Mar 24, 2026 Languages : ಕನ್ನಡ | English

IPL 2026: ಸನ್ ರೈಸರ್ಸ್ ಎದುರಿಸಲು ಸಜ್ಜಾದ ಆರ್'ಸಿಬಿ - RCB vs SRH ಮ್ಯಾಚ್ ಟಿಕೆಟ್ ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್!!

ಬಹುನಿರೀಕ್ಷಿತ ಐಪಿಎಲ್ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 28, ಶನಿವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಕಳೆದ ಬಾರಿ ಕಪ್ ಗೆದ್ದು ಬೀಗಿದ್ದ ನಮ್ಮ ಹುಡುಗರು ಈ ಬಾರಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. ನೀವು ಕ್ರೀಡಾಂಗಣಕ್ಕೆ ಹೋಗಿ 'ಈ ಸಲವೂ ಕಪ್ ನಮ್ದೇ' ಅಂತ ಕೂಗಬೇಕಾ? ಹಾಗಿದ್ರೆ ಟಿಕೆಟ್ ಬಗ್ಗೆ ಈ ಮಾಹಿತಿ ಓದಿ.

ಚಿನ್ನಸ್ವಾಮಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ – RCB ಮ್ಯಾನೇಜ್‌ಮೆಂಟ್ ಪ್ಲಾನ್!!
ಚಿನ್ನಸ್ವಾಮಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ – RCB ಮ್ಯಾನೇಜ್‌ಮೆಂಟ್ ಪ್ಲಾನ್!!

ಟಿಕೆಟ್ ಬುಕ್ ಮಾಡೋದು ಹೇಗೆ?

ನೆನಪಿಡಿ, ಈ ಬಾರಿ ಟಿಕೆಟ್‌ಗಳು ಕೇವಲ ಆರ್ಸಿಬಿ ಅಧಿಕೃತ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಮಾತ್ರ ಸಿಗುತ್ತವೆ. ಯಾವುದೇ ಬೇರೆ ಥರ್ಡ್ ಪಾರ್ಟಿ ಸೈಟ್‌ಗಳ ನಂಬಿ ಮೋಸ ಹೋಗಬೇಡಿ.

  • ಮೊದಲು shop.royalchallengers.com ವೆಬ್‌ಸೈಟ್‌ಗೆ ಹೋಗಿ ಅಥವಾ ನಿಮ್ಮ ಫೋನ್‌ನಲ್ಲಿ RCB ಆಪ್ ಓಪನ್ ಮಾಡಿ.
  • ಅಲ್ಲಿ ಪಂದ್ಯಗಳ ಲಿಸ್ಟ್ ಕಾಣಿಸುತ್ತೆ, ಅದರಲ್ಲಿ ಮಾರ್ಚ್ 28ರ RCB vs SRH ಮ್ಯಾಚ್ ಸೆಲೆಕ್ಟ್ ಮಾಡಿ.
  • ನಿಮ್ಮ ಬಜೆಟ್‌ಗೆ ತಕ್ಕಂತೆ ಸ್ಟ್ಯಾಂಡ್ ಮತ್ತು ಎಷ್ಟು ಟಿಕೆಟ್ ಬೇಕು ಅನ್ನೋದನ್ನ ಆಯ್ಕೆ ಮಾಡಿ.
  • ಪೇಮೆಂಟ್ ಮುಗಿಸಿದ ತಕ್ಷಣ ನಿಮ್ಮ ಇ-ಟಿಕೆಟ್ (E-ticket) ಜನರೇಟ್ ಆಗುತ್ತೆ.

ಪಾರ್ಕಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಗಾಡಿ ಪಾರ್ಕ್ ಮಾಡೋದು ದೊಡ್ಡ ತಲೆನೋವು. ಅದಕ್ಕಾಗಿಯೇ ಆರ್ಸಿಬಿ ಮ್ಯಾನೇಜ್‌ಮೆಂಟ್ ಕೆಲವು ಜಾಗಗಳನ್ನು ಫಿಕ್ಸ್ ಮಾಡಿದೆ. ಗರುಡಾ ಮಾಲ್, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಟಿಕೆಟ್ ಬುಕ್ ಮಾಡುವಾಗಲೇ ಪಾರ್ಕಿಂಗ್ ಕೂಡ ಪ್ರಿ-ಬುಕ್ ಮಾಡಿಕೊಳ್ಳಬಹುದು.

