ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಟ್ಯಂತರ ಅಭಿಮಾನಿಗಳ ಹೊಂದಿರುವ ತಂಡ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ಇಂಡಿಯಾ ತುಂಬೆಲ್ಲಾ ಫ್ಯಾನ್ ಫೊಲೊವಿಂಗ್ ಹೊಂದಿದೆ. ಜೊತೆಗೆ ವಿಶ್ವ ಮಟ್ಟದಲ್ಲಿಯೂ ಅತಿ ಹೆಚ್ಚು ಫ್ಯಾನ್ಸ್ ನಮ್ಮ ತಂಡ ಹೊಂದಿದೆ. ಕಪ್ ಗೆಲ್ಲಲಿಲ್ಲ ಎಂಬ ಮಾತಿಗೆ ಕಳೆದ ವರ್ಷ ಫುಲ್ ಸ್ಟಾಪ್ ಇಟ್ಟಾಗಿದೆ. ಕಪ್ ಗೆಲ್ಲುವ ಮೂಲಕ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಂಡು ಓಡಾಡುವ ಹಾಗೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ನೆಚ್ಚಿನ ಬೆಂಗಳೂರು ಕ್ರಿಕೆಟ್ ತಂಡದ ಆಟಗಾರ ಆಗಿದ್ದಾರೆ. ಹೀಗಿರುವಾಗ ಆರ್ಸಿಬಿ ತಂಡದ ಮಾರಾಟದ ಸುದ್ದಿ ಕೇಳಿ ಬಂದಿದ್ದು, ಎಷ್ಟು ಸಾವಿರ ಕೋಟಿ ಬೆಲೆಗೆ ತಂಡ ಸೇಲ್ ಆಗುತ್ತಿದೆ, ಹಾಗೂ ಯಾರೆಲ್ಲಾ ನಮ್ಮ ಆರ್ಸಿಬಿ ತಂಡದ ಖರೀಧಿ ಪಟ್ಟಿಯಲ್ಲಿದ್ದಾರೆ ಎಂಬುದಾಗಿ ನಾವು ನೋಡೋಣ ಬನ್ನಿ.
RCB ತಂಡವನ್ನು ಖರೀದಿಸಲು ಅಂದಾಜು ₹17,600 ಕೋಟಿ (ಅಂದಾಜು USD 2 ಬಿಲಿಯನ್) ವೆಚ್ಚವಾಗಬಹುದು. ಈ ಬೆಲೆಯು ಐಪಿಎಲ್ 2025 ಗೆಲುವಿನ ನಂತರ ತಂಡದ ಮೌಲ್ಯ ಹೆಚ್ಚಾದ ಹಿನ್ನೆಲೆಯಲ್ಲಿ ನಿರ್ಧರಿಸಲಾಗಿದೆ. ಡಿಯಾಜಿಯೋ ಕಂಪನಿ ತನ್ನ ಕ್ರಿಕೆಟ್ ವ್ಯವಹಾರವನ್ನು "ನಾನ್-ಕೋರ್" ಎಂದು ಪರಿಗಣಿಸಿ, 2026ರ ಮಾರ್ಚ್ 31ರೊಳಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮಾರಾಟ ಮಾಡಲು ತೀರ್ಮಾನಿಸಿದೆ. ಈ ನಿರ್ಧಾರವು RCB ಅಭಿಮಾನಿಗಳಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
RCB ಖರೀದಿಸಲು ಆಸಕ್ತಿ ತೋರಿಸಿರುವ ಪ್ರಮುಖ ಉದ್ಯಮಿಗಳು
1. ಅದಾನಿ ಗ್ರೂಪ್
2. ಪಾರ್ಥ ಜಿಂದಾಲ್
3. ನಿಖಿಲ್ ಕಾಮತ್
4. ರಂಜನ್ ಪೈ
5. ಹೊಂಬಾಳೆ ಫಿಲಂಸ್ ಸಂಸ್ಥೆ
ಬೆಂಗಳೂರು ಕ್ರಿಕೆಟ್ ತಂಡದ ವಿಶೇಷತೆ ಹಾಗೂ ಅದರ ಮೌಲ್ಯ:
RCB ತಂಡವು IPL 2025 ಚಾಂಪಿಯನ್ ಆಗಿರುವುದರಿಂದ ಅದರ ಬ್ರ್ಯಾಂಡ್ ಮೌಲ್ಯ, ಅಭಿಮಾನಿಗಳ ಬೆಂಬಲ ಮತ್ತು ವ್ಯಾಪಾರಿಕ ಆಕರ್ಷಣೆ ಬಹಳ ಹೆಚ್ಚಾಗಿದೆ. ಈ ಕಾರಣದಿಂದಾಗಿ ₹17,000 ಕೋಟಿ ಮೌಲ್ಯವು ಕ್ರಿಕೆಟ್ ಫ್ರಾಂಚೈಸಿಗಳಲ್ಲಿ ಅತಿದೊಡ್ಡದಾಗಿದ್ದು, ಮುಂದಿನ ಮಾಲೀಕರು ದೊಡ್ಡ ಹೂಡಿಕೆಗೆ ಸಜ್ಜಾಗಬೇಕಾಗುತ್ತದೆ. ನಿಮ್ಮ ಪ್ರಕಾರ ಯಾರು ನಮ್ಮ ತಂಡವನ್ನು ಖರೀಧಿ ಮಾಡಬಹುದು ಕಾಮೆಂಟ್ ಮಾಡಿ ತಿಳಿಸಿ.