ಆರ್‌ಸಿಬಿ Vs ಹೈದರಾಬಾದ್ ಮಹಾ ಕದನ - ಇದೊಂದು ತಪ್ಪು ಮಾಡಿದರೆ RCB ಮೂರನೇ ಸ್ಥಾನಕ್ಕೆ ಬರುತ್ತೆ?

ಆರ್‌ಸಿಬಿ ಮತ್ತು ಹೈದರಾಬಾದ್ ಮ್ಯಾಚ್ ಅಂದ್ರೆನೇ ಅಲ್ಲಿ ರನ್ ಮಳೆ ಗ್ಯಾರಂಟಿ! ಇವತ್ತು ಅಂದ್ರೆ ಮೇ 22, ಶುಕ್ರವಾರ, ಐಪಿಎಲ್ 2026ರ ಅತ್ಯಂತ ರೋಮಾಂಚಕ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಆಲ್ರೆಡಿ ಪ್ಲೇ-ಆಫ್ ಟಿಕೆಟ್ ಜೇಬಿಗೆ ಹಾಕೊಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ.

RCB vs SRH – ಟಾಪ್ 2 ಸ್ಥಾನಕ್ಕಾಗಿ ಕಡುವೈರತ್ವ! | Photo Credit: https://www.outlookindia.com
RCB vs SRH – ಟಾಪ್ 2 ಸ್ಥಾನಕ್ಕಾಗಿ ಕಡುವೈರತ್ವ! | Photo Credit: https://www.outlookindia.com

ಪಾಯಿಂಟ್ಸ್ ಟೇಬಲ್‌ನ ಟಾಪ್ 2 ಸ್ಥಾನ ಯಾರಿಗೆ ಸಿಗುತ್ತೆ ಅನ್ನೋ ಅಸಲಿ ಲೆಕ್ಕಾಚಾರ ಇವತ್ತೇ ಫೈನಲ್ ಆಗೋದು. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೂಳಿಪಟ ಮಾಡಿದ ಗುಜರಾತ್ ಟೈಟಾನ್ಸ್ ಈಗಾಗಲೇ ಟಾಪ್ 2 ನಲ್ಲಿ ಭದ್ರವಾಗಿ ಕೂತಿದೆ. ಇನ್ನುಳಿದಿರೋ ಒಂದೇ ಒಂದು ಸೀಟ್‌ಗಾಗಿ ಇವತ್ತು ಆರ್‌ಸಿಬಿ ಮತ್ತು ಹೈದರಾಬಾದ್ ನಡುವೆ ಕಡುವೈರತ್ವದ ಫೈಟ್ ನಡೀತಿದೆ. ಇಲ್ಲಿ ಗೆದ್ದು 2ನೇ ಸ್ಥಾನ ಪಡ್ಕೊಂಡ್ರೆ ಫೈನಲ್‌ಗೆ ಹೋಗೋಕೆ ಎರಡು ಲಕ್ಕಿ ಚಾನ್ಸ್ (ಕ್ವಾಲಿಫೈಯರ್-1 ಮತ್ತು ಕ್ವಾಲಿಫೈಯರ್-2) ಸಿಗುತ್ತೆ!

ಟಾಪ್‌ನಲ್ಲಿ ಮುಂದುವರಿಯುತ್ತಾ ನಮ್ಮ ಆರ್‌ಸಿಬಿ?

