Mar 4, 2026 Languages : ಕನ್ನಡ | English

ರಾಕಿ ಭಾಯ್ ಫ್ಯಾನ್ಸ್'ಗೆ ಗುಡ್ ನ್ಯೂಸ್ - ಇಷ್ಟರಲ್ಲೇ ಯೌಟ್ಯೂಬ್ ಗೆ ಅಪ್ಪಳಿಸಲಿದೆ ಫುಲ್ ಮಾಸ್ ಸಾಂಗ್!!

ಇಡೀ ಭಾರತೀಯ ಚಿತ್ರರಂಗವೇ ಯಾರ ಒಂದು ಸಿನಿಮಾದ ಅಪ್‌ಡೇಟ್‌ಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದೆಯೋ, 'ರಾಕಿ ಭಾಯ್' ಯಶ್ ಅವರ 'ಟಾಕ್ಸಿಕ್' ಅಖಾಡದಿಂದ ಈಗ ಅತಿದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ ಸರಣಿಯ ನಂತರ ಯಶ್ ಅವರ ಮುಂದಿನ ಹೆಜ್ಜೆ ಏನು ಎಂದು ಕುತೂಹಲದಲ್ಲಿದ್ದ ಅಭಿಮಾನಿಗಳಿಗೆ ಚಿತ್ರತಂಡ ಈಗ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಇಂಟ್ರಡಕ್ಷನ್ ಗ್ಲಿಂಪ್ಸ್ ಹಾಗೂ ಟೀಸರ್ ಇಂಟರ್ನೆಟ್‌ನಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಆ ಖಡಕ್ ಟೀಸರ್‌ನಲ್ಲಿ ಯಶ್ ಅವರ ಹೊಸ ಅವತಾರ, ಕೈಯಲ್ಲಿ ಗನ್ ಹಿಡಿದು ಬರುತ್ತಿದ್ದ ಆ ರಗಡ್ ಲುಕ್ ನೋಡಿ ಫ್ಯಾನ್ಸ್‌ಗಳು ಫಿದಾ ಆಗಿದ್ದರು.

ಕೆಜಿಎಫ್ ನಂತರ ‘ಟಾಕ್ಸಿಕ್’: ಅಭಿಮಾನಿಗಳಿಗೆ ಸಿಹಿ ಸುದ್ದಿ!!
ಕೆಜಿಎಫ್ ನಂತರ ‘ಟಾಕ್ಸಿಕ್’: ಅಭಿಮಾನಿಗಳಿಗೆ ಸಿಹಿ ಸುದ್ದಿ!!

 'ಎ ಟೇಲ್ ಫಾರ್ ಗ್ರೋನ್ ಅಪ್ಸ' ಎಂಬ ಟ್ಯಾಗ್‌ಲೈನ್‌ ಮೂಲಕವೇ ಈ ಸಿನಿಮಾ ಎಷ್ಟು ವೈಲೆಂಟ್ ಆಗಿರಲಿದೆ ಎಂಬ ಮುನ್ಸೂಚನೆಯನ್ನು ನಿರ್ದೇಶಕಿ ಗೀತು ಮೋಹನ್ ದಾಸ್ ನೀಡಿದ್ದರು. ಈಗ ಆ ಟೀಸರ್ ಸೃಷ್ಟಿಸಿದ್ದ ಸಂಚಲನದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಬಿಗ್ ಕಂಟೆಂಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಗಾಂಧಿನಗರದ ಮೂಲಗಳ ಪ್ರಕಾರ ಬರುವ ಫೆಬ್ರವರಿ 28ರಂದು ಟಾಕ್ಸಿಕ್ ಸಿನಿಮಾದ ಬಹುನಿರೀಕ್ಷಿತ ಮೊದಲ ಹಾಡು ಅಧಿಕೃತವಾಗಿ ಹೊರಬರಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಖ್ಯಾತ ಜೀ ಮ್ಯೂಸಿಕ್ ಸಂಸ್ಥೆಯು ದಾಖಲೆ ಮಟ್ಟದ ಕೋಟ್ಯಂತರ ರೂಪಾಯಿಗಳಿಗೆ ತನ್ನದಾಗಿಸಿಕೊಂಡಿತ್ತು. ಇದೀಗ ಅದೇ ಸಂಸ್ಥೆಯ ಮೂಲಕ ಮೊದಲ ಹಾಡು ಬಿಡುಗಡೆಯಾಗುತ್ತಿದ್ದು, ಇಡೀ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿರಲಿವೆ ಎಂಬ ಮಾಹಿತಿ ಸಿಕ್ಕಿದೆ. ವಿಶೇಷವೆಂದರೆ, ಮೊದಲ ಹಾಡೇ ಫುಲ್ ಮಾಸ್ ಮತ್ತು ಎನರ್ಜಿಟಿಕ್ ಡಾನ್ಸ್ ಆಗಿರಲಿದೆಯಂತೆ.

ಯಶ್ ಅವರ ಅದ್ಭುತ ಡಾನ್ಸ್ ಸ್ಟೆಪ್ಸ್‌ಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಫೆಬ್ರವರಿ 28ರಂದು ಹಬ್ಬದೂಟ ಸಿಗುವುದು ಗ್ಯಾರಂಟಿ. ಈ ಹಾಡು ಕೇವಲ ಹಾಡಾಗಿರದೆ, ಸಿನಿಮಾದ ರೇಂಜ್ ಏನೆಂಬುದನ್ನು ತೋರಿಸುವ ದೊಡ್ಡ ಮಟ್ಟದ ಮೇಕಿಂಗ್ ಹೊಂದಿರಲಿದೆ ಎಂದು ಎನ್ನಲಾಗುತ್ತಿದೆ. ಇನ್ನು ಸಿನಿಮಾದ ತಾರಾಗಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಈ ಚಿತ್ರದಲ್ಲಿ ಬರೀ ಯಶ್ ಒಬ್ಬರೇ ಅಲ್ಲ, ಅವರ ಜೊತೆ ಅಂತರಾಷ್ಟ್ರೀಯ ಮಟ್ಟದ ನಟಿಯರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಈ ಸಿನಿಮಾದಲ್ಲಿ ಯಶ್ ತಂಗಿಯ ಪಾತ್ರದಲ್ಲಿ ಅಥವಾ ಒಂದು ಶಕ್ತಿಶಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಅವರ ಜೊತೆಗೆ ಬಾಲಿವುಡ್‌ನ ಕ್ಯೂಟ್ ಬೆಡಗಿ ಕಿಯಾರಾ ಅಡ್ವಾಣಿ ಕೂಡ ನಾಯಕಿಯಾಗಿ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎನ್ನಲಾಗುತ್ತಿದೆ.

ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಅವರಂತಹ ದೊಡ್ಡ ನಟಿಯರು ಸಿನಿಮಾದಲ್ಲಿ ಇರುವುದು 'ಟಾಕ್ಸಿಕ್' ಚಿತ್ರದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕೆಜಿಎಫ್ ನಂತರ ಬರುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ಫೆಬ್ರವರಿ 28ರ ಆ ಮೊದಲ ಹಾಡು ಯೂಟ್ಯೂಬ್‌ನಲ್ಲಿ ದಾಖಲೆಗಳನ್ನು ಪುಡಿಪುಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳ ಬಹುದು. 

Latest News