ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಬಗ್ಗೆ ಪ್ರತಿದಿನವೂ ಹೊಸ ಹೊಸ ಅಪ್ಡೇಟ್‌ಗಳು ಹೊರಬರುತ್ತಿವೆ. ಈಗ ಎಲ್ಲರ ಗಮನ ಸೆಳೆದಿರುವುದು 'ತಬಾಹಿ' ಎಂಬ ಮೊದಲ ಸಾಂಗ್. ಚಿತ್ರತಂಡದ ಮೂಲಗಳ ಪ್ರಕಾರ, ಈ ಹಾಡು ಕೇವಲ ಇಂಟ್ರೋ ಸಾಂಗ್ ಅಲ್ಲ, ಬದಲಿಗೆ ಸಿನಿಮಾದ ಟೋನ್ ಹಾಗೂ ಹೀರೋನ ಕ್ಯಾರಕ್ಟರ್ ಶೇಡ್‌ನ್ನು ಬಿಚ್ಚಿಡುವ ಪ್ರಮುಖ ಭಾಗವಾಗಿರಲಿದೆ ಎಂದು ಕೇಳಿ ಬಂದಿದೆ. 'ತಬಾಹಿ' ಎಂಬ ಟೈಟಲ್ ನೋಡಿದ್ರೆ ಸಾಕು, ಇದು ಸರಳ ಹಾಡಲ್ಲ, ಸ್ಕ್ರೀನ್ ಮೇಲೆ ಸುನಾಮಿ ತರಹ ಅಬ್ಬರಿಸೋ ಸಾಂಗ್ ಅನ್ನೋ ಸುಳಿವು ಸಿಗ್ತಾಯಿದೆ. ಹೌದು, ಈ ಹಾಡಿನಲ್ಲಿ ಯಶ್ ಅವರ ಹೊಸ ಲುಕ್ ರಿವೀಲ್ ಆಗಲಿದ್ದು, ಸ್ಟೈಲಿಷ್ ಹಾಗೂ ಡಾರ್ಕ್ ಅವತಾರದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಕೆಜಿಎಫ್ ಬಳಿಕ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲಕ್ಕೆ ಈ ಸಾಂಗ್ ಉತ್ತರ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನೊಂದು ವಿಶೇಷ ಎಂದರೆ ಬಾಲಿವುಡ್ ಖ್ಯಾತ ಸ್ಟಾರ್ ನಟಿ ಕಿಯಾರ ಅಡ್ವಾಣಿ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಾಯಿರೋದು ಎಂದು ಹೇಳಬಹುದು. 'ತಬಾಹಿ' ಹಾಡಿನಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ ಗ್ಲಾಮರಸ್ ಹಾಗೂ ಪವರ್‌ಫುಲ್ ಪ್ರೆಸೆನ್ಸ್ ನೀಡಲಿದ್ದಾರೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲಾ ಇವರಿಬ್ಬರ ಕೆಮಿಸ್ಟ್ರಿ ಹೇಗಿರುತ್ತೆ ಅನ್ನೋ ಕುತೂಹಲ ಕೂಡ ಎಲ್ಲಾ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರವನ್ನು ನಿರ್ದೇಶಿಸುತ್ತಿರುವ ಗೀತು ಮೋಹನ್ ದಾಸ್ ವಿಭಿನ್ನ ಕಥೆ ಮತ್ತು ಗಾಢ ತತ್ವಾಂಶಗಳೊಂದಿಗೆ ಟಾಕ್ಸಿಕ್ ಸಿದ್ಧವಾಗುತ್ತಿದ್ದು, ಆ್ಯಕ್ಷನ್, ಸ್ಟೈಲ್ ಮತ್ತು ಎಮೋಶನ್ ಮಿಕ್ಸ್ ಆಗಿರುವ ಸಿನಿಮಾ ಆಗಿರಲಿದೆ ಎಂದು ಸಿನಿ ವಲಯದಲ್ಲಿ ಚರ್ಚೆ ಜೋರಾಗಿದೆ.
ಪ್ಯಾನ್ ಇಂಡಿಯಾ ಲೆವೆಲ್ ರಿಲೀಸ್
ಹೌದು ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ. ವಿದೇಶದಲ್ಲೂ ದೊಡ್ಡ ಮಟ್ಟದ ರಿಲೀಸ್ ಪ್ಲ್ಯಾನ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಹೇಳಬೇಕು ಅಂದರೆ, 'ತಬಾಹಿ' ಸಾಂಗ್ ರಿಲೀಸ್ ಆದ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಖಚಿತ ಅನ್ನೋದು ಫ್ಯಾನ್ಸ್ ಮಾತು. ಯಶ್ ನ್ಯೂ ಲುಕ್ ಹೇಗಿರುತ್ತೆ ಕಿಯಾರಾ ಜೊತೆ ಯಾವ ರೀತಿಯ ಸ್ಕ್ರೀನ್ ಪ್ರೆಸೆನ್ಸ್ ಕೊಡುತ್ತಾರೆ ಟಾಕ್ಸಿಕ್ ನಿಜವಾಗಿಯೂ ಮೊದಲ ಸುನಾಮಿ ಆಗುತ್ತಾ ಎಂದು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು.