ಇತ್ತೀಚೆಗೆ ಭಾರತ ಹಾಗೂ ದೂರದ ಬಾಂಗ್ಲಾದೇಶದ ನಡುವಿನ ಸಂಬಂಧಗಳು ಗಟ್ಟಿಯಾಗಿ ತೀವ್ರಗೊಂಡಿವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಯ ವರದಿಗಳು ಭಾರತದಲ್ಲಿ ದೊಡ್ಡ ಮಟ್ಟದ ಪ್ರತಿಕ್ರಿಯೆ ಹುಟ್ಟು ಹಾಕಿವೆ. ಈ ಕಾರಣದಿಂದ, ಮುಂಬರುವ ಐಪಿಎಲ್ 2026ಕ್ಕೆ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರಿಗೆ ಅವಕಾಶ ಕೊಡಬೇಕೇ ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಎದ್ದಿದೆ.
ಬಾಂಗ್ಲಾದೇಶ ಬೌಲರ್ ಮುಸ್ತಫಿಜರ್ ಪ್ರಕರಣ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜರ್ ರೆಹ್ಮಾನ್ ರನ್ನು ₹9.20 ಕೋಟಿ ಹಣಕ್ಕೆ ಖರೀದಿಸಿತು. ಆದರೆ ಈ ಖರೀದಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಕೆಕೆಆರ್ ಮಾಲೀಕರಾದ ಶಾರುಖ್ ಖಾನ್ ಅವರನ್ನೂ ಈ ವಿವಾದಕ್ಕೆ ಎಳೆದುಕೊಂಡು ವಿಶ್ವಾಸಘಾತಕ ಎಂದು ಕರೆಯುವ ಮಟ್ಟಿಗೆ ಈ ವಿಷಯ ತೀವ್ರಗೊಂಡಿತು ಎಂದು ಕೇಳಿ ಬಂದಿದೆ.
ಬಿಸಿಸಿಐ ನಿರ್ಧಾರ ಹೀಗಿದೆ
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿರುವುದೇನಂದರೆ, ಮುಸ್ತಫಿಜರ್ ರೆಹ್ಮಾನ್ ಅವರನ್ನು ತಂಡದಿಂದ ಕೈ ಬಿಡಲು ಅಥವಾ ಬಿಡುಗಡೆ ಮಾಡಲು ಕೆಕೆಆರ್ ಗೆ ಸೂಚನೆ ನೀಡಲಾಗಿದೆ. ತಂಡಕ್ಕೆ ಬದಲಿಗೆ ಇನ್ನೊಬ್ಬ ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದು ಆಟಗಾರನ ವಿರುದ್ಧದ ಶಿಸ್ತಿನ ಕ್ರಮವಲ್ಲ, ಬದಲಾಗಿ ರಾಜಕೀಯ ಒತ್ತಡ ಮತ್ತು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರ.
ಅಭಿಮಾನಿಗಳ ಪ್ರತಿಕ್ರಿಯೆ ನೋಡಿ
ಐಪಿಎಲ್ ವೀಕ್ಷಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಆಟ ಬೇರೆ ರಾಜಕೀಯ ಬೇರೆ ಈ “ಕ್ರೀಡೆಗೆ ರಾಜಕೀಯವನ್ನು ಸೇರಿಸುವುದು ತಪ್ಪು” ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು “ಬಾಂಗ್ಲಾದೇಶದ ಪರಿಸ್ಥಿತಿಯನ್ನು ಗಮನಿಸಿ, ಐಪಿಎಲ್ ನಲ್ಲಿ ಅವರ ಆಟಗಾರರಿಗೆ ಅವಕಾಶ ನೀಡಬಾರದು” ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಐಪಿಎಲ್ 2026ರಲ್ಲಿ ಬಾಂಗ್ಲಾದೇಶ ಆಟಗಾರರ ವಿವಾದದ ಮೂಲ ಕಾರಣ ರಾಜಕೀಯ ಉದ್ವಿಗ್ನತೆ, ಅಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ವರದಿಗ ಸುದ್ದಿಗಳು ಮತ್ತು ಮುಸ್ತಫಿಜರ್ ರೆಹ್ಮಾನ್ ಅವರನ್ನು ಕೆಕೆಆರ್ ಖರೀದಿಸಿದ ನಂತರ ಉಂಟಾದ ಸಾಮಾಜಿಕ ಒತ್ತಡ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ಬಿಡುಗಡೆ ಮಾಡಲು ಸೂಚನೆ ನೀಡಿದೆ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು.