Apr 9, 2026 Languages : ಕನ್ನಡ | English

ಈಡನ್ ಗಾರ್ಡನ್ಸ್‌ನಲ್ಲಿ ನೈಟ್ ರೈಡರ್ಸ್ ಅಬ್ಬರಿಸ್ತಾರಾ? ರಿಷಬ್ ಪಂತ್ ಸೈನ್ಯಕ್ಕೆ ಬ್ರೇಕ್ ಹಾಕಲು ಕೆಕೆಆರ್ ರೆಡಿ!! ಇಲ್ಲಿದೆ ಪ್ರಿಡಿಕ್ಷನ್ ;

ಐಪಿಎಲ್ 2026ರ 15ನೇ ಪಂದ್ಯಕ್ಕೆ ಇವತ್ತು ವೇದಿಕೆ ಸಿದ್ಧವಾಗಿದೆ. ಒಂದು ಕಡೆ ತವರು ಮೈದಾನದಲ್ಲಿ ಗೆಲುವಿಗಾಗಿ ಹಪಹಪಿಸ್ತಿರೋ ಕೋಲ್ಕತ್ತಾ ನೈಟ್ ರೈಡರ್ಸ್ (KKR), ಇನ್ನೊಂದು ಕಡೆ ಫುಲ್ ಫಾರ್ಮ್‌ನಲ್ಲಿರೋ ರಿಷಬ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (LSG). ಈ ಇಂಟರೆಸ್ಟಿಂಗ್ ಫೈಟ್ ಇವತ್ತು ಸಂಜೆ 7:30ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶುರುವಾಗಲಿದೆ. ಕೆಕೆಆರ್ ತಂಡಕ್ಕೆ ಈ ಮ್ಯಾಚ್ 'ಡು ಆರ್ ಡೈ' ಇದ್ದಂತೆ. 

KKRಗೆ ‘ಡು ಆರ್ ಡೈ’, LSG ಫೇವರಿಟ್ಸ್; | Photo Credit: X
KKRಗೆ ‘ಡು ಆರ್ ಡೈ’, LSG ಫೇವರಿಟ್ಸ್; | Photo Credit: X

ಈ ಸೀಸನ್‌ನಲ್ಲಿ ಕೆಕೆಆರ್ ಆರಂಭ ಅಂದುಕೊಂಡಷ್ಟು ಚೆನ್ನಾಗಿಲ್ಲ. ಮುಂಬೈ ಮತ್ತು ಹೈದರಾಬಾದ್ ವಿರುದ್ಧ ಸೋತು ಸುಣ್ಣವಾಗಿರೋ ನೈಟ್ ರೈಡರ್ಸ್‌ಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಮ್ಯಾಚ್ ಮಳೆಯಿಂದಾಗಿ ರದ್ದಾಗಿದ್ದು ಒಂದು ಪಾಯಿಂಟ್ ತಂದುಕೊಟ್ಟಿತು. ಆದ್ರೆ ಇವತ್ತು ಪಕ್ಕಾ ಗೆಲುವು ಬೇಕೇ ಬೇಕು. ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ತಂಡ ಇವತ್ತು ಹೇಗಾದ್ರೂ ಮಾಡಿ ಬೌನ್ಸ್ ಬ್ಯಾಕ್ ಮಾಡೋ ಪ್ಲಾನ್‌ನಲ್ಲಿದೆ. ಸುನಿಲ್ ನರೈನ್ ಮತ್ತು ವೈಭವ್ ಅರೋರಾ ಅವರ ಮೇಲೆ ತಂಡಕ್ಕೆ ತುಂಬಾ ಭರವಸೆ ಇದೆ.

ರಿಷಬ್ ಪಂತ್ ಅವರ ಲಕ್ನೋ ತಂಡ ಮೊದಲ ಮ್ಯಾಚ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೂ, ಆಮೇಲೆ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫುಲ್ ಕಾನ್ಫಿಡೆನ್ಸ್‌ನಲ್ಲಿದೆ. ಪಂತ್ ಹೋದ ಮ್ಯಾಚ್‌ನಲ್ಲಿ ಅಜೇಯ ಅರ್ಧಶತಕ ಬಾರಿಸಿ ತಾನಿನ್ನೂ ಕಿಂಗ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇವತ್ತು ಕೂಡ ಪಂತ್ ಬ್ಯಾಟ್‌ನಿಂದ ಸಿಕ್ಸರ್‌ಗಳ ಮಳೆ ಸುರಿಯುತ್ತಾ ಅಂತ ಫ್ಯಾನ್ಸ್ ಕಾಯ್ತಿದ್ದಾರೆ.

