ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರ ನಿನ್ನೆಯಷ್ಟೇ ಭರ್ಜರಿಯಾಗಿ ಬಿಡುಗಡೆ ಆಗಿದೆ. ಸಿನಿಮಾ ಅದ್ಭುತವಾಗಿದೆ ಎನ್ನುವ ಸಿನಿಪ್ರಿಯರು, ಈ ಸಿನಿಮಾಗೂ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹೀಗಿರುವಾಗ ‘ಲ್ಯಾಂಡ್ ಲಾರ್ಡ್’ ಸಿನಿಮಾ ಚಿತ್ರಕ್ಕೆ ಜನಸಾಮಾನ್ಯರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ಕೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ವತಃ ಸಿನಿಮಾ ನೋಡಲು ಬಯಸಿದ್ದಾರೆ.
ಚಿತ್ರದ ನಾಯಕ ವಿಜಯ್, ಖುದ್ದು ಸಿಎಂ ಅವರನ್ನು ಭೇಟಿಯಾಗಿ ಸಿನಿಮಾಗೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, “ಇವತ್ತಿನ ಪರಿಸ್ಥಿತಿಯಲ್ಲಿ ಈ ಸಿನಿಮಾ ಅತ್ಯಂತ ಅವಶ್ಯಕ. ನಾನು ನೋಡೇ ನೋಡ್ತೀನಿ” ಎಂದು ಸ್ಪಷ್ಟವಾಗಿ ತಿಳಿಸಿದರು. ಅವರ ಮಾತುಗಳು ಚಿತ್ರ ತಂಡಕ್ಕೆ ಉತ್ಸಾಹ ತುಂಬಿದವು.
‘ಲ್ಯಾಂಡ್ ಲಾರ್ಡ್’ ಸಿನಿಮಾ ಶೋಷಣೆಗೊಳಗಾದವರ ಕಥೆ, ಹೋರಾಟದ ಕಥೆಯನ್ನು ಆಧರಿಸಿದೆ. ಸಮಾಜದಲ್ಲಿ ಅಸಮಾನತೆ, ಶೋಷಣೆ, ಹಕ್ಕುಗಳಿಗಾಗಿ ನಡೆದ ಹೋರಾಟಗಳನ್ನು ಚಿತ್ರವು ತೀವ್ರವಾಗಿ ಪ್ರತಿಬಿಂಬಿಸುತ್ತದೆ. ಸಿಎಂ ಸಿದ್ದರಾಮಯ್ಯ, “ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು. ಶೋಷಿತರ ಕಥೆ, ಹೋರಾಟದ ಕಥೆ ಜನರಿಗೆ ತಿಳಿಯಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪರವಾಗಿ ಸದಾ ನಿಂತಿರುವ ಸಿಎಂ ಸಿದ್ದರಾಮಯ್ಯ, ಇಂತಹ ಚಿತ್ರಗಳು ಜನರಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುತ್ತವೆ ಎಂದು ಹೇಳಿದರು. ಅವರ ಈ ಹೇಳಿಕೆ ಚಿತ್ರ ತಂಡಕ್ಕೆ ಮಾತ್ರವಲ್ಲ, ಪ್ರೇಕ್ಷಕರಿಗೂ ಪ್ರೇರಣೆ ನೀಡುವಂತಾಗಿದೆ. ಹೌದು ಚಿತ್ರದ ನಿರ್ದೇಶಕರು ಮತ್ತು ಕಲಾವಿದರು, ಸಿಎಂ ಅವರ ಬೆಂಬಲವನ್ನು ಸ್ವಾಗತಿಸಿ, ನಮ್ಮ ಸಿನಿಮಾ ಜನರ ಹೃದಯಕ್ಕೆ ತಲುಪಬೇಕು ಎಂಬುದಾಗಿ ತಿಳಿಸಿದ್ದಾರೆ. ಸಿಎಂ ಅವರ ಮಾತುಗಳು ನಮ್ಮ ಪ್ರಯತ್ನಕ್ಕೆ ದೊಡ್ಡ ಮಾನ್ಯತೆ ಎಂದು ಹೇಳಿದರು.
ಒಟ್ಟಾರೆ, ‘ಲ್ಯಾಂಡ್ ಲಾರ್ಡ್’ ಸಿನಿಮಾ ಕೇವಲ ಮನರಂಜನೆ ಅಲ್ಲ, ಸಮಾಜದ ಹೋರಾಟದ ಪ್ರತಿಬಿಂಬ. ಸಿಎಂ ಸಿದ್ದರಾಮಯ್ಯ ಅವರ ಆಸಕ್ತಿ ಮತ್ತು ಬೆಂಬಲದಿಂದ ಈ ಚಿತ್ರ ಇನ್ನಷ್ಟು ಜನರಿಗೆ ತಲುಪುವ ನಿರೀಕ್ಷೆ ಮೂಡಿಸಿತು.