ಮದುವೆ ಸಮಾರಂಭದ ಸಂಭ್ರಮ ಮುಗಿದರೂ ಮುಗಿಯದ 'ವೈರೋಶ್' ಹವಾ!! ಕ್ಯೂಟ್ ವಿಡಿಯೋ ನೋಡಿ ಖುಷ್ ಆದ ಫ್ಯಾನ್ಸ್!!

ಹೈದರಾಬಾದ್‌ನ ಮದುವೆಯೊಂದರಲ್ಲಿ ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡು ಮಿಂಚಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ 'ವೈರೋಶ್' ಎಂದು ಕರೆಯುತ್ತಿದ್ದು, ಇಬ್ಬರೂ ಕೈ ಕೈ ಹಿಡಿದು ಮದುವೆ ಮಂಟಪಕ್ಕೆ ಬಂದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಸಾಂಪ್ರದಾಯಿಕ ಉಡುಪಿನಲ್ಲಿ ಈ ಜೋಡಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾರೆ. ಮದುವೆ ಸಮಾರಂಭ ಮುಗಿದಿದ್ದರೂ, ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಇನ್ನೂ ಮುಂದುವರಿದಿದೆ.

ವಿಜಯ್-ರಶ್ಮಿಕಾ ‘ವೈರೋಶ್’ ಮಿಂಚು!! | Photo Credit: https://x.com/telugufilmnagar
ವಿಜಯ್-ರಶ್ಮಿಕಾ ‘ವೈರೋಶ್’ ಮಿಂಚು!! | Photo Credit: https://x.com/telugufilmnagar

ಹೈದರಾಬಾದ್‌ನ ಖಾಸಗಿ ಸಮಾರಂಭವೊಂದರಲ್ಲಿ ಈ ತಾರಾ ಜೋಡಿ ಭಾಗವಹಿಸಿತ್ತು. ಮದುವೆಯ ಸಂಭ್ರಮದ ನಡುವೆ ವಿಜಯ್ ಮತ್ತು ರಶ್ಮಿಕಾ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನಗುನಗುತ್ತಾ ಹೆಜ್ಜೆ ಹಾಕಿದ್ದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಈ ಸಮಾರಂಭಕ್ಕೆ ಟಾಲಿವುಡ್‌ನ ಹಲವು ಗಣ್ಯರು ಆಗಮಿಸಿದ್ದರೂ, ಎಲ್ಲರ ಕಣ್ಣು ಈ 'ಪವರ್ ಕಪಲ್' ಮೇಲೆಯೇ ಇತ್ತು.

ಯಾವುದೇ ವಿಶೇಷ ಸಂದರ್ಭವಿರಲಿ, ವಿಜಯ್ ಮತ್ತು ರಶ್ಮಿಕಾ ತಮ್ಮ ಫ್ಯಾಶನ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸಮಾರಂಭಕ್ಕೆ ರಶ್ಮಿಕಾ ಅತ್ಯಂತ ಸುಂದರವಾದ ಲೇಟೆಸ್ಟ್ ಡಿಸೈನ್‌ನ ಸೀರೆಯನ್ನು ಉಟ್ಟು, ಅದಕ್ಕೆ ತಕ್ಕಂತೆ ಸರಳವಾದ ಆಭರಣಗಳನ್ನು ಧರಿಸಿದ್ದರು. ಅವರ ನಗು ಮತ್ತು ಸೌಂದರ್ಯ ನೆರೆದಿದ್ದವರ ಕಣ್ಮನ ಸೆಳೆಯುತ್ತಿತ್ತು. ವಿಜಯ್ ದೇವರಕೊಂಡ ಅವರು ಸಾಂಪ್ರದಾಯಿಕ ಕುರ್ತಾ ಮತ್ತು ಪೈಜಾಮಾದಲ್ಲಿ ವಿಜಯ್ ಅತ್ಯಂತ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದರು. ತಮ್ಮ ವಿಶಿಷ್ಟ ಶೈಲಿಯ ನಡಿಗೆ ಮತ್ತು ಗಾಂಭೀರ್ಯದಿಂದ ಎಲ್ಲರನ್ನೂ ಸೆಳೆದರು.

ವಿಜಯ್ ಮತ್ತು ರಶ್ಮಿಕಾ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ತೆರೆಯ ಮೇಲೆ ಅದ್ಭುತ ಕೆಮಿಸ್ಟ್ರಿ ಹಂಚಿಕೊಂಡಿದ್ದರು. ಅದಾದ ಬಳಿಕ ಇತ್ತೀಚಿಗೆ ಗ್ರಾಂಡ್ ಆಗಿ ವಿವಾಹ ಕೂಡ ಜರುಗಿತು. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹ ಸಮಾರಂಭವೊಂದು ಮುಗಿದಿರಬಹುದು, ಆದರೆ ಅಲ್ಲಿ ಅತಿಥಿಗಳಾಗಿ ಮಿಂಚಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜೋಡಿಯ ಬಗ್ಗೆ ಮಾತುಗಳು ಮಾತ್ರ ನಿಂತಿಲ್ಲ. ಮದುವೆ ಮುಗಿದು ದಿನಗಳಾದರೂ, ಇವರಿಬ್ಬರು ಕೈ ಕೈ ಹಿಡಿದು ನಡೆದ ಆ ಒಂದು ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಟ್ರೆಂಡಿಂಗ್‌ನಲ್ಲಿವೆ.

ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ #VIROSH ಎಂಬ ಹ್ಯಾಶ್‌ಟ್ಯಾಗ್ ಈಗಲೂ ಹೆಚ್ಚು ಚರ್ಚೆ ಆಗುತ್ತಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಹಾರೈಸುತ್ತಿದ್ದಾರೆ. ರಶ್ಮಿಕಾ ಸದ್ಯ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬಿಜಿಯಾಗಿದ್ದರೆ, ವಿಜಯ್ ಕೂಡ ತಮ್ಮ ಮುಂದಿನ ಚಿತ್ರಗಳ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಷ್ಟರ ನಡುವೆಯೂ ಸಮಯ ಮಾಡಿಕೊಂಡು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

Latest News