Apr 11, 2026 Languages : ಕನ್ನಡ | English

ಮೈದಾನದಲ್ಲಿ ಮ್ಯಾಚ್ ಕಿಕ್ಕೋ? ದಂಪತಿಗಳ ಜಗಳದ ಕಿಕ್ಕೋ? ಈಡನ್ ಗಾರ್ಡನ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ 'ಲವ್-ಫೈಟ್'!!

ಐಪಿಎಲ್ ಅಂದ್ರೆ ಬರೀ ಸಿಕ್ಸರ್, ಫೋರ್‌ಗಳ ಆರ್ಭಟ ಮಾತ್ರ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ. ಅಂಗಳದಲ್ಲಿ ಆಟಗಾರರು ಬೆವರು ಸುರಿಸ್ತಾ ಇದ್ರೆ, ಗ್ಯಾಲರಿಯಲ್ಲಿ ಅಭಿಮಾನಿಗಳ ಹಾವಭಾವಗಳು ಕೂಡ ಅಷ್ಟೇ ಹೈಲೈಟ್ ಆಗ್ತಿರುತ್ತವೆ. ಗುರುವಾರ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಇಂತದ್ದೇ ಒಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿ ಮ್ಯಾಚ್‌ಗಿಂತಲೂ ಹೆಚ್ಚಾಗಿ ಗ್ಯಾಲರಿಯಲ್ಲಿದ್ದ ಒಂದು ಜೋಡಿಯ 'ಗುದ್ದಾಟ' ಈಗ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಿದೆ. 

ಐಪಿಎಲ್ ಗ್ಯಾಲರಿಯಲ್ಲಿ ಜೋಡಿ ಜಗಳ – ಮ್ಯಾಚ್‌ಗಿಂತ ಹೆಚ್ಚು ವೈರಲ್!! | Photo Credit: https://x.com/rushiii_12
ಐಪಿಎಲ್ ಗ್ಯಾಲರಿಯಲ್ಲಿ ಜೋಡಿ ಜಗಳ – ಮ್ಯಾಚ್‌ಗಿಂತ ಹೆಚ್ಚು ವೈರಲ್!! | Photo Credit: https://x.com/rushiii_12

ಮ್ಯಾಚ್ ಕಥೆ ಒಂದೆಡೆಯಾದರೆ, ಇವರ ಕಥೆ ಇನ್ನೊಂದೆಡೆ

ಮೊದಲು ಪಂದ್ಯದ ಬಗ್ಗೆ ಹೇಳಬೇಕೆಂದರೆ, ಕೆಕೆಆರ್ ಕೊಟ್ಟಿದ್ದ 181 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ತಂಡ, ಮುಕುಲ್ ಚೌಧರಿ ಭರ್ಜರಿ ಬ್ಯಾಟಿಂಗ್ (27 ಎಸೆತಗಳಲ್ಲಿ ಅಜೇಯ 54 ರನ್) ನೆರವಿನಿಂದ 3 ವಿಕೆಟ್ ಗಳ ರೋಚಕ ಜಯ ಸಾಧಿಸಿತು. ಆದರೆ, ಮೈದಾನದ ಬೌಂಡರಿಗಳಿಗಿಂತ ಹೆಚ್ಚಾಗಿ ಟಿವಿ ಕ್ಯಾಮೆರಾಗಳು ಒಬ್ಬ ದಂಪತಿಯ ಕಡೆಗೆ ಪದೇ ಪದೇ ಜೂಮ್ ಮಾಡ್ತಾ ಇದ್ವು. ಯಾಕಂದ್ರೆ ಅಲ್ಲಿ ಒಂದು ರಿಯಲ್ ಲೈಫ್ ಡ್ರಾಮಾ ನಡೀತಾ ಇತ್ತು. 

ಆ ಜೋಡಿ ಮ್ಯಾಚ್ ನೋಡೋಕೆ ಅಂತ ಬಂದಿದ್ರು ನಿಜ, ಆದರೆ ಅಲ್ಲಿ ಮ್ಯಾಚ್ ಬಿಟ್ಟು ಅವರಿಬ್ಬರ ನಡುವೆ ಸಖತ್ ವಾಗ್ವಾದ ನಡೀತಾ ಇತ್ತು. ಆಕೆ ಏನೋ ವಿಷಯಕ್ಕೆ ಫುಲ್ ಗರಂ ಆಗಿ ಕೈ ಸನ್ನೆ ಮಾಡ್ತಾ ಮಾತಾಡ್ತಿದ್ರೆ, ಆತ ಮಾತ್ರ ಫುಲ್ ಕೂಲ್ ಆಗಿ ಮ್ಯಾಚ್ ನೋಡ್ತಾ ಇದ್ದ. ಕೊನೆಗೆ ಆಕೆ ಬೇಸರದಿಂದ ಎದ್ದು ಹೋಗಿಯೇ ಬಿಟ್ಟರು. ಆದರೆ ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಸಾಲ್ವ್ ಆಗಿ, ಇಬ್ಬರೂ ನಗುನಗುತಾ ಮ್ಯಾಚ್ ಎಂಜಾಯ್ ಮಾಡಿದ್ದು ನೋಡಿ ಜನ ಶಾಕ್ ಆದ್ರು. 

