ಐಪಿಎಲ್ 2026ರ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ಮುಗಿದರೂ ಅದರ ಸುತ್ತಲಿನ ಹೈಪ್ ಮಾತ್ರ ಕಮ್ಮಿಯಾಗಿಲ್ಲ. ಮೈದಾನದಲ್ಲಿ ಹೈದರಾಬಾದ್ ತಂಡ 55 ರನ್‌ಗಳಿಂದ ಗೆದ್ದಿರಬಹುದು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಕಿಚ್ಚು ಹೊತ್ತಿಸಿರುವುದು ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಹ್ಯಾಂಡ್‌ಶೇಕ್ ವಿವಾದ!
ಪಂದ್ಯ ಮುಗಿದ ಮೇಲೆ ಕೊಹ್ಲಿ ಅವರು ಟ್ರಾವಿಸ್ ಹೆಡ್ ಕೈ ಕುಲುಕದೆ ಹಾಗೇ ನಡೆದುಹೋದ ವಿಡಿಯೋ ಭಾರಿ ವೈರಲ್ ಆಗಿತ್ತು. ಆದರೆ ಇದರ ಹಿಂದಿನ ಅಸಲಿ ಕಥೆ ಇಲ್ಲಿದೆ ನೋಡಿ..
ಮೊದಲು ಕೆಣಕಿದ್ದು ಯಾರು?
ಮೊದಲಿಗೆ ಕೊಹ್ಲಿ ಅವರೇ ಹೆಡ್‌ಗೆ ಹ್ಯಾಂಡ್‌ಶೇಕ್ ಮಾಡದೆ ಆಟಿಟ್ಯೂಡ್ ತೋರಿಸಿದರು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮೈದಾನದ ಒಳಗಿನ ಇನ್‌ಸೈಡ್ ವಿಡಿಯೋಗಳು ಬೇರೆಯದೇ ಕಥೆ ಹೇಳುತ್ತಿವೆ. ಆರ್‌ಸಿಬಿ ರನ್ ಚೇಸ್ ಮಾಡುವಾಗ ಮೊದಲ ಓವರ್‌ನಲ್ಲೇ ಈ ಕಿಡಿ ಹೊತ್ತಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ಅವರ ಬ್ಯಾಟ್‌ನ ಕೆಳಭಾಗಕ್ಕೆ (Toe end) ತಗುಲಿದಾಗ ಟ್ರಾವಿಸ್ ಹೆಡ್ ತಮ್ಮ ತಂಡದ ಆಟಗಾರರ ಕಡೆ ನೋಡಿ ಕೊಹ್ಲಿಯನ್ನು ಅಣಕಿಸುವಂತೆ ಸನ್ಹೆ ಮಾಡಿದ್ದರು.
ಅಷ್ಟೇ ಅಲ್ಲದೆ, ಪ್ಯಾಟ್ ಕಮಿನ್ಸ್ ಬೌಲಿಂಗ್ ಮಾಡುವಾಗ "ಆಫ್ ಸ್ಟಂಪ್ ಹೊರಗಡೆ ಬೌಲಿಂಗ್ ಮಾಡಿ" ಎಂದು ಹೆಡ್ ಜೋರಾಗಿ ಕೂಗಿ ಹೇಳಿದ್ದು ಕೊಹ್ಲಿಗೆ ಇಷ್ಟವಾಗಲಿಲ್ಲ. ನಂತರ ಕೊಹ್ಲಿ ಬೌಂಡರಿ ಹೊಡೆದಾಗ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯಿತು. ಹೆಡ್ ಸಾಲದಕ್ಕೆ ಕೊಹ್ಲಿಯ ಬಾರ್ಡರ್-ಗಾವಾಸ್ಕರ್ ಟ್ರೋಫಿ (BGT) ಫ್ಲಾಪ್ ಪ್ರದರ್ಶನವನ್ನು ನೆನಪಿಸಿ ಕಾಲೆಳೆದಿದ್ದರು ಎನ್ನಲಾಗಿದೆ.
