ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಅಂತಿಮವಾಗಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಬೆಳಗ್ಗೆ ಗೃಹ ಇಲಾಖೆಯೊಂದಿಗೆ ಪರಮೇಶ್ವರ್ ಸಭೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಳಿ ಬಂದಿದೆ.
ಆರ್‌ಸಿಬಿ ಅಭಿಮಾನಿಗಳಿಗೆ ಇದು ನಿಜಕ್ಕೂ ದೊಡ್ಡ ಸಂತಸದ ಸುದ್ದಿ. ತಮ್ಮ ಪ್ರಿಯ ತಂಡವನ್ನು ನೇರವಾಗಿ ಕ್ರೀಡಾಂಗಣದಲ್ಲಿ ನೋಡಲು ಅವಕಾಶ ಸಿಕ್ಕಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಕ್ರಿಕೆಟ್ ಕೇವಲ ಆಟವಲ್ಲ, ಅದು ಅಭಿಮಾನಿಗಳ ಹೃದಯದ ಹಬ್ಬ. ಪ್ರತಿ ಚಪ್ಪಾಳೆ, ಪ್ರತಿಯೊಂದು ಕೂಗು ತಂಡಕ್ಕೆ ಶಕ್ತಿ ನೀಡುತ್ತದೆ.
ಆದರೆ ಈ ಅನುಮತಿ ಕೆಲವು ಷರತ್ತುಗಳೊಂದಿಗೆ ಬಂದಿದೆ. ಗರಿಷ್ಠ 35 ಸಾವಿರ ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುತ್ತದೆ. ತಜ್ಞರ ಸಮಿತಿ ನಿರಂತರ ಪರಿಶೀಲನೆ ನಡೆಸಲಿದೆ. ಆಸನ ವ್ಯವಸ್ಥೆ ಹಾಗೂ ಅಭಿಮಾನಿಗಳ ಸಂಖ್ಯೆಗೆ ಅನುಗುಣವಾಗಿ ಸ್ಟ್ಯಾಂಡ್‌ಗಳಿಗೆ ಅನುಮತಿ ನೀಡಲಾಗುತ್ತದೆ. ಕೆಎಸ್‌ಸಿಎ ನೀಡಿರುವ ಭರವಸೆಗಳನ್ನು ಪಾಲಿಸಿದರೆ ಮುಂದಿನ ಅನುಮತಿ ಮುಂದುವರಿಯಲಿದೆ. ಪಂದ್ಯಾವಳಿಗಳ ಸಮಯದಲ್ಲೇ ಫೇಸ್ 1 ಮತ್ತು ಫೇಸ್ 2 ಕಾಮಗಾರಿಗಳನ್ನು ಮುಂದುವರಿಸಬೇಕು.
ಸರ್ಕಾರದ ಅನುಮತಿ, ತಜ್ಞರ ಸಮಿತಿ ಪರಿಶೀಲನೆ ಹಾಗೂ ಕೆಎಸ್‌ಸಿಎ ಭರವಸೆ ಇವೆಲ್ಲವೂ ಸೇರಿ ಈ ಬಾರಿಯ ಐಪಿಎಲ್ ಹಬ್ಬಕ್ಕೆ ಮತ್ತೆ ಮೆರುಗು ಬರಲಿದೆ. ಅಭಿಮಾನಿಗಳ ಹೃದಯದಲ್ಲಿ ಈಗ ಒಂದೇ ಮಾತು ಕೇಳಿ ಬರುತ್ತಿದ್ದು, ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ಘೋಷಣೆ ಕೇಳಬೇಕು. ಈ ನಿರ್ಧಾರದಿಂದ ಬೆಂಗಳೂರು ನಗರವು ಮತ್ತೆ ಕ್ರಿಕೆಟ್ ಜ್ವರದಲ್ಲಿ ತೇಲಲಿದೆ. ಅಭಿಮಾನಿಗಳು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕ್ರೀಡಾಂಗಣಕ್ಕೆ ಬಂದು ತಂಡಕ್ಕೆ ಬೆಂಬಲ ನೀಡಲಿದ್ದಾರೆ.
ಈ ಬಾರಿ 35 ಸಾವಿರ ಅಭಿಮಾನಿಗಳ ಹಾಜರಾತಿ ಆರ್‌ಸಿಬಿ ಆಟಗಾರರಿಗೆ ದೊಡ್ಡ ಬೆಂಬಲವಾಗಲಿದೆ. ಹೌದು, ಸರ್ಕಾರದ ಅನುಮತಿ ಮತ್ತು ಅಭಿಮಾನಿಗಳ ಉತ್ಸಾಹ ಸೇರಿ ಈ ಐಪಿಎಲ್ ಸೀಸನ್‌ನ್ನು ಯಶಸ್ವಿಯಾಗಿ ನಡೆಸಲು ದಾರಿ ಮಾಡಿಕೊಟ್ಟಿವೆ. ಕ್ರಿಕೆಟ್ ಪ್ರೇಮಿಗಳು ಈ ಅವಕಾಶಕ್ಕೆ ಮತ್ತೆ ಪೆಟ್ಟು ಬೀಳುವ ಕೆಲಸ ಮಾಡಬಾರದು.