ನಟ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿ ಒಂದು ಕಡೆ ಭಾರಿ ವಿವಾದ ಸೃಷ್ಠಿಯಾಗಿತ್ತು. ಹೌದು ಇದರ ನಡುವೆ ಇನ್ನೊಂದು ಕಡೆ ಸಿನಿಮಾ ತಾರೆಯರು ಯಶ್ ಅವರ ಪ್ರೋತ್ಸಾಹಕ್ಕೆ ನಿಂತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಲನಚಿತ್ರ ಲೋಕದಲ್ಲಿ ಇಬ್ಬರು ದಿಗ್ಗಜರು ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ಇತ್ತೀಚೆಗೆ ಅಭಿಮಾನಿಗಳ ಹೃದಯ ಗೆದ್ದಿರುವ ಕ್ಷಣವೊಂದು ಮತ್ತೆ ನಡೆದಿದೆ. ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾದ ನಂತರ, ಸುದೀಪ್ ತಮ್ಮ ಮೆಚ್ಚುಗೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಅವರು ಯಶ್ ಅವರ ಶೈಲಿ, ತೇಜಸ್ಸು ಮತ್ತು ಟೀಸರ್‌ನ ಭಾವನಾತ್ಮಕ ತೀವ್ರತೆಯನ್ನು ಹೊಗಳಿದರು.
ಟೀಸರ್ ರಿಲೀಸ್ ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ‘ಯಶ್ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ, ಎಂದು ಹಾದಿ ಹೊಗಳಿದ್ದರು. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದರು. ಈ ಟ್ವೀಟ್ಗೆ ನಟ ಯಶ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಯಶ್ ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿ, ‘ಧನ್ಯವಾದಗಳು ಸರ್, ನೀವು ನನ್ನ ಹಿರಿಯರು’ ಎಂದು ಹೇಳಿದ್ದಾರೆ. ಈ ಒಂದು ಸಾಲು ಅಭಿಮಾನಿಗಳ ಮನಸ್ಸಿನಲ್ಲಿ ದೊಡ್ಡ ಪ್ರಭಾವ ಬೀರಿತು ಜೊತೆಗೆ ಅಭಿಮಾನ ಹೆಚ್ಚಾಗಿದೆ ಎನ್ನಬಹುದು.
‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಯಶ್ ಅವರು ಉತ್ತರಿಸಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಕೆಲಕಾಲದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಈ ಹೃದಯಸ್ಪರ್ಶಿ ಮಾತುಗಳು, ಆ ವದಂತಿಗಳಿಗೆ ತೆರೆ ಬಿದ್ದಂತೆ ಮಾಡಿತು ಎನ್ನಬಹುದು. ನಟ ಯಶ್ ಮತ್ತು ಸುದೀಪ್ ಅವರ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿದೆ ಎಂಬುದನ್ನು ಅಭಿಮಾನಿಗಳು ಸಂತೋಷದಿಂದ ಗಮನಿಸಿದ್ದಾರೆ.
Bestest wshs... @TheNameIsYash
— Kichcha Sudeepa (@KicchaSudeep) January 8, 2026
It always takes a lot to go against the tide.
May this new step take u closer to the destiny ,, u have set ua eyes upon.
Cheers ♥️
Ķ https://t.co/2YZ8NU3KEF
ಕನ್ನಡ ಚಿತ್ರರಂಗದಲ್ಲಿ ಸ್ಪರ್ಧೆ ಇದ್ದರೂ ಕೂಡಾ, ಪರಸ್ಪರ ಗೌರವ, ಸ್ನೇಹ ಮತ್ತು ಒಗ್ಗಟ್ಟೇ ಮುಖ್ಯ ಎಂಬುದನ್ನು ಈ ಘಟನೆಯು ಮತ್ತೊಮ್ಮೆ ಅಭಿಮಾನಿಗಳ ಮುಂದೆ ಸಾಬೀತುಪಡಿಸಿದೆ. ನಟ ಯಶ್ ಮತ್ತು ಸುದೀಪ್ ಅವರ ಈ ಹೃದಯಸ್ಪರ್ಶಿ ಕ್ಷಣ, ಅಭಿಮಾನಿಗಳಿಗೆ ಪ್ರೇರಣೆಯಾಗಿದೆ. ಹೌದು ಒಟ್ಟಾರೆಯಾಗಿ ಹೇಳಬೇಕು ಅಂದರೆ, ಇದು ಕೇವಲ ಟೀಸರ್‌ಗಾಗಿ ಬಂದ ಮೆಚ್ಚುಗೆಯಲ್ಲ, ಕನ್ನಡ ಸಿನಿ ಲೋಕದ ಒಗ್ಗಟ್ಟಿನ ಸಂಕೇತವೂ ಆಗಿದೆ. ಟೀಸರ್ ಹೇಗಿದೆ ಎಂದು ನಿಮ್ಮನಿಸಿಕೆ ತಿಳಿಸಿ, ಹಾಗೆ ಕಿಚ್ಚ ಸುದೀಪ್ ಹಾಗೂ ಯಶ್ ಅವರ ಗೆಳೆತನ ಹೀಗೆಯೇ ಇರಲಿ ಎಂದು ಆಶಿಸಿ.