನು ಆರಾಮವಾಗಿ ಖರೀದಿಸಬಹುದು. ಸಣ್ಣ ಟಾಪ್‌ಗೆ ಲಕ್ಷಾಂತರ ರೂಪಾಯಿ ಬೆಲೆಯ ವಾಚ್ ಮ್ಯಾಚ್ ಮಾಡೋದು ಇದೆಯಲ್ಲ, ಅದು ಅನುಷ್ಕಾ ಶರ್ಮಾ ಅವರ ರಿಯಲ್ ಕ್ಲಾಸ್!
ಇಷ್ಟೊಂದು ದುಬಾರಿ ವಸ್ತುಗಳನ್ನು ಧರಿಸಿದ್ದರೂ ಅನುಷ್ಕಾ ತುಂಬಾ ಫ್ರೆಶ್ ಆಗಿ ಕಾಣುತ್ತಿದ್ದರು. ಮುಖಕ್ಕೆ ಅತಿಯಾದ ಪೌಡರ್ ಅಥವಾ ಮೇಕಪ್ ಹಚ್ಚದೆ, ನ್ಯಾಚುರಲ್ ಆಗಿಯೇ ಕ್ಯಾಮೆರಾ ಕಣ್ಣಿಗೆ ಬಿದ್ದರು. ಸೈಡ್ ಫ್ರೇಮ್ ಹೇರ್ ಸ್ಟೈಲ್ ಮತ್ತು ಪುಟ್ಟ ಕಿವಿಯೋಲೆಗಳು ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದವು.
ಸೆಲೆಬ್ರಿಟಿಗಳ ಲೋಕವೇ ಹಾಗೆ, ನಮಗೆ ಸಾಮಾನ್ಯ ಅನ್ನಿಸೋದು ಅವರಿಗೆ ಅತಿ ಸಾಮಾನ್ಯ. ಆದರೆ ಹದಿನೇಳು ಸಾವಿರದ ಬಟ್ಟೆಗೆ ಅರವತ್ತು ಲಕ್ಷದ ವಾಚ್ ಹಾಕುವುದು ದೊಡ್ಡ ಫ್ಯಾಷನ್ ಸ್ಟೇಟ್‌ಮೆಂಟ್ ಅಲ್ವಾ? ಪತಿಯನ್ನ ಬೆಂಬಲಿಸಲು ಬಂದ ಅನುಷ್ಕಾ, ಈ ಮೂಲಕ ಫ್ಯಾಷನ್ ಪ್ರಿಯರಿಗೆ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ!