Jan 25, 2026 Languages : ಕನ್ನಡ | English

'ನಿಂಗವ್ವ ನಿಂಗವ್ವ' ಹಾಡು ಹಿಟ್ ಆಗಿದ್ದೆ ತಡ ಲ್ಯಾಂಡ್ ಲಾರ್ಡ್ ಚಿತ್ರತಂಡದಿಂದ ಬಂತು ಬಿಗ್ ಅಪ್ಡೇಟ್ಸ್!!

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ಲ್ಯಾಂಡ್ ಲಾರ್ಡ್' ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ. ವಿಶೇಷವಾಗಿ ಈ ಸಿನಿಮಾದ ಹಾಡು “ನಿಂಗವ್ವ ನಿಂಗವ್ವ” ನಿರೀಕ್ಷೆಗೂ ಮೀರಿ ದೊಡ್ಡ ಹಿಟ್ ಆಗಿ, ಇಂಪಾಗಿ ಹಾಡು ಕೇಳುಗರ ಮನ ಗೆದ್ದಿದೆ. ನಟ ದುನಿಯಾ ವಿಜಯ್ ಮತ್ತು ನಟಿ ರಚಿತಾ ರಾಮ್ ಅವರ ಜೋಡಿ ಈ ಹಾಡಿನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಬಹುದು. 

'ನಿಂಗವ್ವ ನಿಂಗವ್ವ' ಹಾಡು | Photo Credit: https://www.youtube.com/watch?v=Ldcr6MtX_Cs&list=RDLdcr6MtX_Cs&start_radio=1
'ನಿಂಗವ್ವ ನಿಂಗವ್ವ' ಹಾಡು | Photo Credit: https://www.youtube.com/watch?v=Ldcr6MtX_Cs&list=RDLdcr6MtX_Cs&start_radio=1

ಹೊಸ ರೋಮ್ಯಾಂಟಿಕ್ ಹಾಡಿನ ಸಿದ್ಧತೆ  

ಚಿತ್ರತಂಡ ಈಗ ಮತ್ತೊಂದು ಹೊಸ ಹಾಡಿನ ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ಹಾಡು ರೋಮಾಂಚಕ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ಮತ್ತು ನಟ ಶಿಶಿರ್ ಬೈಕಂಪಾಡಿ ನಡುವಿನ ಪ್ರೇಮ ಕಥೆಯನ್ನು ಚಿತ್ರಿಸಲಾಗಿದೆ. ಹಾಡಿನ ವೀಡಿಯೋದಲ್ಲಿ ಇಬ್ಬರ ನಡುವಿನ ಲವ್ ಟ್ರ್ಯಾಕ್, ರೊಮ್ಯಾಂಟಿಕ್ ಸನ್ನಿವೇಶಗಳು ಮತ್ತು ಮನಮೋಹಕ ದೃಶ್ಯಾವಳಿಗಳು ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿವೆ.

‘ನಿಂಗವ್ವ ನಿಂಗವ್ವ’ ಹಾಡಿನ ಯಶಸ್ಸು  

'ಲ್ಯಾಂಡ್ ಲಾರ್ಡ್' ಸಿನಿಮಾದ ಈ ಹಾಡು ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಮಾರ್ಪಾಡಾಗಿತ್ತು. ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅವರ ಸ್ಕ್ರೀನ್ ಪ್ರೆಸೆನ್ಸ್, ಹಾಡಿನ ಸಾಹಿತ್ಯ ಮತ್ತು ಸಂಗೀತ ಎಲ್ಲವೂ ಸೇರಿ ಹಾಡು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು. ಅಭಿಮಾನಿಗಳು ಈ ಹಾಡನ್ನು “ಲ್ಯಾಂಡ್ ಲಾರ್ಡ್” ಚಿತ್ರದ ಪ್ರಮುಖ ಆಕರ್ಷಣೆ ಎಂದು ಸಕತ್ ಖುಷಿಯಿಂದಲೇ ಕರೆಯುತ್ತಿದ್ದಾರೆ. 

