ಕ್ರಿಕೆಟ್ ಅಂದ್ರೆ ಬರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾತ್ರ ಅಂದುಕೊಂಡರೆ ಅದು ತಪ್ಪು. ಫೀಲ್ಡಿಂಗ್‌ನಲ್ಲೂ ಮ್ಯಾಜಿಕ್ ಮಾಡಬಹುದು ಅಂತ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಫಿಲಿಪ್ಸ್ ಮಾಡಿದ ಆ ಒಂದು ಪ್ರಯತ್ನ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ನೋಡಿದವರೆಲ್ಲಾ ಕೇಳ್ತಿರೋದು ಒಂದೇ ಮಾತು— "ಇವನು ನಿಜವಾಗಿಯೂ ಮನುಷ್ಯನಾ?" ಅಂತ!
ಏನದು ‘ಸೂಪರ್ ಮ್ಯಾನ್’ ಸಾಹಸ?
ದೆಹಲಿ ತಂಡ ಚೇಸಿಂಗ್ ಮಾಡುತ್ತಿದ್ದಾಗ 6ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಅಶೋಕ್ ಶರ್ಮಾ ಹಾಕಿದ ಬಾಲ್ ಅನ್ನು ಕೆ.ಎಲ್. ರಾಹುಲ್ ಬಾರಿಸಲು ಹೋದಾಗ, ಅದು ಬ್ಯಾಟಿನ ಎಡ್ಜ್ ತಗುಲಿ ಗಾಳಿಯಲ್ಲಿ ಚಿಮ್ಮಿತು. ಬಾಲ್ ಹೋಗ್ತಾ ಇದ್ದಿದ್ದು ಯಾರೂ ಇಲ್ಲದ 'ನೋ ಮ್ಯಾನ್ಸ್ ಲ್ಯಾಂಡ್' ಕಡೆಗೆ. ಎಲ್ಲರೂ ಅದು ಬೌಂಡರಿ ಆಗುತ್ತೆ ಅಥವಾ ಖಂಡಿತ ನೆಲಕ್ಕೆ ಬೀಳುತ್ತೆ ಅಂತ ಅಂದುಕೊಂಡಿದ್ದರು.
ಫಿಸಿಕ್ಸ್ ನಿಯಮಗಳನ್ನೇ ಮೀರಿಸಿದ ಹಾರಾಟ!
ಬಾಲ್ ಅವರ ಕೈಗೆ ಸರಿಯಾಗಿ ಸಿಗಲಿಲ್ಲ, ಅವರ ಕೈ ಬೆರಳುಗಳಿಗೆ ತಗುಲಿ ಸ್ವಲ್ಪದರಲ್ಲೇ ಮಿಸ್ ಆಯ್ತು. ಆದರೆ ಫಿಲಿಪ್ಸ್ ಗಾಳಿಯಲ್ಲಿ ಹಾರಿದ ಆ ರೀತಿ, ಆ ದೂರ ಮತ್ತು ಅವರ ಬಾಡಿ ಬ್ಯಾಲೆನ್ಸ್ ನೋಡಿದ ಕಾಮೆಂಟೇಟರ್‌ಗಳು ಒಂದು ಕ್ಷಣ ಅವಕ್ಕಾದರು. ಅವರು ನೆಲಕ್ಕೆ ಬೀಳುವ ಮುನ್ನ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿತ್ತು. ಇದನ್ನು ನೋಡಿದ ನೆಟ್ಟಿಗರು "ಫಿಲಿಪ್ಸ್ ಭೂಮಿಯ ಗುರುತ್ವಾಕರ್ಷಣೆ ನಿಯಮವನ್ನೇ ಮೀರಿಸಿದ್ದಾರೆ" ಅಂತ ಕಮೆಂಟ್ ಮಾಡ್ತಿದ್ದಾರೆ.
ಕ್ಯಾಚ್ ಮಿಸ್ ಆದ್ರೂ ಮನ ಗೆದ್ದ ಫಿಲಿಪ್ಸ್
ಆ ಕ್ಯಾಚ್ ಕೈ ತಪ್ಪಿರಬಹುದು, ಆದರೆ ಫಿಲಿಪ್ಸ್ ಅವರ ಆಟ ಅಲ್ಲಿಗೆ ನಿಲ್ಲಲಿಲ್ಲ. ನಂತರ ಪಂದ್ಯದ ನಿರ್ಣಾಯಕ ಹಂತದಲ್ಲಿ ಅಕ್ಷರ್ ಪಟೇಲ್ ಅವರ ಕ್ಯಾಚ್ ಅನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿಯುವ ಮೂಲಕ ಗುಜರಾತ್ ಟೈಟಾನ್ಸ್ ಪಂದ್ಯಕ್ಕೆ ಮರಳಲು ಸಹಾಯ ಮಾಡಿದರು. ಕೊನೆಗೆ ಗುಜರಾತ್ ಟೈಟಾನ್ಸ್ ಕೇವಲ 1 ರನ್ ಅಂತರದಿಂದ ರೋಚಕ ಜಯ ಸಾಧಿಸಿತು. ಈ ಗೆಲುವಿನಲ್ಲಿ ಫಿಲಿಪ್ಸ್ ಅವರ ಫೀಲ್ಡಿಂಗ್ ಕೊಡುಗೆ ದೊಡ್ಡದಿದೆ.
Glenn Phillips is not normal human🤯
— Jeet (@JeetN25) April 8, 2026
Unbelievable attempt 😳 pic.twitter.com/pn9AjzDIQV
ಟ್ವಿಟರ್‌ನಲ್ಲಿ ಫ್ಯಾನ್ಸ್ ರಿಯಾಕ್ಷನ್: "ಫಿಲಿಪ್ಸ್ ಮನುಷ್ಯನಲ್ಲ, ಅವನು ಬೇರೆ ಗ್ರಹದವನು!", "ಬಾಲ್ ನೆಲಕ್ಕೆ ಬೀಳುವ ಮುನ್ನ ಇವನು ಹೇಗೆ ಅಷ್ಟು ದೂರ ಕ್ರಮಿಸಿದ?" ಅಂತೆಲ್ಲಾ ಅಭಿಮಾನಿಗಳು ಗುಣಗಾಣ ಮಾಡುತ್ತಿದ್ದಾರೆ.
ಗ್ಲೆನ್ ಫಿಲಿಪ್ಸ್ ಅಂದ್ರೆ ಕೇವಲ ಬ್ಯಾಟರ್ ಮಾತ್ರವಲ್ಲ, ಅವರೊಬ್ಬ ಕಂಪ್ಲೀಟ್ ಅಥ್ಲೀಟ್. ಇಂತಹ ಆಟಗಾರರು ಫೀಲ್ಡಿಂಗ್‌ನಲ್ಲಿ ಇದ್ದರೆ ಪಂದ್ಯದ ಚಿತ್ರಣವೇ ಬದಲಾಗಿಬಿಡುತ್ತೆ ಅನ್ನೋದಕ್ಕೆ ಈ ಪಂದ್ಯವೇ ಸಾಕ್ಷಿ. ನೀವು ಆ ಹಾರುವ ಸಾಹಸದ ವಿಡಿಯೋ ನೋಡಿದ್ದೀರಾ? ಇಲ್ಲದಿದ್ದರೆ ಮಿಸ್ ಮಾಡದೆ ನೋಡಿ, ಫಿಲಿಪ್ಸ್ ಯಾಕೆ 'ಸ್ಪೆಷಲ್' ಅಂತ ನಿಮಗೇ ಅರ್ಥವಾಗುತ್ತೆ.