ಪರ್ಸನಲ್ ಆದ ಮ್ಯಾಟರ್
ವಿಷಯ ಮತ್ತಷ್ಟು ಗಂಭೀರವಾಗಿದ್ದು ನಾಲ್ಕನೇ ಓವರ್‌ನಲ್ಲಿ. ಹೆಡ್ ಅವರು ವೆಂಕಟೇಶ್ ಅಯ್ಯರ್ ಅವರನ್ನು ಕೆಣಕಲು ಹೋದಾಗ ಕೊಹ್ಲಿ ಸಖತ್ ಗರಂ ಆದರು. ಅಯ್ಯರ್ ಬೌಂಡರಿ ಹೊಡೆದಾಗಲೆಲ್ಲಾ ಕೊಹ್ಲಿ ಹೆಡ್ ಕಡೆ ತಿರುಗಿ, "ಧೈರ್ಯ ಇದ್ದರೆ ಬಂದು ನೀನೇ ಬೌಲಿಂಗ್ ಮಾಡು" ಎಂದು ಸವಾಲು ಹಾಕಿದ್ದರು. ಈ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಕೂಡ ಪೋಸ್ಟ್ ಮಾಡಿತ್ತು.
ಕೊನೆಗೆ ಕೊಹ್ಲಿ 11 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದಾಗ, ಹೆಡ್ ಮತ್ತೊಮ್ಮೆ ಏನೋ ಕಾಮೆಂಟ್ ಪಾಸ್ ಮಾಡಿದರು. ಕೊಹ್ಲಿಗೆ ಅಲ್ಲಿಗೆ ಸಾಕೆನಿಸಿತು. ಪಂದ್ಯ ಮುಗಿದ ನಂತರ ಎಲ್ಲರೂ ಹ್ಯಾಂಡ್‌ಶೇಕ್ ಮಾಡುವಾಗ ಕೊಹ್ಲಿ ಅವರು ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾಗೆ ಆತ್ಮೀಯವಾಗಿ ಹಸ್ತಲಾಘವ ಮಾಡಿ, ಹೆಡ್ ಕೈ ಚಾಚಿ ಕಾಯುತ್ತಿದ್ದರೂ ಅವರನ್ನು ಕಂಪ್ಲೀಟ್ ಆಗಿ ಇಗ್ನೋರ್ ಮಾಡಿ ಇಶಾನ್ ಕಿಶನ್ ಕಡೆ ನಡೆದುಬಿಟ್ಟರು!
Virat Kohli refused handshake with Travis Head, as both had some heat moments between the game. SRH vs RCB ☠️ #ViratKohli #RCB #IPL #SRHvsRCB pic.twitter.com/7j6kdaCyxB
— 𝐙𝐮𝐛𝐚𝐢𝐫𝐑🕊 (@iiZub22) May 22, 2026
ಮ್ಯಾಚ್ ರಿಸಲ್ಟ್ ಮತ್ತು ಪ್ಲೇಆಫ್ ಲೆಕ್ಕಾಚಾರ
ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್, ಇಶಾನ್ ಕಿಶನ್ (79), ಅಭಿಷೇಕ್ ಶರ್ಮಾ (56) ಮತ್ತು ಕ್ಲಾಸೆನ್ (51) ಅವರ ಅಬ್ಬರದಿಂದ 255/4 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರ್‌ಸಿಬಿ 200 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು.
#ViratKohli 🆚 #TravisHead 🥵🤯
— Star Sports (@StarSportsIndia) May 22, 2026
Tensions rise in high voltage clash🔥#TATAIPL Race to Playoffs 2026 👉 #SRHvRCB | LIVE NOW ➡️https://t.co/52qPTW2gSO pic.twitter.com/JOiWaxNW6T
ಆದರೆ ಟ್ವಿಸ್ಟ್ ಏನೆಂದರೆ, ಎಸ್‌ಆರ್‌ಎಚ್ ತಂಡಕ್ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ 2 ತಲುಪಲು 90 ರನ್‌ಗಳ ದೊಡ್ಡ ಮಾರ್ಜಿನ್ ಗೆಲುವು ಬೇಕಿತ್ತು. ಆರ್‌ಸಿಬಿ ಸೋತರೂ ಕ್ವಾಲಿಫಿಕೇಶನ್‌ಗೆ ಬೇಕಿದ್ದ 166 ರನ್ ಗಡಿ ದಾಟಿದ್ದರಿಂದ ರನ್ ರೇಟ್ ಆಧಾರದ ಮೇಲೆ ಟೇಬಲ್‌ನ ನಂಬರ್ 1 ಸ್ಥಾನದಲ್ಲೇ ಉಳಿಯಿತು. ಈಗ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ.