ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗುವ ಮುನ್ನವೇ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳಿಗೆ ಪ್ರಿ-ರಿಲೀಸ್ ಹಕ್ಕುಗಳ ಮೂಲಕವೇ ಕೋಟ್ಯಾಂತರ ರೂಪಾಯಿ ಗಳಿಕೆ ಆಗುತ್ತದೆ. ಆದರೆ 'ಟಾಕ್ಸಿಕ್' ಈ ಬಾರಿ ಎಲ್ಲರ ನಿರೀಕ್ಷೆಗೂ ಮೀರಿದ ಅಂದಾಜು ಬಿಸಿನೆಸ್ ಮಾಡಿದೆ.
ಆಂಧ್ರ–ತೆಲಂಗಾಣ ಪ್ರದೇಶದಲ್ಲಿ ಮಾತ್ರವೇ ಸುಮಾರು ₹120 ಕೋಟಿ ಅಂದಾಜು ಬಿಸಿನೆಸ್ ನಡೆದಿದೆ. ತಮಿಳುನಾಡಿನಲ್ಲಿ ₹100 ಕೋಟಿ, ಕೇರಳದಲ್ಲಿ ₹50–80 ಕೋಟಿ, ಹಿಂದಿ ಮಾರುಕಟ್ಟೆಯಲ್ಲಿ ₹300–350 ಕೋಟಿ, ಒವರ್ಸೀಸ್‌ನಲ್ಲಿ ₹100 ಕೋಟಿ, ಕನ್ನಡ ಮತ್ತು OTT ಹಕ್ಕುಗಳಲ್ಲಿ ₹300 ಕೋಟಿ ಅಂದಾಜು ಬಿಸಿನೆಸ್ ದಾಖಲಾಗಿದೆ.
ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ₹1020 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ ಎಂದು ವರದಿ ಮೂಲಕ ಕೇಳಿ ಬಂದಿದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಭಾರತೀಯ ಸಿನಿರಂಗಕ್ಕೆ ಹೊಸ ದಾಖಲೆ ಸ್ಥಾಪಿಸುವಂತಾಗಿದೆ. ಟ್ರೇಲರ್, ಟೀಸರ್ ಮತ್ತು ಪ್ರಚಾರ ಕಾರ್ಯಕ್ರಮಗಳು ಜನರಲ್ಲಿ ಭಾರೀ ಕುತೂಹಲ ಮೂಡಿಸಿವೆ. ವಿಶೇಷವಾಗಿ ಯಶ್ ಅವರ ರಾಕಿ ಭಾಯ್ ಪಾತ್ರದ ಕ್ರೇಜ್ ದೇಶದಾದ್ಯಂತ ಹೆಚ್ಚಾಗಿದೆ. ಟಾಕ್ಸಿಕ್ ಪ್ರಿ-ರಿಲೀಸ್ ಬಿಸಿನೆಸ್ ಈಗಾಗಲೇ 1000 ಕೋಟಿಗೂ ಹೆಚ್ಚು ತಲುಪಿರುವುದು, ಸಿನಿಮಾ ಬಿಡುಗಡೆಯಾದ ನಂತರ ಇನ್ನಷ್ಟು ದಾಖಲೆಗಳನ್ನು ಬರೆಯುವ ಸಾಧ್ಯತೆಯನ್ನು ಸೂಚಿಸುತ್ತದೆ. ಕನ್ನಡ ಸಿನಿಮಾಗಳಿಗೆ ಇದು ಹೆಮ್ಮೆ ತರಿಸುವ ಕ್ಷಣ. ನೀವು ಕೂಡ ಈ ಸಿನಿಮಾಗೆ ಹೆಚ್ಚು ಕಾಯುತ್ತಿದ್ದರೆ ಒಂದು ಮೆಚ್ಚುಗೆ ಇರಲಿ, ಧನ್ಯವಾದಗಳು.