ಫ್ಯಾನ್ಸ್ ಏನಂತಿದ್ದಾರೆ ಗೊತ್ತಾ?

ಇದೇ ನೋಡಿ ರಿಯಲ್ ಮ್ಯಾರೇಜ್ ಗೋಲ್ಸ್: ಕೆಲವರು, ಇದು ಎಷ್ಟು ಮುದ್ದಾಗಿದೆ ಅಲ್ವಾ? ಸಂಸಾರ ಅಂದಮೇಲೆ ಜಗಳ ಇರುತ್ತೆ, ಆದರೆ ಮ್ಯಾಚ್ ಮುಗಿಯೋದರೊಳಗೆ ಒಂದಾದರಲ್ಲ, ಅದೇ ಖುಷಿ ಅಂತ ಪಾಸಿಟಿವ್ ಆಗಿ ಕಮೆಂಟ್ ಮಾಡ್ತಿದ್ದಾರೆ.

ಇದು ಪಕ್ಕಾ ಸ್ಕ್ರಿಪ್ಟೆಡ್: ಇನ್ನು ಕೆಲವು ಮಂದಿ, ಇದೆಲ್ಲಾ ಕ್ಯಾಮೆರಾ ಮುಂದೆ ಮಾಡೋ ನಾಟಕ, ಫೇಮಸ್ ಆಗೋಕೆ ಹೀಗೆಲ್ಲಾ ಮಾಡ್ತಾರೆ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇದು ಟಾಕ್ಸಿಕ್ ಇರಬಹುದಾ?: ಮತ್ತೊಂದು ವರ್ಗದ ಜನ, "ಆಕೆ ಅಷ್ಟೊಂದು ಜೋರಾಗಿ ಸನ್ನೆ ಮಾಡೋದು ಮತ್ತು ಕಿರುಚೋದು ಸರಿ ಅಲ್ಲ, ಇದು ಟಾಕ್ಸಿಕ್ ಬಿಹೇವಿಯರ್" ಅಂತ ವಿಮರ್ಶೆ ಮಾಡ್ತಿದ್ದಾರೆ.

ಐಪಿಎಲ್ ವೈಬ್ಸ್ ಅಂದ್ರೆ ಹೀಗೆ!

ಆದರೆ ಒಂದು ವಿಷಯ ಮಾತ್ರ ನಿಜ, ಐಪಿಎಲ್ ಬರೀ ಕ್ರಿಕೆಟ್ ಅಲ್ಲ, ಅದು ಎಮೋಷನ್. ಗ್ಯಾಲರಿಯಲ್ಲಿ ಲವ್ ಪ್ರಪೋಸ್ ಮಾಡೋದು, ಈ ರೀತಿ ಸಣ್ಣ ಪುಟ್ಟ ಜಗಳ ಮಾಡೋದು ಈಗ ಕಾಮನ್ ಆಗಿಬಿಟ್ಟಿದೆ. ಲಕ್ನೋ ತಂಡ ಗೆದ್ದ ಖುಷಿ ಒಂದು ಕಡೆಯಾದ್ರೆ, ಈ ಜೋಡಿಯ 'ಲವ್-ಹೇಟ್' ಕಥೆ ಮಾತ್ರ ಮ್ಯಾಚ್‌ಗಿಂತಲೂ ಹೆಚ್ಚು ಲೈಮ್‌ಲೈಟ್ ಕಿತ್ತುಕೊಂಡಿದೆ.

ಕೊನೆಗೆ ಆ ದಂಪತಿಗಳು ಮ್ಯಾಚ್ ಮುಗಿಸಿ ಕೈ ಕೈ ಹಿಡಿದುಕೊಂಡು ಹೋಗುವಾಗ, 'ಮನೆಯಲ್ಲಿ ಜಗಳ ಮಾಡೋದನ್ನ ಬಿಟ್ಟು ಸ್ಟೇಡಿಯಂಗೆ ಬಂದು ಮಾಡ್ತಿದ್ದೀರಲ್ಲಪ್ಪಾ' ಅಂತ ಪಕ್ಕದಲ್ಲಿದ್ದವರು ನಗುನಗುತಾ ಮಾತಾಡ್ಕೊಳ್ತಾ ಇದ್ದರು. ಏನೇ ಇರಲಿ, ಕ್ರಿಕೆಟ್ ಅಂಗಳದಲ್ಲಿ ಇಂತಹ ಸಣ್ಣ ಪುಟ್ಟ ಘಟನೆಗಳು ಮ್ಯಾಚ್ ನೋಡೋ ಮಜವನ್ನ ಡಬಲ್ ಮಾಡುತ್ತವೆ ಅನ್ನೋದ್ರಲ್ಲಿ ಸಂಶಯವಿಲ್ಲ.

Latest News