ಗುಡ್ ನ್ಯೂಸ್: ಮೆಟ್ರೋ ಪ್ರಯಾಣ ಫ್ರೀ

ಕ್ರಿಕೆಟ್ ಪ್ರೇಮಿಗಳಿಗೆ ಆರ್ಸಿಬಿ ಮ್ಯಾನೇಜ್‌ಮೆಂಟ್ ಭರ್ಜರಿ ಗಿಫ್ಟ್ ಕೊಟ್ಟಿದೆ. ನೀವು ಮ್ಯಾಚ್ ಟಿಕೆಟ್ ಹೊಂದಿದ್ದರೆ, ಪಂದ್ಯದ ದಿನದಂದು ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ನಿಮ್ಮ ಮ್ಯಾಚ್ ಟಿಕೆಟ್ ಜೊತೆಗೇ ಮೆಟ್ರೋ ಟಿಕೆಟ್ QR ಕೋಡ್ ಕೂಡ ಇರುತ್ತದೆ. ಮೆಟ್ರೋ ಸ್ಟೇಷನ್‌ನ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳಲ್ಲಿ ಆ QR ಸ್ಕ್ಯಾನ್ ಮಾಡಿದರೆ ಸಾಕು, ನೀವು ಟಿಕೆಟ್ ರಹಿತವಾಗಿ ಉಚಿತವಾಗಿ ಹೋಗಿ ಬರಬಹುದು. 

ಕ್ರೀಡಾಂಗಣಕ್ಕೆ ಹೋಗುವಾಗ ನೆನಪಿರಲಿ

  • ಎಂಟ್ರಿ ಗೇಟ್: ನೀವು ಕಬ್ಬನ್ ರೋಡ್, ಲಿಂಕ್ ರೋಡ್ ಅಥವಾ ಎಂಜಿ ರೋಡ್ ಮೂಲಕ ಮಾತ್ರ ಸ್ಟೇಡಿಯಂಗೆ ಎಂಟ್ರಿ ಕೊಡಬಹುದು. ಕ್ವೀನ್ಸ್ ರೋಡ್ ಕಡೆಯಿಂದ ಪೆವಿಲಿಯನ್ (P) ಸ್ಟ್ಯಾಂಡ್‌ನವರಿಗೆ ಮಾತ್ರ ಅವಕಾಶವಿದೆ.
  • QR ಕೋಡ್: ನಿಮ್ಮ ಇ-ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಮ್ಯಾಚ್ ಶುರುವಾಗುವ ಕೆಲವು ಗಂಟೆಗಳ ಮೊದಲು ಮಾತ್ರ ಕೆಲಸ ಮಾಡಲು ಶುರುವಾಗುತ್ತೆ. ಅಲ್ಲಿಯವರೆಗೆ ಗಾಬರಿ ಪಡಬೇಡಿ.
  • ಸೀಟ್ ನಂಬರ್: ಟಿಕೆಟ್ ಮೇಲಿರುವ ಗೇಟ್ ನಂಬರ್, ರೋ ಮತ್ತು ಸೀಟ್ ನಂಬರ್ ಅನ್ನು ಸರಿಯಾಗಿ ಗಮನಿಸಿ ನಿಮ್ಮ ಜಾಗಕ್ಕೆ ಹೋಗಿ.

ಡಿಫೆಂಡಿಂಗ್ ಚಾಂಪಿಯನ್ಸ್ ಆಗಿ ಆರ್ಸಿಬಿ ಈ ಬಾರಿ ಹೊಸ ಹುರುಪಿನಲ್ಲಿದೆ. ಸನ್ ರೈಸರ್ಸ್ ವಿರುದ್ಧದ ಮೊದಲ ಪಂದ್ಯವೇ ಹೈ-ವೋಲ್ಟೇಜ್ ಇರೋದ್ರಲ್ಲಿ ಅನುಮಾನವಿಲ್ಲ. ಹಾಗಿದ್ರೆ ಇನ್ನೇಕೆ ತಡ? ಕೂಡಲೇ ಟಿಕೆಟ್ ಬುಕ್ ಮಾಡಿ, ಕೆಂಪು ಜೆರ್ಸಿ ಹಾಕ್ಕೊಂಡು ಚಿನ್ನಸ್ವಾಮಿಯಲ್ಲಿ ಸಿಗುವಾ. 

Latest News