Jan 25, 2026 Languages : ಕನ್ನಡ | English

ದೇವನಹಳ್ಳಿ ಬಳಿ ಕಾರ್ಮಿಕರ ಶೆಡ್ಗಳಲ್ಲಿ ಸಿಲಿಂಡರ್ ಸ್ಫೋಟ - ತಪ್ಪಿದ ಬಾರಿ ಅನಾಹುತ!!

ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೈರದೇನಹಳ್ಳಿ ಬಳಿ ಮುಂಜಾನೆ ಸಂಭವಿಸಿದ ಸಿಲಿಂಡರ್ ಸ್ಟೋಟ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪಾಕ್ಸಕಾನ್ ಕಂಪನಿಯ ಕಾರ್ಮಿಕರು ವಾಸಿಸುತ್ತಿದ್ದ ಶೆಡ್ಗಳಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರ್ಮಿಕರು ಆ ಸಮಯದಲ್ಲಿ ಶೆಡ್ಗಳಲ್ಲಿ ಇರಲಿಲ್ಲ. ಹಾಗಾಗಿ ಯಾವ ದುರ್ಘಟನೆ ನಡೆಯಲು ಅವಕಾಶ ಬಂದೊದಗಿಲ್ಲ. ಹೌದು ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಕ್ಕೆ ತೆರಳುವ ಮುನ್ನ ಅಡುಗೆ ಮಾಡಿಕೊಂಡು ಶೆಡ್ ಬಾಗಿಲು ಹಾಕಿಕೊಂಡು ಹೊರಟಿದ್ದರು. 

ಚಿಕ್ಕಬಳ್ಳಾಪುರದಲ್ಲಿ ಸಿಲಿಂಡರ್ ಸ್ಟೋಟ – ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸಿಲಿಂಡರ್ ಸ್ಟೋಟ – ತಪ್ಪಿದ ಭಾರಿ ಅನಾಹುತ

ಕೆಲವೇ ಗಂಟೆಗಳ ನಂತರ ಶೆಡ್ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು, ಶೆಡ್ಗಳನ್ನು ನಜ್ಜುಗುಜ್ಜು ಮಾಡಿತು. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನವರು ಬೆಚ್ಚಿಬಿದ್ದಿದ್ದಾರೆ. ಸ್ಫೋಟ ಸಂಭವಿಸಿದ ಸಮಯದಲ್ಲಿ ಶೆಡ್ಗಳಲ್ಲಿ ಯಾರೂ ಇರಲಿಲ್ಲ. ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ಜೀವಹಾನಿ ತಪ್ಪಿತು. “ಅದೇ ಸಮಯದಲ್ಲಿ ನಾವು ಒಳಗಿದ್ದರೆ ಏನಾಗುತ್ತಿತ್ತೋ?” ಎಂಬ ಆತಂಕವನ್ನು ಕಾರ್ಮಿಕರು ವ್ಯಕ್ತಪಡಿಸಿದ್ದಾರೆ. ಈ ಘಟನೆ, ಜೀವನದಲ್ಲಿ ಕ್ಷಣಾರ್ಧದಲ್ಲಿ ಏನಾದರೂ ಸಂಭವಿಸಬಹುದು ಎಂಬುದನ್ನು ನೆನಪಿಸಿದೆ.  

ಹೌದು ಸ್ಫೋಟದ ನಂತರ ಶೆಡ್ಗಳಲ್ಲಿ ಬಾರಿ ಅಗ್ನಿಯ ಬೆಂಕಿ ಕಾಣಿಸಿಕೊಂಡಿತು. ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ಅವರ ತ್ವರಿತ ಕಾರ್ಯಾಚರಣೆಯಿಂದ ಬೆಂಕಿ ಇನ್ನಷ್ಟು ವ್ಯಾಪಿಸುವುದನ್ನು ತಡೆಯಲಾಯಿತು. ಸ್ಥಳೀಯರು ಅಗ್ನಿಶಾಮಕ ದಳದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪಾಕ್ಸಕಾನ್ ಕಂಪನಿಯ ಕಾರ್ಮಿಕರು ಶೆಡ್ಗಳಲ್ಲಿ ವಾಸಿಸುತ್ತಿದ್ದರು. ತಮ್ಮ ಜೀವನೋಪಾಯಕ್ಕಾಗಿ ದೂರದ ಊರುಗಳಿಂದ ಬಂದಿದ್ದ ಈ ಕಾರ್ಮಿಕರು, ಈಗ ತಮ್ಮ ವಾಸಸ್ಥಳವೇ ನಜ್ಜುಗುಜ್ಜಾಗಿರುವುದನ್ನು ನೋಡಿ ದುಃಖಗೊಂಡಿದ್ದಾರೆ. “ನಮ್ಮ ಬದುಕು ಈಗ ಎಲ್ಲಿ ಸಾಗುತ್ತದೆ?” ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಮೂಡಿತಂತೆ.  

ಈ ಘಟನೆ ಕೇವಲ ಒಂದು ಸಿಲಿಂಡರ್ ಸ್ಫೋಟವಲ್ಲ, ಅದು ಸುರಕ್ಷತೆ ಮತ್ತು ಎಚ್ಚರಿಕೆಯ ಮಹತ್ವವನ್ನು ನೆನಪಿಸುವ ಪಾಠ. ಅಡುಗೆ ಮಾಡುವಾಗ, ಗ್ಯಾಸ್ ಸಿಲಿಂಡರ್ ಬಳಕೆಯ ವೇಳೆ ಎಚ್ಚರಿಕೆ ಅಗತ್ಯ. ಕಾರ್ಮಿಕರ ಬದುಕು, ಅವರ ಶ್ರಮ ಎಲ್ಲವನ್ನು ನೆನೆಪಿಸುತ್ತದೆ ಈ ಘಟನೆ, ಹಾಗೆ ಸುರಕ್ಷತೆ ಕೇವಲ ನಿಯಮವಲ್ಲ, ಅದು ಜೀವದ ಕವಚ ಎನ್ನುತ್ತಿದ್ದಾರೆ ಕಾರ್ಮಿಕರು. 

ಹೌದು ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಈ ಸಿಲಿಂಡರ್ ಸ್ಟೋಟ, ಅದೃಷ್ಟವಶಾತ್ ಜೀವಹಾನಿ ತಪ್ಪಿದರೂ, ಕಾರ್ಮಿಕರ ಬದುಕಿನಲ್ಲಿ ದೊಡ್ಡ ಆಘಾತ ಮೂಡಿಸಿತು ಎನ್ನಬಹುದು. ಶೆಡ್ಗಳಲ್ಲಿ ನಜ್ಜುಗುಜ್ಜಾದ ವಾಸಸ್ಥಳ, ಅವರ ಜೀವನದ ಅಸ್ಥಿರತೆಯನ್ನು ತೋರಿಸುತ್ತದೆ. ಈ ಘಟನೆ ಸಮಾಜಕ್ಕೆ ಪಾಠ ಆಗಿದ್ದು ಸುರಕ್ಷತೆ ಎಂದರೆ ಬದುಕಿನ ಮೂಲಭೂತ ಅವಶ್ಯಕತೆ ಎಂಬುದಾಗಿ ತೋರಿಸಿತು.  

Latest News