Mar 27, 2026 Languages : ಕನ್ನಡ | English

ಈ ಸಲ ಕಪ್ ನಮ್ದೇ ಅನ್ನೋ RCB ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ - ಆರ್‌ಸಿಬಿ ಪಂದ್ಯಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!!

ಕ್ರಿಕೆಟ್ ಪ್ರೇಮಿಗಳೇ, ಅದರಲ್ಲೂ 'ಈ ಸಲ ಕಪ್ ನಮ್ದೇ' ಅಂತ ಕಾಯ್ತಿರೋ ಆರ್‌ಸಿಬಿ ಫ್ಯಾನ್ಸ್‌ಗೆ ಒಂದು ಭರ್ಜರಿ ಗುಡ್ ನ್ಯೂಸ್! ರಾಜ್ಯದ ವಿಧಾನಸಭಾ ಚುನಾವಣೆಗಳ ಗದ್ದಲದ ನಡುವೆಯೂ, ಬಿಸಿಸಿಐ ಐಪಿಎಲ್ 2026ರ ಎರಡನೇ ಹಂತದ ಕಂಪ್ಲೀಟ್ ಟೈಮ್ ಟೇಬಲ್ ಬಿಡುಗಡೆ ಮಾಡಿದೆ. ಏಪ್ರಿಲ್ 13 ರಿಂದ ಮೇ 24 ರವರೆಗೆ ಲೀಗ್ ಹಂತದ ಪಂದ್ಯಗಳು ರಂಗೇರಲಿವೆ.

ಮೇ 24ರವರೆಗೆ ಹೋರಾಟ! RCB ಪ್ಲೇಆಫ್ ಕನಸು ಈಡೇರತ್ತಾ?
ಮೇ 24ರವರೆಗೆ ಹೋರಾಟ! RCB ಪ್ಲೇಆಫ್ ಕನಸು ಈಡೇರತ್ತಾ?

ಆರ್‌ಸಿಬಿ ಪಂದ್ಯಗಳ ಪಟ್ಟಿ ಇಲ್ಲಿದೆ

ನಿಮ್ಮ ಕ್ಯಾಲೆಂಡರ್‌ನಲ್ಲಿ ಈ ಡೇಟ್‌ಗಳನ್ನು ಮಾರ್ಕ್ ಮಾಡಿಟ್ಟುಕೊಳ್ಳಿ. ನಮ್ಮ ಬೆಂಗಳೂರು ತಂಡದ ಹೋರಾಟದ ಹಾದಿ ಹೀಗಿದೆ:

  • ಮಾರ್ಚ್ 28: ಸನ್‌ರೈಸರ್ಸ್ ವಿರುದ್ಧ (ಬೆಂಗಳೂರು) - ಸಂಜೆ 7.30
  • ಏಪ್ರಿಲ್ 5: ಚೆನ್ನೈ ವಿರುದ್ಧ (ಬೆಂಗಳೂರು) - ಸಂಜೆ 7.30
  • ಏಪ್ರಿಲ್ 10: ರಾಜಸ್ಥಾನ ವಿರುದ್ಧ (ಗುವಾಹಟಿ) - ಸಂಜೆ 7.30
  • ಏಪ್ರಿಲ್ 12: ಮುಂಬೈ ವಿರುದ್ಧ (ಮುಂಬೈ) - ಸಂಜೆ 7.30
  • ಏಪ್ರಿಲ್ 15: ಲಖನೌ ವಿರುದ್ಧ (ಬೆಂಗಳೂರು) - ಸಂಜೆ 7.30
  • ಏಪ್ರಿಲ್ 18: ಡೆಲ್ಲಿ ವಿರುದ್ಧ (ಬೆಂಗಳೂರು) - ಮಧ್ಯಾಹ್ನ 3.30
  • ಏಪ್ರಿಲ್ 24: ಗುಜರಾತ್ ವಿರುದ್ಧ (ಬೆಂಗಳೂರು) - ಸಂಜೆ 7.30
  • ಏಪ್ರಿಲ್ 27: ಡೆಲ್ಲಿ ವಿರುದ್ಧ (ನವದೆಹಲಿ) - ಸಂಜೆ 7.30
  • ಏಪ್ರಿಲ್ 30: ಗುಜರಾತ್ ವಿರುದ್ಧ (ಅಹ್ಮದಾಬಾದ್) - ಸಂಜೆ 7.30
  • ಮೇ 7: ಲಖನೌ ವಿರುದ್ಧ (ಲಖನೌ) - ಸಂಜೆ 7.30
  • ಮೇ 10: ಮುಂಬೈ ವಿರುದ್ಧ (ರಾಯ್ಪುರ) - ಸಂಜೆ 7.30
  • ಮೇ 13: ಕೆಕೆಆರ್ ವಿರುದ್ಧ (ರಾಯ್ಪುರ) - ಸಂಜೆ 7.30
  • ಮೇ 17: ಪಂಜಾಬ್ ವಿರುದ್ಧ (ಧರ್ಮಶಾಲಾ) - ಮಧ್ಯಾಹ್ನ 3.30
  • ಮೇ 22: ಸನ್‌ರೈಸರ್ಸ್ ವಿರುದ್ಧ (ಹೈದ್ರಾಬಾದ್) - ಸಂಜೆ 7.30