ಪ್ರಸ್ತುತ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ರಾಜನ ತರ ಕೂತಿದೆ. ಆಡಿರೋ 13 ಪಂದ್ಯಗಳಲ್ಲಿ 9 ಗೆದ್ದು 18 ಪಾಯಿಂಟ್ಸ್ ಹಾಗೂ +1.065 ನ ಭರ್ಜರಿ ನೆಟ್ ರನ್ ರೇಟ್ ಹೊಂದಿರೋ ಬೆಂಗಳೂರಿಗೆ ಇವತ್ತಿನ ಮ್ಯಾಚ್ ಜಸ್ಟ್ ಒಂದು ನಾರ್ಮಲ್ ಗೆಲುವಷ್ಟೇ ಸಾಕು. ಇವತ್ತು ಗೆದ್ದರೆ ಆರ್‌ಸಿಬಿ ಖಾತೆಗೆ 20 ಪಾಯಿಂಟ್ಸ್ ಬರುತ್ತೆ, ಆಗ ಯಾವುದೇ ರನ್ ರೇಟ್ ಜಂಜಾಟ ಇಲ್ಲದೆ ಟಾಪ್ 2 ಸೀಟು ನಮ್ದೇ ಆಗುತ್ತೆ. ಕ್ವಾಲಿಫೈಯರ್-1 ಪಂದ್ಯ ಆಡಿ ನೇರವಾಗಿ ಫೈನಲ್‌ಗೆ ಲಗ್ಗೆ ಇಡೋಕೆ ಚಿನ್ನದಂತಹ ಅವಕಾಶ ಆರ್‌ಸಿಬಿ ಮುಂದಿದೆ.

ಹೈದರಾಬಾದ್‌ಗೆ ಬೇಕಿದೆ ಮಿರಾಕಲ್ ವಿಕ್ಟರಿ!

ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ 13 ಪಂದ್ಯಗಳಲ್ಲಿ 8 ಗೆದ್ದು 16 ಪಾಯಿಂಟ್ಸ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಇವತ್ತು ಅವರು ಆರ್‌ಸಿಬಿ ವಿರುದ್ಧ ಗೆದ್ದರೂ ಇಬ್ಬರ ಅಂಕ ಸಮನಾಗುತ್ತೆ (18 ಪಾಯಿಂಟ್ಸ್). ಆದರೆ ಆರ್‌ಸಿಬಿಯನ್ನು ಕೆಳಗಿಳಿಸಿ ತಾವೇ 2ನೇ ಸ್ಥಾನಕ್ಕೆ ಜಂಪ್ ಮಾಡ್ಬೇಕಾದ್ರೆ ಹೈದರಾಬಾದ್ ತಂಡಕ್ಕೆ ಅಸಾಧ್ಯವಾದ ರನ್ ರೇಟ್ ಬೇಕಾಗಿದೆ.

ಮಾರ್ಕೆಟ್‌ನಲ್ಲಿರೋ ಕ್ರಿಕೆಟ್ ಲೆಕ್ಕಾಚಾರದ ಪ್ರಕಾರ (ಮೊದಲ ಇನ್ನಿಂಗ್ಸ್ ಸ್ಕೋರ್ 200 ರನ್ ಅಂತ ಅನ್ಕೊಂಡ್ರೆ), ಹೈದರಾಬಾದ್ ಟಾಪ್ 2 ತಲುಪಲು ಈ ಕೆಳಗಿನ ಯಾವುದಾದ್ರೂ ಒಂದು ಮ್ಯಾಜಿಕ್ ಮಾಡಲೇಬೇಕು:

ಮೊದಲು ಬ್ಯಾಟಿಂಗ್ ಮಾಡಿದರೆ: ಆರ್‌ಸಿಬಿ ತಂಡವನ್ನು ಕನಿಷ್ಠ 87 ರನ್‌ಗಳ ದೈತ್ಯ ಅಂತರದಿಂದ ಸೋಲಿಸಬೇಕು!

ಚೇಸಿಂಗ್ ಮಾಡಿದರೆ: ಆರ್‌ಸಿಬಿ ನೀಡೋ ಟಾರ್ಗೆಟ್ ಅನ್ನು ಕೇವಲ 11 ಓವರ್‌ಗಳ ಒಳಗಡೆಯೇ ಚೇಸ್ ಮಾಡಿ ಮುಗಿಸಬೇಕು! (ಒಂದು ವೇಳೆ ಸ್ಕೋರ್ ಟೈ ಆದಾಗ ಸಿಕ್ಸರ್ ಹೊಡೆದು ಮ್ಯಾಚ್ ಮುಗಿಸಿದರೆ 11.3 ಓವರ್‌ವರೆಗೆ ಟೈಮ್ ಇರುತ್ತೆ).