ಹಾಡಿನ ವಿಶೇಷತೆಗಳು ಹೀಗಿವೆ 

ಚಿತ್ರದ ರೋಮಾಂಚಕ ಹಾಡು ಸಿನಿ ಪ್ರಿಯರಿಗೆ ಮತ್ತು ಯುವಜನತೆಗೆ ಹತ್ತಿರವಾಗುವಂತೆ ರಚನೆ ಮಾಡಲಾಗಿದೆ. ಸಂಗೀತದಲ್ಲಿ ಆಧುನಿಕ ತಾಳ ಮತ್ತು ಮಧುರವಾದ ಸಾಹಿತ್ಯವನ್ನು ಸೇರ್ಪಡೆ ಮಾಡಲಾಗಿದೆ. ಹೌದು ರಿತನ್ಯಾ ಶಿಶಿರ್ ಜೋಡಿ ಇದರಲ್ಲಿ ಕಾಣಿಸಿದ್ದು, ಹಾಡು ಹೊಸ ಫ್ರೆಶ್ ಲುಕ್ ನೀಡಲಿದೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ ಎನ್ನಬಹುದು. 

ಅಭಿಮಾನಿಗಳ ನಿರೀಕ್ಷೆ ನೋಡಿ 

“ನಿಂಗವ್ವ ನಿಂಗವ್ವ” ಹಾಡಿನ ಯಶಸ್ಸಿನ ನಂತರ, ಅಭಿಮಾನಿಗಳು ಈಗ “ರೋಮಾಂಚಕ” ಹಾಡಿನತ್ತ ಕಣ್ಣು ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಅಭಿಮಾನಿಗಳು “ಲ್ಯಾಂಡ್ ಲಾರ್ಡ್” ಚಿತ್ರದ ಆಡಿಯೋ ಆಲ್ಬಮ್ ಸಂಪೂರ್ಣವಾಗಿ ಹಿಟ್ ಆಗಲಿದೆ ಎಂದು ನಿರೀಕ್ಷೆ ಸಹ ಮಾಡುತ್ತಿದ್ದಾರೆ. 

ಇದು ಚಿತ್ರದ ಪ್ರಚಾರ ತಂತ್ರ ಎಂದ ನೆಟ್ಟಿಗರು 

ಹಾಡುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಪ್ರೇಕ್ಷಕರಲ್ಲಿ ಹಾಗೂ ದುನಿಯಾ ವಿಜಯ್ ಅವರ ಅಭಿಮಾನಿ ಬಳಗದಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಮೊದಲ ಹಾಡು ಸಕತ್ ಹಿಟ್ ಆಗಿದ್ದು, ಈ ಯಶಸ್ಸಿನ ನಡುವೆಯೇ ಚಿತ್ರದ ಪ್ರಚಾರಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಎರಡನೇ ಹಾಡಿನ ಮೂಲಕ ಚಿತ್ರತಂಡ ಮತ್ತಷ್ಟು ಜನರನ್ನು ಸೆಳೆಯುವ ಗುರಿ ಹೊಂದಿದೆಯಂತೆ. 'ಲ್ಯಾಂಡ್ ಲಾರ್ಡ್' ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದೆ. “ನಿಂಗವ್ವ ನಿಂಗವ್ವ” ಹಾಡಿನ ಯಶಸ್ಸಿನ ಬಳಿಕ, ‘ರೋಮಾಂಚಕ’ ಹಾಡು ಬಿಡುಗಡೆಯಾಗಲಿದ್ದು ದುನಿಯಾ ವಿಜಯ್ ಅವರ ಅಭಿಮಾನಿ ಬಳಗದಲ್ಲಿ ನಿರೀಕ್ಷೆ ಹುಟ್ಟಿಸಿರೋದಂತೂ ನಿಜ. ಅವರ ಅಭಿಮಾನಿಗಳಲ್ಲಿ ಈ ಮೂಲಕ ಹೊಸ ಉತ್ಸಾಹ ತಂದಿದೆ ಎನ್ನಬಹುದು. 

ದುನಿಯಾ ವಿಜಯ್ ಪುತ್ರಿ ರಿತನ್ಯಾ ಮತ್ತು ಶಿಶಿರ್ ಬೈಕಂಪಾಡಿ ಜೋಡಿ ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ಆಕರ್ಷಣೆಯಾಗಲಿದೆ. ಈ ವಾರ ಬಿಡುಗಡೆಯಾಗುವ ಈ ಹಾಡು, “ಲ್ಯಾಂಡ್ ಲಾರ್ಡ್” ಚಿತ್ರದ ಪ್ರಚಾರಕ್ಕೆ ಮತ್ತೊಂದು ದೊಡ್ಡ ಮೈಲಿಗಲ್ಲಾಗಲಿದೆ. ಈ ಸಿನಿಮಾದಿಂದ ಬಿಡುಗಡೆ ಆಗಿರುವ ನಿಂಗವ್ವ ಹಾಡಿನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.

Latest News