Mar 14, 2026 Languages : ಕನ್ನಡ | English

ಮನೆಗೆ ಬಂದ ಗಿಲ್ಲಿನ ಪ್ರೀತಿಯಿಂದ ಸ್ವಾಗತಿಸಿದ ದುನಿಯಾ ವಿಜಯ್ - ಗಿಲ್ಲಿ ಭವಿಷ್ಯದ ಬಗ್ಗೆ ಮಾತಾಡಿದ ಕ್ಷಣ!!

ನಟ ದುನಿಯಾ ವಿಜಯ್, ಲ್ಯಾಂಡ್ ಲಾರ್ಡ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಸಿನಿಮಾ  ಸಾಮಾಜಿಕ ಅಸಮಾನತೆ ಮತ್ತೆ ಶೋಷಣೆ ವಿರುದ್ಧ ತಿರುಗಿ ಬೀಳುವ ಕಥೆಯಾಗಿದ್ದು, ಹಾಗಾಗಿ ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ ರವರು ಕೂಡ ಈ ಸಿನಿಮಾಗೆ ತೆರಿಗೆ ರಿಯಾಯಿತಿಯನ್ನ ನೀಡಿದ್ದಾರೆ. ಹಾಗೆಯೇ ಡಿಕೆಶಿ, ಸಿದ್ದರಾಮಯ್ಯ ಇನ್ನೂ ಗಣ್ಯಾತಿಗಣ್ಯರು ಈ ಸಿನಿಮಾಗೆ ಶುಭ ಹಾರೈಸಿದ್ದಾರೆ.. ಹೀಗೆ ಸ್ಯಾಂಡಲ್ವುಡ್ ನಲ್ಲಿ 'ಲ್ಯಾಂಡ್ ಲಾರ್ಡ್' ಸಿನಿಮಾಗೆ ನಟ - ನಟಿಯರು, ರಾಜಕಾರಣಿಗಳ ಸಪೋರ್ಟ್ ಸಿಗುತ್ತಿದೆ.. 

ದುನಿಯಾ ವಿಜಯ್ ಭೇಟಿಯ ವಿಶೇಷ ಕ್ಷಣ
ದುನಿಯಾ ವಿಜಯ್ ಭೇಟಿಯ ವಿಶೇಷ ಕ್ಷಣ

ಇದೀಗ ಕನ್ನಡ ಬಿಗ್ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ ದುನಿಯಾ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲಿದ್ದಾಗ ಜನರನ್ನು ರಂಜಿಸಿದ್ದರೂ, ಹಾಗೆಯೇ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ, ಮನೆಯಿಂದ ಆಚೆ ಬಂದಮೇಲಂತೂ ಅವರ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇನ್ನೂ ಈಗ ನಡೆಯುವ ಎಲ್ಲ ಕಾರ್ಯಕ್ರಮಕ್ಕೆ ಗಿಲ್ಲಿಯವರೇ ಮುಖ್ಯ ಅತಿಥಿಯಾಗಿದ್ದಾರೆ. ಅಷ್ಟೇಅಲ್ಲದೇ ಸಿನಿಮಾದ ಗಣ್ಯರು ಹಾಗೂ ರಾಜಕೀಯ ಗಣ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರೂ  ಇದೀಗ ನಟ ದುನಿಯಾ ವಿಜಯ್ ಅವರನ್ನು ಗಿಲ್ಲಿ ನಟ ಭೇಟಿಯಾಗಿರುವುದು ಕನ್ನಡ ಸಿನಿರಂಗದಲ್ಲಿ ವಿಶೇಷವಾದ ಕ್ಷಣವಾಗಿದೆ. 

ಜನಪ್ರಿಯ ನಟ ದುನಿಯಾ ವಿಜಯ್ ಅವರ 'ಲ್ಯಾಂಡ್ ಲಾರ್ಡ್' ಸಿನಿಮಾದ ಯಶಸ್ಸಿಗೆ ಗಿಲ್ಲಿ ನಟ ಸಹ ದುನಿಯಾ ವಿಜಯ್ ಅವರಿಗೂ  ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಗಿಲ್ಲಿ ನಟ, ತನ್ನ ಬಿಗ್ಬಾಸ್ ಗೆಲುವಿನ ನೆನಪನ್ನು ಹಂಚಿಕೊಂಡಾಗ, ದುನಿಯಾ ವಿಜಯ್ ಅವರು ಅದನ್ನು ಗೌರವಿಸಿ ಅಭಿನಂದಿಸಿದ್ದಾರೆ.ನೀನು ಮಾಡಿರುವ ಸಾಧನೆಯನ್ನ ನೋಡಿ ತುಂಬಾ ಖುಷಿಪಟ್ಟಿದ್ದೀನಿ, ನೀನು ಕನ್ನಡದ ಅಭಿಮಾನಿಗಳಿಗೆ ಹೆಮ್ಮೆ ತಂದಿದ್ದೀಯ, ಎಂದು ದುನಿಯಾ ವಿಜಯ್ ಹೇಳಿದರು. ಅದಕ್ಕೆ ಪ್ರತಿಯಾಗಿ ಗಿಲ್ಲಿ ನಟ, ನಿಮ್ಮಂತಹ ಹಿರಿಯರಿಂದ ಪ್ರೋತ್ಸಾಹ ಸಿಕ್ಕರೆ, ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಭೇಟಿಯು ಕೇವಲ ಇಬ್ಬರು ನಟರ ನಡುವಿನ ಮಾತುಕತೆಯಲ್ಲ, ಕನ್ನಡ ಸಿನಿರಂಗದ ಒಗ್ಗಟ್ಟನ್ನು ತೋರಿಸುತ್ತದೆ.   

ಒಟ್ಟಾರೆ, ಈ ಕ್ಷಣವು ಕನ್ನಡ ಸಿನಿರಂಗದ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವಂತೆ ಕಂಡಿತು. ದುನಿಯಾ ವಿಜಯ್ ಮತ್ತು ಗಿಲ್ಲಿ ನಟ ಇಬ್ಬರೂ ಒಟ್ಟಾಗಿ ಕನ್ನಡದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. 

Latest News