ಈ ಸೀಸನ್‌ನಲ್ಲಿ ಆರ್‌ಸಿಬಿ ಇರೋ ಫಾರ್ಮ್ ನೋಡಿದ್ರೆ ಹೈದರಾಬಾದ್‌ಗೆ ಇದು ಬೆಟ್ಟ ಕೊರೆದು ಇಲಿ ಹಿಡಿದಷ್ಟೇ ಕಷ್ಟದ ಕೆಲಸ ಅನ್ನೋದ್ರಲ್ಲಿ ಡೌಟೇ ಇಲ್ಲ.

ಆರ್‌ಸಿಬಿ ಫ್ಯಾನ್ಸ್‌ಗೆ ಸಣ್ಣದೊಂದು ಆತಂಕ!

ಒಂದು ವೇಳೆ ಕ್ರಿಕೆಟ್ ಇತಿಹಾಸದಲ್ಲೇ ಕಾಣದ ಇಂತಹ ಪವಾಡ ನಡೆದು ಹೈದರಾಬಾದ್ ಏನಾದ್ರೂ ಭಾರಿ ಅಂತರದಿಂದ ಗೆದ್ದುಬಿಟ್ಟರೆ, ಆರ್‌ಸಿಬಿ ನೇರವಾಗಿ 3ನೇ ಸ್ಥಾನಕ್ಕೆ ಉರುಳಬೇಕಾಗುತ್ತೆ. ಆಗ ಕ್ವಾಲಿಫೈಯರ್-1 ಚಾನ್ಸ್ ಮಿಸ್ ಆಗಿ, 'ಎಲಿಮಿನೇಟರ್' ಮ್ಯಾಚ್ ಆಡಬೇಕಾಗುತ್ತೆ. ಎಲಿಮಿನೇಟರ್ ಅಂದ್ರೆ 'ಡು ಆರ್ ಡೈ' ಮ್ಯಾಚ್ ಇದ್ದ ಹಾಗೆ, ಅಲ್ಲಿ ಸೋತರೆ ಎರಡನೇ ಚಾನ್ಸ್ ಇರಲ್ಲ, ನೇರವಾಗಿ ಮನೆಗೆ ಹೋಗಬೇಕಾಗುತ್ತೆ.

ಹೈದರಾಬಾದ್‌ನ ಅವರದ್ದೇ ಹೋಮ್ ಗ್ರೌಂಡ್‌ನಲ್ಲಿ ಮಣಿಸುವುದು ಆರ್‌ಸಿಬಿಗೆ ಸುಲಭವಲ್ಲದಿದ್ದರೂ, ಸದ್ಯದ ಬ್ಯಾಟಿಂಗ್ ಲೈನಪ್ ನೋಡಿದ್ರೆ ನಮ್ಮ ಹುಡುಗರು ಧೂಳೆಬ್ಬಿಸೋದು ಪಕ್ಕಾ. ಈ ಸೂಪರ್ ಫ್ರೈಡೇ ಮ್ಯಾಚ್ ಸಖತ್ ಕಿಕ್ ಕೊಡೋದು ಗ್ಯಾರಂಟಿ. ಆರ್‌ಸಿಬಿ ಇವತ್ತು ಜಯಭೇರಿ ಬಾರಿಸಿ ಟಾಪ್-2 ನಲ್ಲಿ ಕನ್‌ಫರ್ಮ್ ಆಗಲಿ ಅಂತ ಆಶಿಸೋಣ. ಈ ಸಲ ಕಪ್ ನಮ್ದೇ! 

Latest News