ಈ ಬಾರಿ ಓಪನಿಂಗ್ ಸೆರಮನಿ ಇಲ್ಲ! ಯಾಕೆ ಗೊತ್ತಾ?
ಸಾಮಾನ್ಯವಾಗಿ ಐಪಿಎಲ್ ಅಂದ್ರೆ ಡ್ಯಾನ್ಸ್, ಹಾಡು, ಮ್ಯೂಸಿಕ್ ಅಂತ ದೊಡ್ಡ ಓಪನಿಂಗ್ ಇರುತ್ತೆ. ಆದ್ರೆ ಈ ಸಲ ಬಿಸಿಸಿಐ ಒಂದು ಮಹತ್ವದ ನಿರ್ಧಾರ ತಗೊಂಡಿದೆ. ಕಳೆದ ವರ್ಷ ಬೆಂಗಳೂರಲ್ಲಿ ನಡೆದ ಕಾಲ್ತುಳಿತದ ದುರ್ಘಟನೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅವರ ಗೌರವಾರ್ಥವಾಗಿ ಈ ಬಾರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿದೆ. ಆದ್ರೆ ಫೈನಲ್ ಪಂದ್ಯದ ದಿನ (ಮೇ 31) ಅದ್ಧೂರಿ ಸಮಾರೋಪ ಸಮಾರಂಭ ಇರಲಿದೆ.

ಸ್ಟಾರ್ ಆಟಗಾರರ ಎಂಟ್ರಿ!
ಆರ್‌ಸಿಬಿ ಪಾಳಯಕ್ಕೆ ಒಂದು ಖುಷಿಯ ವಿಚಾರ ಅಂದ್ರೆ, ಗಾಯದ ಸಮಸ್ಯೆಯ ನಡುವೆಯೂ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಹಾಗೆಯೇ ಸನ್‌ರೈಸರ್ಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡ ತಂಡ ಸೇರಿಕೊಂಡಿದ್ದಾರೆ. ಆದರೆ, ಇವರಿಬ್ಬರೂ ಆರಂಭದ ಕೆಲವು ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎನ್ನಲಾಗುತ್ತಿದೆ. ಇದು ಅಭಿಮಾನಿಗಳಿಗೆ ಸ್ವಲ್ಪ ಬೇಸರದ ಸಂಗತಿಯಾದರೂ, ಟೂರ್ನಿ ಮಧ್ಯದಲ್ಲಿ ಇವರ ಎಂಟ್ರಿ ತಂಡಕ್ಕೆ ಆನೆ ಬಲ ತರೋದು ಗ್ಯಾರಂಟಿ.

ಒಟ್ಟಿನಲ್ಲಿ, 12 ನಗರಗಳಲ್ಲಿ ನಡೆಯಲಿರುವ ಈ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡೋಣ!

Latest News