ಈಡನ್ ಗಾರ್ಡನ್ಸ್ ಪಿಚ್ ಅಂದ್ರೆ ಬ್ಯಾಟರ್‌ಗಳಿಗೆ ಹಬ್ಬ. ಆದ್ರೆ ಇಲ್ಲಿ ಸೀಮರ್‌ಗಳಿಗೆ ಆರಂಭದಲ್ಲಿ ಒಳ್ಳೆ ಸ್ವಿಂಗ್ ಸಿಗುತ್ತೆ. ಒಂದು ಚಿಂತೆಯ ವಿಷಯ ಅಂದ್ರೆ ಇವತ್ತು ಕೂಡ ಮಳೆ ಬರೋ ಸಾಧ್ಯತೆ ಇದೆಯಂತೆ. ಹಾಗಾಗಿ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ದುಕೊಳ್ಳೋದು ಬುದ್ಧಿವಂತಿಕೆ. ಯಾಕಂದ್ರೆ ಮಳೆ ಬಂದ್ರೆ ಡಿಎಲ್‌ಎಸ್ (DLS) ಲೆಕ್ಕಾಚಾರದಲ್ಲಿ ಚೇಸಿಂಗ್ ಮಾಡೋ ತಂಡಕ್ಕೆ ಅಡ್ವಾಂಟೇಜ್ ಜಾಸ್ತಿ ಇರುತ್ತೆ.

ಎಲ್ಲರ ಕಣ್ಣು ಲಕ್ನೋ ಕ್ಯಾಪ್ಟನ್ ರಿಷಬ್ ಪಂತ್ ಮೇಲೆ ಇದೆ. ಅವರ ಅಗ್ರೆಸಿವ್ ಬ್ಯಾಟಿಂಗ್ ಈಡನ್ ಗಾರ್ಡನ್ಸ್‌ನಲ್ಲಿ ವರ್ಕ್ ಆದ್ರೆ ಕೆಕೆಆರ್ ಬೌಲರ್‌ಗಳ ಕಥೆ ಅಷ್ಟೇ. ಕೆಕೆಆರ್ ತಂಡದ ಯುವ ವೇಗಿ ವೈಭವ್ ಅರೋರಾ ಸಖತ್ ಫಾರ್ಮ್‌ನಲ್ಲಿದ್ದಾರೆ. ರೈಟ್ ಹ್ಯಾಂಡ್ ಬ್ಯಾಟರ್‌ಗಳನ್ನ ಕಾಡೋದ್ರಲ್ಲಿ ಇವರು ಎತ್ತಿದ ಕೈ. ಇವತ್ತು ಲಕ್ನೋದ ಟಾಪ್ ಆರ್ಡರ್ ಉರುಳಿಸೋ ಜವಾಬ್ದಾರಿ ಇವರ ಮೇಲಿದೆ.

ಸಂಖ್ಯಾಶಾಸ್ತ್ರ ನೋಡಿದ್ರೆ ಕೆಕೆಆರ್ ಮತ್ತು ಎಲ್ಎಸ್‌ಜಿ ಮಧ್ಯೆ ಇದುವರೆಗೆ 6 ಮ್ಯಾಚ್ ನಡೆದಿದ್ದು, ಅದರಲ್ಲಿ ಲಕ್ನೋ 4 ಬಾರಿ ಗೆದ್ದಿದೆ. ಸದ್ಯದ ಫಾರ್ಮ್ ಮತ್ತು ತಂಡದ ಬ್ಯಾಲೆನ್ಸ್ ನೋಡಿದ್ರೆ ಇವತ್ತಿನ ಮ್ಯಾಚ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫೇವರಿಟ್ಸ್ ಅಂತ ಅನ್ಸುತ್ತೆ. ಆದ್ರೆ ಅಜಿಂಕ್ಯ ರಹಾನೆ ಅವರ ತಂಡ ತವರು ಮೈದಾನದಲ್ಲಿ ಮ್ಯಾಜಿಕ್ ಮಾಡಿದ್ರೂ ಮಾಡಬಹುದು. 

ಕೆಕೆಆರ್ ಸಂಭಾವ್ಯ ತಂಡ: ಅಜಿಂಕ್ಯ ರಹಾನೆ (C), ಅಂಗ್ರಿಶ್ ರಘುವಂಶಿ, ಫಿನ್ ಅಲೆನ್, ಕ್ಯಾಮರೂನ್ ಗ್ರೀನ್, ರಿಂಕು ಸಿಂಗ್, ಸುನಿಲ್ ನರೈನ್, ವೈಭವ್ ಅರೋರಾ.

ಎಲ್ಎಸ್‌ಜಿ ಸಂಭಾವ್ಯ ತಂಡ: ರಿಷಬ್ ಪಂತ್ (C), ಏಡನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಮೊಹಮ್ಮದ್ ಶಮಿ, ಅವೇಶ್ ಖಾನ್.

ನಿಮ್ಮ ಪ್ರಕಾರ ಇವತ್ತು ಈಡನ್ ಗಾರ್ಡನ್ಸ್‌ನಲ್ಲಿ ಯಾರು ವಿಜಯೋತ್ಸವ ಆಚರಿಸ್ತಾರೆ? ಕೆಕೆಆರ್ ಕಮ್‌ಬ್ಯಾಕ್ ಮಾಡುತ್ತಾ ಅಥವಾ ಲಕ್ನೋ ವಿಜಯಯಾತ್ರೆ ಮುಂದುವರಿಸುತ್ತಾ? ಕಮೆಂಟ್ ಮಾಡಿ ತಿಳಿಸಿ. 

Latest News